ಕೇವಲ ಆಸ್ತಿ ಜಪ್ತಿಯಲ್ಲ, ಇಲ್ಲಿವೆ ಕೇಳರಿಯದ ಸತ್ಯ; KPSC ಮಾಜಿ ಅಧ್ಯಕ್ಷರ ಮನೆಯಲ್ಲಿ ಸಿಕ್ಕ 'ನೋಟ್‌ಬುಕ್' ರಹಸ್ಯವೇನು?

Published : Nov 15, 2026, 10:24 AM IST
KPSC Scam

ಸಾರಾಂಶ

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ₹1.22 ಕೋಟಿ ಆಸ್ತಿ ಜಪ್ತಿ ಮಾಡಿ 8,400 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ. ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮನೆಯಲ್ಲಿ ಸಿಕ್ಕ ಕೈಬರಹದ ನೋಟ್‌ಬುಕ್ ರಹಸ್ಯ ಮತ್ತು ಡೀಲ್‌ನ ಕೇಳರಿಯದ ಸತ್ಯಗಳು ಇಲ್ಲಿವೆ.

ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ನ ನಡೆಸಿದ ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎನಲ್ಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA),2002ರ ಅಡಿಯಲ್ಲಿ ಆರೋಪಿಗಳಿಗೆ ಸೇರಿದ ಸುಮಾರು ₹1.22 ಕೋಟಿ ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಪ್ರಮುಖ ಆರೋಪಿಗಳು!

ಈಗಾಗಲೇ ಶಿವಶಂಕರಪ್ಪ ಸಾಹುಕರ್ (ಮಾಜಿ KPSC ಅಧ್ಯಕ್ಷರು), ಗೀತಾ ಬಿ.ವಿ. ಶಿವಮೂರ್ತಿ (ಮಾಜಿ KPSC ಸದಸ್ಯೆ) ಜ್ಞಾನೇಂದ್ರ ಕುಮಾರ್ ಗಂಗವಾರ್ (IAS ಅಧಿಕಾರಿ ಹಾಗೂ ಅಂದಿನ ಪರೀಕ್ಷಾ ನಿಯಂತ್ರಕರು) ಈ ಮೂವರ ಸ್ಥರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಬಸವರಾಜ ಕನ್ನಾಳೆ ಎಂಬ ಮಧ್ಯವರ್ತಿ ಹಾಗೂ ಇತರೆ ಆರೋಪಿಗಳೊಂದಿಗೆ ಶಾಮೀಲಾಗಿ, ಹುದ್ದೆಗಳ ಖಚಿತ ಆಯ್ಕೆಗಾಗಿ ಅಭ್ಯರ್ಥಿಗಳಿಂದ ಅಕ್ರಮ ಹಣ ಪಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.

ಪ್ರಶ್ನೆಪತ್ರಿಕೆ ಸೋರಿಕೆ!

IAS ಅಧಿಕಾರಿ ಗಂಗವಾರ್ ಅವರು ಜನವರಿ 7, 2026 ರಂದು ಸರಿಯಾದ ಉತ್ತರಗಳಿರುವ ಪ್ರಶ್ನೆಪತ್ರಿಕೆಯನ್ನು ತಮ್ಮ ಆಪ್ತ ಬಸವರಾಜ ಕಣ್ಣಲೆಗೆ ಸೋರಿಕೆ ಮಾಡಿದ್ದರು. ಮಧ್ಯವರ್ತಿ ಕನ್ನಾಳೆ ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ (ಜನವರಿ 8) ಬೆಂಗಳೂರು ಹೊರವಲಯದ ವಿಲ್ಲಾಗಳಲ್ಲಿ 10 ಜನ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ತೋರಿಸಿದ್ದರು. ಇದಕ್ಕಾಗಿ ಪ್ರತಿ ಅಭ್ಯರ್ಥಿಯಿಂದ ₹20 ಲಕ್ಷದಿಂದ ₹40 ಲಕ್ಷ ವರೆಗೆ ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎನ್ನಲಾಗಿದೆ. ಹಣವನ್ನು ಮುಂಗಡವಾಗಿ ಹಾಗೂ ಕೆಲವರಿಂದ ಖಾಲಿ ಸಹಿ ಮಾಡಿದ ಚೆಕ್‌ಗಳು ಮತ್ತು ಪ್ರಾಮಿಸರಿ ನೋಟ್‌ಗಳ ಮೂಲಕ ಭದ್ರಪಡಿಸಿಕೊಳ್ಳಲಾಗಿತ್ತು ಎನ್ನುವುದು ಸಹ ಬೆಳಕಿಗೆ ಬಂದಿದೆ.

80 ಪ್ರಶ್ನೆಗಳ ಕರಡು ತಯಾರಿ!

ಮಾಜಿ ಅಧ್ಯಕ್ಷ ಸಾಹುಕರ್ ಸೂಚನೆಯಂತೆ, ಗಂಗವಾರ್ ಅವರು ತಮ್ಮ ವಶದಲ್ಲಿದ್ದ ಗೌಪ್ಯ ಆಸನ ವ್ಯವಸ್ಥೆ ಮತ್ತು ಜಂಬಲ್ಡ್ ಚಾರ್ಟ್‌ಗಳನ್ನು ಬಳಸಿ ಆರು ಮಂದಿ ಅಭ್ಯರ್ಥಿಗಳಿಗೆ 80 ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿದ್ಧಪಡಿಸಿಕೊಟ್ಟಿದ್ದರು ಎನ್ನುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ. ಗಂಗವಾರ್ ಅವರಿಗೆ KAS ಪರೀಕ್ಷೆಯಲ್ಲಿ ತಾವು ಸೂಚಿಸುವ ಅಭ್ಯರ್ಥಿಗೆ ಅನುಕೂಲಕರವಾದ ಸಂದರ್ಶನದ ಅಂಕ ಕೊಡಿಸುವುದಾಗಿ ಮಾಜಿ ಅಧ್ಯಕ್ಷರು ಭರವಸೆ ನೀಡಿದ್ದಾರೆ.

ಕೈಬರಹದ ನೋಟ್‌ಬುಕ್!

ಸಾಹುಕರ್ ಅವರ ಮನೆಯಲ್ಲಿ ನಡೆಸಿದ ಶೋಧದ ವೇಳೆ ಅಭ್ಯರ್ಥಿಗಳ ನೊಂದಣಿ ಸಂಖ್ಯೆಗಳಿದ್ದ ಕೈಬರಹದ ನೋಟ್‌ಬುಕ್ ಪತ್ತೆಯಾಗಿ ಜಪ್ತಿ ಮಾಡಲಾಗಿದೆ. ಈ ಅಕ್ರಮ ಹಣವನ್ನು ನಗದು ರೂಪದಲ್ಲಿ ಹಾಗೂ ಬೀದರ್‌ನ 'ಓಂ ಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘ ನಿಯಮಿತ' ಸೇರಿದಂತೆ ವಿವಿಧ ಬೋಗಸ್ ಉಳಿತಾಯ ಖಾತೆಗಳ ಮೂಲಕ ವರ್ಗಾಯಿಸಿ ಮುಚ್ಚಿಹಾಕಲು ಯತ್ನಿಸಲಾಗಿದೆ. ವಿಧಾನಸೌಧ ಪೊಲೀಸ್ ಠಾಣೆ ಹಾಗೂ ಕರ್ನಾಟಕ CID ದಾಖಲಿಸಿದ್ದ ಎಫ್‌ಐಆರ್‌ಗಳ ಆಧಾರದ ಮೇಲೆ ED ಈ ತನಿಖೆ ಕೈಗೊಂಡಿದೆ.

PREV
Read more Articles on
click me!

Recommended Stories

Bengaluru: ಸ್ಕೌಟ್ಸ್, ಗೈಡ್ಸ್, ಎನ್‌ಸಿಸಿ ಮಕ್ಕಳಿಗೆ ಬಿಲಾಂಗಿಂಗ್ ಪುಸ್ತಕ ವಿತರಣೆ
ರಾಜ್ಯದ ಕಾರ್ಮಿಕರಿಗೆ ಗುಡ್‌ನ್ಯೂಸ್: ಇನ್ನು ಫ್ಯಾಕ್ಟರಿ ಪಕ್ಕದಲ್ಲೇ ಸೂರು, ನೌಕರರಿಗೆ ತಪ್ಪಲಿದೆ ನಿತ್ಯ ಓಡಾಟ, ಹೊಸ ಶ್ರಮಿಕ್ ನೀತಿ ಜಾರಿ!