Bengaluru: ಸ್ಟಿಂಗ್ ಕೇಸ್, ಕೃಪಾ ಆಳ್ವಾ ಉಚ್ಚಾಟನೆಗೆ ಕಾರಣ ಕೊಟ್ಟ ಬಿ.ಕೆ. ಹರಿಪ್ರಸಾದ್‌

Published : Nov 01, 2026, 10:06 AM IST
BK Hariprasad

ಸಾರಾಂಶ

ಸ್ಟಿಂಗ್ ಆಪರೇಷನ್ ಷಡ್ಯಂತ್ರದ ಹಿನ್ನೆಲೆಯಲ್ಲಿ ನೋಟಿಸ್‌ಗೆ ಉತ್ತರಿಸದ ಕೃಪಾ ಆಳ್ವ ಅವರನ್ನು ಕಾಂಗ್ರೆಸ್ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಮತ್ತೊಂದೆಡೆ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಮೂಲ ವಿಡಿಯೋ ಪತ್ತೆಗೆ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಬೆಂಗಳೂರು: ಸ್ಟಿಂಗ್‌ ಆಪರೇಷನ್‌ ಷಡ್ಯಂತ್ರದ ಅಹಿತಕರ ಸುದ್ದಿಯಿಂದ ಪಕ್ಷದ ನಾಯಕರಿಗೆ ಮುಜುಗರ ಉಂಟು ಮಾಡಿತ್ತು. ಈ ಬಗ್ಗೆ ನೋಟಿಸ್ ನೀಡಿದ್ದರೂ ಸ್ಪಷ್ಟನೆ ನೀಡದ ಹಿನ್ನೆಲೆಯಲ್ಲಿ ಕೃಪಾ ಆಳ್ವ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಸಮರ್ಥಿಸಿಕೊಂಡಿದ್ದಾರೆ.

ಸ್ಟಿಂಗ್‌ ಷಡ್ಯಂತ್ರದಿಂದ ನಾಯಕರಿಗೆ ಮುಜುಗರ

ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್, ಪಕ್ಷದ ನಾಯಕರಿಗೆ ಮುಜುಗರ ಉಂಟುಮಾಡುವ ಕೆಲವು ಕೃತ್ಯಗಳ ಬಗ್ಗೆ ವರದಿಯಾಗಿತ್ತು. ಈ ಬಗ್ಗೆ ಮೂರು ದಿನಗಳ ಒಳಗಾಗಿ ವಿವರಣೆ ನೀಡುವಂತೆ ಪಕ್ಷವು ಆಳ್ವ ಅವರನ್ನು ಕೇಳಿತ್ತು. ಆದರೆ, ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಲ್ಲದೆ ನೋಟಿಸ್ ತಲುಪದೆ ವಾಪಸ್ ಬಂದಿದೆ ಎಂದು ತಿಳಿಸಿದರು.

ಸಂಬಂಧಪಟ್ಟ ವ್ಯಕ್ತಿಯಿಂದ ವಿವರಣೆ ಪಡೆಯದೆ ನಾವು ಯಾವುದೇ ಅವಸರದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ತಮ್ಮ ಕಡೆಯ ವಾದ ಮಂಡಿಸಲು ಅವಕಾಶವಿರಬೇಕು. ಅವರು ಪ್ರತಿಕ್ರಿಯಿಸದ ಕಾರಣ, ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲು ನಾವು ನಿರ್ಧರಿಸಿದೆವು. ನೋಟಿಸ್ ಆಳ್ವ ಅವರಿಗೆ ತಲುಪಿಲ್ಲವಾದರೂ ಶಿಸ್ತು ಕ್ರಮಕೈಗೊಳ್ಳುವುದನ್ನು ಬಿಟ್ಟು ಪಕ್ಷಕ್ಕೆ ಬೇರೆ ದಾರಿಯಿರಲಿಲ್ಲ ಎಂದರು.

ಕೃಪಾ ಅವರು ವಿದೇಶಕ್ಕೆ ತೆರಳಿರುವ ಬಗ್ಗೆ ಪ್ರತಿಕ್ರಿಯಿಸಿ, ಆ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಡಲಾಗಿದೆ. ಕೃಪಾ ಆಳ್ವ ವಿರುದ್ಧ ನೇರ ಸಾಕ್ಷ್ಯಗಳಿವೆ. ಅದಕ್ಕಾಗಿಯೇ ನಾವು ಅವರನ್ನು ಉಚ್ಚಾಟಿಸಿದ್ದೇವೆ. ಆಳ್ವ ವಿದೇಶಕ್ಕೆ ಪ್ರಯಾಣಿಸಿದ್ದಾರೆ ಎಂಬ ವಿಚಾರವನ್ನು ಗುಪ್ತಚರ ಇಲಾಖೆ (ಐಬಿ) ಮತ್ತು ಸಿಬಿಐ ಪರಿಶೀಲಿಸುತ್ತದೆ. ಅದನ್ನು ಮಹಾ ಮಾನವನಿಗೆ ಬಿಟ್ಟಿದ್ದೇವೆ ಎಂದು ಹರಿಪ್ರಸಾದ್ ಹೇಳಿದರು.

ಬಿಜೆಪಿ ನಾಯಕರ ಕ್ಷೇತ್ರದಲ್ಲೇ ಬಿಜೆಪಿ ಸೋತಿದೆ

ನಾಗಪುರದಲ್ಲಿ ವಿಷ ಕಾರುತ್ತಿದ್ದ ಸಂಘಟನೆ ಕುತ್ತಿಗೆಗೆ ಕೈ ಹಾಕಿ ಹಿಡಿದಿದ್ದೇವೆ. ನಾಗಪುರದಲ್ಲೇ ಬಿಜೆಪಿ ಸೋಲು ಕಂಡಿದೆ. ಮಹಾಮಾನವನ ವಾರಾಣಸಿ, ಬಿಹಾರ ಬಿಜೆಪಿ ಅಧ್ಯಕ್ಷನ ಕ್ಷೇತ್ರ, ಗಡ್ಕರಿ ಕ್ಷೇತ್ರ, ಯೋಗಿ ಕ್ಷೇತ್ರದಲ್ಲೂ ಬಿಜೆಪಿ ಸೋತಿದೆ. ಹೀಗಾಗಿ ಬಿಜೆಪಿಯ ಪತನ ಶುರುವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್‌ ಹೇಳಿದರು.

ಸ್ಟಿಂಗ್‌ನ ಮೂಲ ವಿಡಿಯೋ ಪತ್ತೆಗೆ ಸೈಬರ್‌ ಕ್ರೈಂ ಪೊಲೀಸರಿಂದ ತನಿಖೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಕರಣದ ಮೂಲ ವಿಡಿಯೋ ಪತ್ತೆಗೆ ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಸಂಬಂಧ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. 2011 ಹಾಗೂ 2023ರಲ್ಲಿ ಕೃತ್ಯ ನಡೆದಿದೆ ಎಂಬ ಮಾತುಗಳಿವೆ. ಆದರೆ ಸ್ಟಿಂಗ್ ಆಪರೇಷನ್‌ನ ಮೂಲ ವಿಡಿಯೋ ಪತ್ತೆಯಾದರೆ ನಿಖರವಾಗಿ ಯಾವಾಗ ನಡೆದಿದೆ ಎಂಬುದು ಗೊತ್ತಾಗಲಿದೆ. ಹೀಗಾಗಿ ಮೂಲ ವಿಡಿಯೋ ಪತ್ತೆಗೆ ತನಿಖೆ ನಡೆದಿದೆ ಎಂದು ಹೇಳಿದರು. ಈಗಾಗಲೇ ಪ್ರಕರಣ ಸಂಬಂಧ ಹಲವರನ್ನು ವಿಚಾರಣೆ ನಡೆಸಲಾಗಿದೆ. ದೆಹಲಿ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ವಿಡಿಯೋ ಅಪ್ ಲೋಡ್ ಹಿಂದಿರುವ ಕಾರಣದ ಬಗ್ಗೆ ತನಿಖೆ ನಡೆದಿದೆ ಎಂದು ಅವರು ತಿಳಿಸಿದರು.

PREV
Read more Articles on
click me!

Recommended Stories

ಸರ್ಕಾರದ ‘ವಾರ್ಡ್ ಒನ್‌’ ಅಭಿಯಾನ ಕೇವಲ ಕಾಟಾಚಾರ: ಅಧಿಕಾರಿಗಳ ಗೈರಿಗೆ ಶಾಸಕ ಎಸ್. ಮುನಿರಾಜು ಗರಂ!
ಬೆಂಗಳೂರಿಗೆ ನಿತ್ಯ 10 ಸಾವಿರ ವಲಸಿಗರ ಲಗ್ಗೆ: ಕನ್ನಡಿಗರೇ ಅಲ್ಪಸಂಖ್ಯಾತರಾಗಿ ಹಿಂದಿ ಮಾತನಾಡಬೇಕಿದೆ!