ಬೆಂಗಳೂರಿನ ನಂದನ ಪ್ಯಾಲೇಸ್‌ ಹೋಟೆಲ್‌ನಿಂದ ಸಿಬ್ಬಂದಿಗೆ 15 ಕಾರ್, 22 ಬೈಕ್ ಗಿಫ್ಟ್‌

Published : Nov 15, 2026, 07:07 AM IST
Nandhan Palace

ಸಾರಾಂಶ

ಬೆಂಗಳೂರಿನ ಪ್ರಖ್ಯಾತ ನಂದನ ಪ್ಯಾಲೇಸ್ ಹೋಟೆಲ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ 15 ಕಾರು ಮತ್ತು 22 ಬೈಕ್‌ಗಳನ್ನು ಉಡುಗೊರೆಯಾಗಿ ನೀಡಲಾಯಿತು. ನಟ ರಮೇಶ್ ಅರವಿಂದ್ ಮತ್ತು ಸಿಎಂಡಿ ಡಾ.ಆರ್.ರವಿಚಂದರ್ ವಾಹನಗಳನ್ನು ವಿತರಿಸಿದರು.

ಬೆಂಗಳೂರು: ನಗರದ ಪ್ರಖ್ಯಾತ‘ನಂದನ ಪ್ಯಾಲೇಸ್’ ಹೋಟೆಲ್‌ನಲ್ಲಿ ಉತ್ತಮವಾಗಿ ಕರ್ತವ್ಯ ಪಾಲನೆ ಮಾಡಿದ ವಿವಿಧ ಹಂತದ ಕಾರ್ಮಿಕರಿಗೆ ಕಾರು ಮತ್ತು ಬೈಕ್‌ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಸಂಭ್ರಮಿಸಲಾಯಿತು.

ಕೋರಮಂಗಲದ ಸೇಂಟ್ ಜಾನ್ ಸಭಾಂಗಣದಲ್ಲಿ ನಡೆದ ‘ಮಹಾತ್ರಿಯಾ’ ಅವರು ಪ್ರತಿಪಾದಿಸಿದ ‘ಇನ್ಫಿನಿಥಿಸಂ’ ತತ್ವದ ಸ್ಮರಣಾರ್ಥ ಹಾಗೂ ನಂದನ ಅಚಿವರ್ಸ್ ಡೇ ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್ ಮತ್ತು ನಂದನ ಪ್ಯಾಲೇಸ್‌ನ ಸಿಎಂಡಿ ಡಾ.ಆರ್.ರವಿಚಂದರ್ ಕಾರ್ಮಿಕರಿಗೆ ವಾಹನಗಳನ್ನು ಊಡುಗೊರೆಯಾಗಿ ನೀಡಿದರು.

15 ಕಾರು ಮತ್ತು 22 ಬೈಕ್‌ ಗಿಫ್ಟ್

ಹೋಟೆಲ್ ಉದ್ಯಮ ಆರಂಭಿಸಿದ ದಿನಗಳಿಂದ ಜೊತೆಯಲ್ಲಿರುವ, ಉತ್ತಮವಾಗಿ ಕರ್ತವ್ಯ ಪಾಲನೆ ಮಾಡಿದ ಚೆಫ್, ಸಪ್ಲೈಯರ್, ಚಾಲಕ, ಸೂಪರ್ ವೈಸರ್ , ಜನರಲ್ ಮ್ಯಾನೇಜರ್, ಮ್ಯಾನೇಜರ್ ಸೇರಿದಂತೆ ವಿವಿಧ ಹಂತದ ಕಾರ್ಮಿಕರನ್ನು ಗುರುತಿಸಿ 15 ಕಾರು ಮತ್ತು 22 ಬೈಕ್‌ಗಳನ್ನು ನೀಡಿದ್ದು ಇದರ ಮೊತ್ತ ಕೋಟಿ ರು.ಗೂ ಅಧಿಕವಾಗಿದೆ.

ಈ ವೇಳೆ ನಟ ರಮೇಶ್ ಅರವಿಂದ್ ಮಾತನಾಡಿ, ನಂದನ ಎಂದರೆ ಖುಷಿಯನ್ನು ಹಂಚುವವರು. ಊಟ ಮಾಡಿದಾಗ ಜನರಿಗೆ ತೃಪ್ತಿಯಾಗಬೇಕು. ಇಲ್ಲಿ ಬರುವ ಗ್ರಾಹಕರಿಗೆ ಸಂತೃಪ್ತಿ ಸಿಗಲಿದೆ. ‘ಮನತಿಲ್ ಉರುತಿ ವೆಂಡುಮ್‌’ ನನ್ನ ಮೊದಲ ತಮಿಳು ಚಿತ್ರ. ಈ ಚಿತ್ರ ನೋಡಿ ಸ್ಫೂರ್ತಿ ಪಡೆದು ಇಷ್ಟು ದೊಡ್ಡ ಉದ್ಯಮ ಕಟ್ಟಿರುವುದು ನಿಜಕ್ಕೂ ದೊಡ್ಡ ಸಾಧನೆಯಾಗಿದೆ. ಕಾರ್ಮಿಕರ ಕೆಲಸವನ್ನು ಗುರುತಿಸಿ ಊಡುಗೊರೆ ನೀಡುವುದು ಬದ್ಧತೆಯನ್ನು ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಗೀತ ಮೊಬೈಲ್ಸ್ ಎಂಡಿ ಸುಭಾಷ್ ಚಂದ್ರ, ಎಸ್.ಆರ್.ಆರ್. ಫುಡ್ಸ್ ಇಂಡಿಯಾದ ನಿರ್ದೇಶಕಿ ರಮ್ಯ, ಲಸಾರಾ ಹೋಟೆಲ್ಸ್‌ನ ನಿರ್ದೇಶಕಿ ರವಿನಾ, ಉದ್ಯಮಿ ಪ್ರಕಾಶ್ ರಾಜು ಮತ್ತಿತರರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಬೆಂಗಳೂರು ಮೆಟ್ರೋ ನಿರ್ಮಾಣದಲ್ಲಿ ರಾಜ್ಯದ ಗ್ರಾನೈಟ್ ಕಲ್ಲುಗಳು: ಡಿಕೆ ಶಿವಕುಮಾರ್!
ನಮ್ಮ ಮೆಟ್ರೋ Yellow Line ಪ್ರಯಾಣಿಕರಿಗೆ ಗುಡ್‌ನ್ಯೂಸ್: ನ.16ರಿಂದ ಹೆಚ್ಚುವರಿ ರೈಲು ಸೇರ್ಪಡೆ, ಇನ್ನು ಪ್ರತಿ 5.5 ನಿಮಿಷಕ್ಕೊಮ್ಮೆ ರೈಲು