ಜಗನ್‌ ಹಠಕ್ಕೆ ಮಣಿದ ಶರ್ಮಿಳಾ; ಯಲಹಂಕ ಪ್ಯಾಲೇಸ್‌ನಲ್ಲಿ ಇಲ್ಲYSR ಮೊಮ್ಮಗಳ ಮದುವೆ!

Published : Nov 01, 2026, 07:07 AM IST
Jagan Mohna Reddy YS Sharmila

ಸಾರಾಂಶ

ಆಂಧ್ರದ ಮಾಜಿ ಸಿಎಂ ಜಗನ್‌ ಹಾಗೂ ಅವರ ಸೋದರಿ ಶರ್ಮಿಳಾ ನಡುವೆ ಯಲಹಂಕ ಪ್ಯಾಲೇಸ್‌ನಲ್ಲಿ ವಿವಾಹ ಆಯೋಜನೆ ಕುರಿತು ವಿವಾದ ಏರ್ಪಟ್ಟಿದೆ. ಜಗನ್ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶರ್ಮಿಳಾ ತಮ್ಮ ಪುತ್ರಿಯ ವಿವಾಹವನ್ನು ಬೇರೆಡೆ ನಡೆಸಲು ನಿರ್ಧರಿಸಿದ್ದಾರೆ. ಯಲಹಂಕದ ಪ್ಯಾಲೇಸ್‌ ಶೇ.100ರಷ್ಟು ತಮಗೇ ಸೇರಿದ್ದು ಎಂದು ಶರ್ಮಿಳಾ ಪ್ರತಿಪಾದಿಸಿದ್ದಾರೆ.

ಬೆಂಗಳೂರು: ಬೆಂಗಳೂರಿನ ಯಲಹಂಕ ಪ್ಯಾಲೇಸ್‌ನಲ್ಲಿ ವಿವಾಹ ಆಯೋಜನೆ ಕುರಿತು ಆಂಧ್ರದ ಮಾಜಿ ಸಿಎಂ ಜಗನ್‌ ಹಾಗೂ ಅವರ ಸೋದರಿ ಶರ್ಮಿಳಾ ನಡುವೆ ಕಿತ್ತಾಟ ನಡೆಯುತ್ತಿರುವ ಬಗ್ಗೆ ‘ಕನ್ನಡಪ್ರಭ’ ಅ.25ರಂದೇ ವರದಿ ಮಾಡಿತ್ತು.

ಅಮರಾವತಿ: ಆಂಧ್ರದ ಕಾಂಗ್ರೆಸ್‌ ಮುಖ್ಯಸ್ಥೆ ವೈ.ಎಸ್‌.ಶರ್ಮಿಳಾ ಅವರ ಪುತ್ರಿಯ ವಿವಾಹವನ್ನು ಬೆಂಗಳೂರಿನ ಯಲಹಂಕದಲ್ಲಿರುವ ಪ್ಯಾಲೇಸ್‌ನ ಬದಲು ಬೇರೆಡೆ ನಡೆಸಲು ನಿರ್ಧರಿಸಲಾಗಿದೆ. ಇಬ್ಬರ ಹೆಸರಲ್ಲೂ ಇರುವ ಈ ಮನೆಯಲ್ಲಿ ಮದುವೆಗೆ ಜಗನ್‌ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮದುವೆ ಸ್ಥಳ ಬದಲಾಯಿಸಿದ್ದು ಏಕೆ?

ಭದ್ರತೆಯ ಕಾರಣ ನೀಡಿ ಯಲಹಂಕ ಪ್ಯಾಲೇಸ್‌ನಲ್ಲಿ ಸೋದರಿಯ ಪುತ್ರಿ ಅಂಜಲಿ ಮದುವೆಗೆ ಅನುಮತಿ ನೀಡಲು ಜಗನ್‌ ನಿರಾಕರಿಸಿದ್ದರು. ಇದರ ಬೆನ್ನಲ್ಲೇ ಇದೀಗ ತಮ್ಮ ಪುತ್ರಿ ಮತ್ತು ರಘುರಾಮ್‌ ರೆಡ್ಡಿ ಅವರ ವಿವಾಹವನ್ನು ವಿವಾದಗಳಿಂದ ದೂರವಿಡುವ ಉದ್ದೇಶದಿಂದ ಬೇರೆ ಸ್ಥಳದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಶರ್ಮಿಳಾ ರೆಡ್ಡಿ ತಿಳಿಸಿದ್ದಾರೆ. ಆದರೆ ಬೆಂಗಳೂರಿನಲ್ಲಿ ಯಾವ ಪ್ರದೇಶ, ಯಾವ ಕಲ್ಯಾಣ ಮಂಟಪ ಎಂದು ಅವರು ಹೇಳಿಲ್ಲ.

ಪ್ಯಾಲೇಸ್‌ ಶೇ.100ರಷ್ಟು ನನಗೆ ಸೇರಿದ್ದು!

ಯಲಹಂಕದ ಪ್ಯಾಲೇಸ್‌ ನಮ್ಮ ತಂದೆ ವಾಸಿಸುತ್ತಿದ್ದ ಮನೆ. ನಮ್ಮ ಮಕ್ಕಳೂ ಅಲ್ಲೇ ಬೆಳೆದಿದ್ದು. ಹೀಗಾಗಿ ಅಲ್ಲೇ ಸಂಪ್ರದಾಯದಂತೆ ಮದುವೆ ಆಗಬೇಕು ಎಂಬುದು ಮಗಳ ಆಸೆಯಾಗಿತ್ತು. ಆದರೆ ಅದಕ್ಕೆ ಅಡ್ಡಿ ಮಾಡಲಾಗಿದೆ. ಹೀಗಾಗಿ ತೊಂದರೆ ಇಲ್ಲದೆ ಮದುವೆ ನಡೆಯಲಿ ಎನ್ನುವ ಕಾರಣಕ್ಕೆ ಬೇರೆ ಪ್ರದೇಶದಲ್ಲಿ ಮದುವೆ ಆಯೋಜಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಯಲಹಂಕದ ಪ್ಯಾಲೇಸ್‌ ಶೇ.100ರಷ್ಟು ತಮಗೇ ಸೇರಿದ್ದು ಎಂದು ಅವರು ಪ್ರತಿಪಾದಿಸಿದ್ದಾರೆ.

ಯಲಹಂಕದ ಪ್ಯಾಲೇಸ್‌ನಲ್ಲಿ ತಮ್ಮ ಪುತ್ರಿಯ ವಿವಾಹಕ್ಕೆ ಅ‍ವಕಾಶ ನಿರಾಕರಿಸಿರುವ ಜಗನ್ಮೋಹನ ರೆಡ್ಡಿ ಅ‍ವರ ನಡೆಗೆ ಶರ್ಮಿಳಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸ್ವತಃ ಅಂಜಲಿ ರೆಡ್ಡಿ ಅ‍ವರು ಜಗನ್ಮೋಹನ ರೆಡ್ಡಿ ಅವರನ್ನು ಕಂಸ ಮಾಮ ಎಂದು ಕರೆದಿದ್ದರು.

PREV
Read more Articles on
click me!

Recommended Stories

HMT ಇತಿಹಾಸಕ್ಕೆ ಹೊಸ ಕಳೆ; ವಾಚ್‌ಗೆ ನಾಡಿನ ಅಸ್ಮಿತೆ 'ಗಂಡಭೇರುಂಡ'ದ ಸ್ಪರ್ಶ, ಎಚ್‌ಡಿಕೆ ಸಾಥ್!
ಕರ್ನಾಟಕ ರಾಜ್ಯೋತ್ಸವದಲ್ಲಿ ಕನ್ನಡಿಗರ ಹೃದಯ ಗೆದ್ದ ದಿನೇಶ್ ಕಾರ್ತಿಕ್ ಶುಭಾಶಯ..! RCB ಮನೆಮಗನ ಕನ್ನಡ ಪ್ರೀತಿಗೆ ಫ್ಯಾನ್ಸ್‌ ಫಿದಾ!