ಏರ್‌ಶೋದಲ್ಲಿ ಅಮೆರಿಕದ ದೊಡ್ಡ ನಿಯೋಗ ಭಾಗಿ

By Kannadaprabha News  |  First Published Feb 13, 2023, 10:29 AM IST

ಪ್ರಸಕ್ತ ಏರೋ ಇಂಡಿಯಾದಲ್ಲಿ ಅಮೆರಿಕದ ಅತಿ ದೊಡ್ಡ ನಿಯೋಗ ಪಾಲ್ಗೊಳ್ಳುತ್ತಿರುವುದು ಭಾರತ (India) ಮತ್ತು ಅಮೆರಿಕದ (US) ನಡುವಣ ರಾಜತಾಂತ್ರಿಕ ಸಂಬಂಧ ವೃದ್ಧಿ, ಭದ್ರತಾ ಸಹಕಾರ ಪರಿಣಾಮಕಾರಿ ಬೆಳವಣಿಗೆಯ ದ್ಯೋತಕ ಎಂದು ಅಮೆರಿಕದ ರಾಯಭಾರಿ ಪ್ರತಿನಿಧಿ ಎಲಿಜಬೆತ್‌ ಜೋನ್ಸ್‌ ಬಣ್ಣಿಸಿದ್ದಾರೆ. 


ಬೆಂಗಳೂರು: ಪ್ರಸಕ್ತ ಏರೋ ಇಂಡಿಯಾದಲ್ಲಿ ಅಮೆರಿಕದ ಅತಿ ದೊಡ್ಡ ನಿಯೋಗ ಪಾಲ್ಗೊಳ್ಳುತ್ತಿರುವುದು ಭಾರತ (India) ಮತ್ತು ಅಮೆರಿಕದ (US) ನಡುವಣ ರಾಜತಾಂತ್ರಿಕ ಸಂಬಂಧ ವೃದ್ಧಿ, ಭದ್ರತಾ ಸಹಕಾರ ಪರಿಣಾಮಕಾರಿ ಬೆಳವಣಿಗೆಯ ದ್ಯೋತಕ ಎಂದು ಅಮೆರಿಕದ ರಾಯಭಾರಿ ಪ್ರತಿನಿಧಿ ಎಲಿಜಬೆತ್‌ ಜೋನ್ಸ್‌ ಬಣ್ಣಿಸಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ರಾಷ್ಟ್ರಗಳು ಒಟ್ಟಾಗಿ ಹವಾಮಾನ ಬದಲಾವಣೆ, ಆರೋಗ್ಯ ಸುಧಾರಣೆ, ಸಾಂಕ್ರಾಮಿಕ ರೋಗ, ಸೈಬರ್‌ ಸುರಕ್ಷತಾ ಸವಾಲನ್ನು ಎದುರಿಸುವಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ. ಜತೆಗೆ ಅಗತ್ಯ ವಸ್ತುಗಳ ಪೂರೈಕೆ, ತಂತ್ರಜ್ಞಾನ ಹಸ್ತಾಂತರ, ಬಾಹ್ಯಾಕಾಶ ಉಪಗ್ರಹದ ಸೆಮಿಕಂಡಕ್ಟರ್‌ನಂಥ ಪರಿಕರಗಳ ಉತ್ಪಾದನೆ, ಪಾಲುದಾರಿಕೆ ವಿಚಾರದಲ್ಲಿ ಹೆಚ್ಚು ಸಹಕಾರಿಯಾಗಿವೆ ಎಂದು ತಿಳಿಸಿದರು.

ದೆಹಲಿ ರಾಯಭಾರ ಕಚೇರಿ ಹಿರಿಯ ರಕ್ಷಣಾಧಿಕಾರಿ ಮೈಕೆಲ್‌ ಬೇಕರ್‌, ರಕ್ಷಣಾ ವಿಚಾರದಲ್ಲಿ ಭಾರತ ಮತ್ತು ಅಮೆರಿಕದ ಸಂಬಂಧ ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠವಾಗಿವೆ. ಎಫ್‌-35 ಫೈಟರ್‌ ಜೆಟ್‌ ವ್ಯಾಪಾರ ಮಾಡುವ ವಿಚಾರದ ಮಾತುಕತೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tap to resize

Latest Videos

ಏರ್‌ ಶೋನಲ್ಲಿ ಎಫ್‌-16 ಯುದ್ಧ ವಿಮಾನ ಹಾರಾಟ

ಏರೋ ಇಂಡಿಯಾದಲ್ಲಿ ಎಫ್‌-16, ಎಫ್‌ಎ 18ಇ, ಎಫ್‌ಎ 18ಎಫ್‌ ಸೂಪರ್‌ ಹಾರ್ನೆಟ್‌ ಹಾರಾಡಲಿವೆ. ಅಮೆರಿಕ ನೌಕಾಪಡೆಯ ಮಲ್ಟಿರೋಲ್‌ ಸ್ಟ್ರೈಕ್ ಫೈಟರ್‌, ಜತೆಗೆ ಸಿವಿಡಬ್ಲ್ಯೂ-5 ಕ್ಯಾರಿಯರ್‌ ಏರ್‌ ವಿಂಗ್‌ ಸೇರಿ ಇನ್ನಿತರ ಯುದ್ಧ ವಿಮಾನಗಳು ಪ್ರದರ್ಶನ ನೀಡಲಿವೆ. ಯುಎಸ್‌ಎ ಪಾರ್ಟನರ್‌ಶಿಪ್‌ ಪೆವಿಲಿಯನ್‌ನ ಪ್ರದರ್ಶನದಲ್ಲಿ ಅಮೆರಿಕದ ಪ್ರಮುಖ ಸೇನಾ ಕಂಪನಿಗಳಾದ ಏರೋ ಮೆಟಲ್ಸ್‌ ಅಲಯನ್ಸ್‌, ಆಸ್ಟ್ರೋನಾಟಿಕ್ಸ್, ರ್ಪೋರೇಷನ್‌ ಆಫ್‌ ಅಮೆರಿಕ, ಬೋಯಿಂಗ್‌ ಜಿಇ ಏರೋಸ್ಪೇಸ್‌, ಜನರಲ್‌ ಅಟಾಮಿಕ್‌ ಏರೋನಾಟಿಕಲ್‌ ಸಿಸ್ಟಮ್ಸ್ ಇಂಕ್‌, ಹೈ ಟೆಕ್‌ ಇಂಪೋರ್ಟರ್‌ ಎಕ್ಸ್‌ಪೋರ್ಟ್ ಕಾರ್ಪೋರೇಷನ್‌, ಜೋನಲ್‌ ಲ್ಯಾಬೋರೆಟರೀಸ್‌, ಲಾಕ್‌ ಹೀಡ್‌ ಮಾರ್ಟಿನ್‌, ಪ್ರಾಟ್‌ ಆ್ಯಂಡ್‌ ವೈಟ್ಟೆ ಮತ್ತು ಟಿಡಬ್ಲ್ಯೂ ಮೆಟಲ್ಸ್‌ ವಿಮಾನಗಳು ಭಾಗಿಯಾಗಲಿವೆ.

click me!