ಹೊಸ ವರ್ಷಾಚರಣೆಗೆ ಆಕ್ರೋಶ, ಬ್ರಹ್ಮಾಂಡ ಗುರೂಜಿ, ನಟಿ ರೂಪಾ ಆಯ್ಯರ್ ಪಾದಯಾತ್ರೆ!

By Suvarna NewsFirst Published Dec 31, 2022, 7:45 PM IST
Highlights

ಹೊಸ ವರ್ಷಾಚರಣೆ ಭಾರತೀಯ ಸಂಸ್ಕೃತಿಯಲ್ಲ. ಎಣ್ಣೆ ಕುಡಿದು ಮೈಮರೆಯುವ ಸಂಸ್ಕೃತಿ ನಮಗೆ ಬೇಡ. ವಸಂತಕಾಲ ನಮಗೆ ಹೊಸ ವರ್ಷ. ಹೀಗಾಗಿ ನ್ಯೂ ಇಯರ್ ಸೆಲೆಬ್ರೇಷನ್ ವಿರುದ್ಧ ಬೆಂಗಳೂರಲ್ಲಿ ಪಾದಯಾತ್ರೆ ನಡಸಲಾಗಿದೆ. ಇಷ್ಟೇ ಅಲ್ಲ ವಿದೇಶಿ ಸಂಸ್ಕೃತಿ ಹಾಗೂ ಹೊಸ ವರ್ಷಾಚರಣೆಗೆ ಆಕ್ರೋಶ ವ್ಯಕ್ತವಾಗಿದೆ. 
 

ಬೆಂಗಳೂರು(ಡಿ.31): ಇಡೀ ವಿಶ್ವವೇ ಹೊಸ ವರ್ಷ ಬರಮಾಡಿಕೊಳ್ಳಲು ಸಜ್ಜಾಗಿದೆ. ಸಂಭ್ರಮ ಮುಗಿಲು ಮುಟ್ಟಿದೆ. ಬೆಂಗಳೂರು ಅದ್ಧೂರಿಯಾಗಿ ನ್ಯೂ ಇಯರ್ ಸೆಲೆಬ್ರೆಷನ್ ಮಾಡುತ್ತಿದೆ. ಇದರ ನಡುವೆ ಹೊಸ ವರ್ಷದ ಆಚರಣೆ ವಿರುದ್ಧ ಹಲವೆಡೆಗಳಿಂದ ಆಕ್ರೋಶ ಕೇಳಿಬಂದಿದೆ. ನಟಿ ಹಾಗೂ ನಿರ್ದೇಶಕಿ ರೂಪಾ ಅಯ್ಯರ್ ಹಾಗೂ ಬ್ರಹ್ಮಾಂಡ ಗೂರೂಜಿ ಹೊಸ ವರ್ಚಾಚರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪಾದಯಾತ್ರೆ ನಡೆಸಿದ್ದಾರೆ. ನಾವು ಭಾರತೀಯರು. ನಮಗೆ ಹೊಸ ವರ್ಷಷ ಯುಗಾದಿ. ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಬರುವ ವರ್ಷ ನಮಗೆ ಹೊಸವರ್ಷವಲ್ಲ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ. ಈ ಕುರಿತು ಜಾಗೃತಿ ಮೂಡಿಸಲು ಪಾದಯಾತ್ರೆ ನಡೆಸಿದ್ದಾರೆ. 

ಭಾರತದಲ್ಲಿ ಹೊಸ ವರ್ಷ ಶುರುವಾಗೋದು ವಸಂತ ಕಾಲದಲ್ಲಿ. ಜನವರಿ 1 ರಂದು ಹೊಸ ವರ್ಷ ಆಚರಣೆ ಮಾಡುವ ಪದ್ಧತಿ ನಮ್ಮದಲ್ಲ. ಭಾರತೀಯರು ನಮ್ಮ ಸಂಸ್ಕೃತಿ ಮರೆಯಬಾರದು ಎಂದು ನಟಿ ರೂಪಾ ಅಯ್ಯರ್ ಹಾಗೂ ಬ್ರಹ್ಮಾಂಡ ಗುರೂಜಿ ಪಾದಯಾತ್ರೆ ನಡೆಸಿದ್ದಾರೆ. ಈ ಯಾತ್ರೆಯಲ್ಲಿ ಹಿಂದೂ ಸಂಸ್ಕೃತಿಯ ಧಿರಿಸಿನಲ್ಲಿ ಸಾವಿರಾರು ಪುರುಷರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದಾರೆ. ಜಯನಗರ ನಾಲ್ಕನೇ ಬ್ಲಾಕ್ ರಾಘವೇಂದ್ರ ಸ್ವಾಮಿ ಮಠದಿಂದ ಅಶೋಕ ಪಿಲ್ಲರ್ ಅವರೆ ಪಾದಯಾತ್ರೆ ನಡೆಸಲಾಗಿದೆ. 

ಗರ್ಭಿಣಿಯರು ಡ್ರಿಂಕ್ಸ್ ಮಾಡಿದ್ರೆ ಹೊಟ್ಟೆಯಲ್ಲಿರೋ ಮಗುವಿನ ಅಪಾಯ ತಪ್ಪಿದ್ದಲ್ಲ!

ನಟಿ ಹಾಗೂ ನಿರ್ದೇಶಕಿ ರೂಪಾ ಅಯ್ಯರ್ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಈ ಪಾದಯಾತ್ರೆಗೆ ಬ್ರಹ್ಮಾಂಡ ಗುರೂಜಿ ಚಾಲನೆ ನೀಡಿದ್ದಾರೆ.  ವಿಶ್ವ ಹಿಂದೂ ಮಹಿಳಾ ಪ್ರತಿಷ್ಠಾನ, ನಾರಿ ಶಕ್ತಿ ತಾರುಣಿ ಸತ್ಸಂಗ,  ಬ್ರಹ್ಮಜ್ಮಾನ ಪೀಠ ಬ್ರಾಹ್ಮಿ ಮಹಿಳಾ ಸಂಘ. ಮತ್ತು ಶ್ರೀ ಶಾರಧೆ ಮಹಿಳೆಯರ ಒಕ್ಕೂಟ ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದೆ.  

ಕೇವಲ ಪಾದಯಾತ್ರೆ ಮಾತ್ರವಲ್ಲ, ಇದರ ಜೊತೆಗೆ ಬೈಕ್ ರ್ಯಾಲಿ ಕೂಡ ನಡೆಯಲಿದೆ. ಕಚ್ಚೆ, ಪಂಚೆ ಧರಿಸಿ ಬುಲೆಟ್ ಬೈಕ್ ಮೂಲಕ ಜಾಗೃತಿ ಮೂಡಿಸುವ ಕೆಲಸವೂ ನಡೆಯಲಿದೆ.  ಭಾರತೀಯ ಸಂಸ್ಕೃತಿಯ ಬಿಂಬಿಸುವ ಉಳಿಸುವ ಕೆಲಸವಾಗಬೇಕು. ಈ ಪಾರ್ಟಿ ಸಂಸ್ಕೃತಿ ವಿರುದ್ಧ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ರೂಪಾ ಅಯ್ಯರ್ ಹೇಳಿದ್ದಾರೆ. 

 

New Year 2023: ಕರ್ನಾಟಕದ ಪ್ರವಾಸಿತಾಣದ ಲಾಡ್ಜ್‌ಗಳು ಈಗಲೇ ಭರ್ತಿ..!

ನಾನು ಭಾರತೀಯ ಅನ್ನೋ ವಿಶಿಷ್ಠ ಪ್ರತಿಭಟನೆಗೆ ಚಾಲನೆ ನೀಡಿದ್ದೇವೆ. ಈ ಮೂಲಕ ಹೊಸ ವರ್ಷ ಹಾಗೂ ಪಾರ್ಟಿ ಸಂಸ್ಕೃತಿಗೆ ಅಂತ್ಯಹಾಡಬೇಕು ಎಂದು ರೂಪಾ ಅಯ್ಯರ್ ಹೇಳಿದ್ದಾರೆ. ಎಣ್ಣೆಪ್ರಿಯ'ರಿಗೆ ಪಾದಯಾತ್ರೆ ಮೂಲಕ ಬುದ್ಧಿವಾದ ಹೇಳಲಾಗುತ್ತದೆ. ಭಾರತೀಯ ಸಂಪ್ರದಾಯವನ್ನ ಮರೆತಿದ್ದಕ್ಕೆ ರೂಪ ಅಯ್ಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಣ್ಣೆ ಹೊಡೆದು ಮೈಮರೀಬೇಡಿ ಎಂದು ರೂಪ ಅಯ್ಯರ್ ವಾರ್ನಿಂಗ್ ನೀಡಿದ್ದಾರೆ. ಇಷ್ಟೇ ಅಲ್ಲ ನ್ಯೂ ಇಟರ್ ಸಂಭ್ರಮಕ್ಕೆ ರೂಪ ಅಯ್ಯರ್ ಕಿಡಿ ಕಾರಿದ್ದಾರೆ.
 

click me!