ಬೆಂಗಳೂರಿನ ದುರ್ವಾಸನೆ ಲೇಔಟ್‌ಗಳ ಸುವಾಸನೆಗೆ 250 ಕೋಟಿ ಅನುದಾನ

Published : Oct 16, 2026, 08:46 AM IST
Bengaluru

ಸಾರಾಂಶ

ಬೆಂಗಳೂರಿನ ಯಶವಂತಪುರ ಮತ್ತು ಬ್ಯಾಟರಾಯನಪುರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ದುರ್ವಾಸನೆ ನಿವಾರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಚಿವ ಸಂಪುಟ ಸಭೆಯಲ್ಲಿ 250 ಕೋಟಿ ರೂ. ಮೀಸಲಿಡಲಾಗಿದೆ.

ಬೆಂಗಳೂರು (ಅ.16): ಬೆಂಗಳೂರಿನ ಯಶವಂತಪುರ ಹಾಗೂ ಬ್ಯಾಟರಾಯನಪುರ ಕ್ಷೇತ್ರಗಳ ವಿವಿಧ ಗ್ರಾಮ, ಬಡಾವಣೆಗಳಲ್ಲಿನ ದುರ್ವಾಸನೆ ನಿವಾರಣೆಗೆ 250 ಕೋಟಿ ರು. ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಅನುಷ್ಠಾನಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಯಶವಂತಪುರ ಕ್ಷೇತ್ರದ ಹೆಮ್ಮಿಗೆಪುರ ಮತ್ತು ವಿವಿಧ ಗ್ರಾಮ, ಬಡಾವಣೆಗಳಲ್ಲಿ ದುರ್ವಾಸನೆ ನಿವಾರಣೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿಯನ್ನು 90 ಕೋಟಿ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.

ಪ್ರತ್ಯೇಕ ಯೋಜನೆಯಲ್ಲಿ ಕಗ್ಗಲೀಪುರ, ಕುಂಬಳಗೋಡು ವ್ಯಾಪ್ತಿಯ ಗ್ರಾಮ, ಬಡಾವಣೆಗಳನ್ನು 70 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ದುರ್ವಾಸನೆ ನಿವಾರಿಸಲು ಕ್ರಮ ಕೈಗೊಳ್ಳಬೇಕು. ಜತೆಗೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ, ಬಡಾವಣೆಗಳಲ್ಲಿ 90 ಕೋಟಿ ರು. ವೆಚ್ಚದಲ್ಲಿ ದುರ್ವಾಸನೆ ನಿವಾರಣೆ ಹಾಗೂ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ತೀರ್ಮಾನಿಸಲಾಗಿದೆ.

375 ಕೋಟಿ ರು. ವೆಚ್ಚದಲ್ಲಿ ಆಸ್ಪತ್ರೆ ಅಭಿವೃದ್ಧಿ

ಬ್ರ್ಯಾಂಡ್‌ ಬೆಂಗಳೂರು ಯೋಜನೆಯಡಿ ಬೆಂಗಳೂರಿನ ಹೆರಿಗೆ ಮತ್ತು ರೆಫರಲ್‌ ಆಸ್ಪತ್ರೆ ನಿರ್ಮಾಣ, ಆಸ್ಪತ್ರೆಗಳ ಅಭಿವೃದ್ಧಿಗೆ 375 ಕೋಟಿ ರು. ವೆಚ್ಚ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆಸ್ಪತ್ರೆಗಳ ನಿರ್ಮಾಣ, ಅಭಿವೃದ್ಧಿ ಕಾಮಗಾರಿಗಳು ಹಾಗೂ ವೈದ್ಯಕೀಯ ಉಪಕರಣಗಳ ಖರೀದಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ನಿರ್ಧಾರ ಮಾಡಲಾಗಿದೆ.

PREV
Read more Articles on
click me!

Recommended Stories

ಸರ್ಕಾರಿ ನೌಕರಿ ಬಯಸೋರಿಗೆ ಗುಡ್‌ನ್ಯೂಸ್‌! ಎಸ್‌ಸಿ, ಎಸ್‌ಟಿ ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಮಹತ್ವದ ನಿರ್ಧಾರ
ಡ್ರಿಪ್ಸ್ ತೆಗೆವಾಗ 6 ತಿಂಗಳ ಮಗುವಿನ ಕೈ ಬೆರಳು ಕಟ್: ಖಾಸಗಿ ಆಸ್ಪತ್ರೆ ವಿರುದ್ಧದ ಕೇಸ್‌ ರದ್ದತಿಗೆ ಹೈಕೋರ್ಟ್‌ ನಕಾರ