ಕೇರಳದಿಂದ ಓದಲು ಬಂದು ಇಲ್ಲಿ ಬೇರೆಯದೇ ಕಾರುಬಾರು: ಕಾರಿನ ಬೆಲೆಗಿಂತಲೂ ದುಬಾರಿ ದಂಡ ವಿಧಿಸಿದ ಪೊಲೀಸರು

Published : Jan 16, 2026, 02:43 PM ISTUpdated : Jan 16, 2026, 02:51 PM IST
Bengaluru Police Impose ₹1.11 Lakh Fine On car

ಸಾರಾಂಶ

ಕೇರಳದ ಕಣ್ಣೂರಿನಿಂದ ಬೆಂಗಳೂರಿಗೆ ಎಂಜಿನಿಯರಿಂಗ್ ಮಾಡುವುದಕ್ಕಾಗಿ ಬಂದಿದ್ದ ವಿದ್ಯಾರ್ಥಿಯೋರ್ವನಿಗೆ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸುಮಾರು 1.11 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಹಾಗಿದ್ರೆ ಆತ ಮಾಡಿದ್ದೇನು ಇಲ್ಲಿದೆ ಡಿಟೇಲ್ ಸ್ಟೋರಿ.

ಕೇರಳದ ಕಣ್ಣೂರಿನಿಂದ ಬೆಂಗಳೂರಿಗೆ ಎಂಜಿನಿಯರಿಂಗ್ ಮಾಡುವುದಕ್ಕಾಗಿ ಬಂದಿದ್ದ ವಿದ್ಯಾರ್ಥಿಯೋರ್ವನಿಗೆ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸುಮಾರು 1.11 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಹಾಗಿದ್ರೆ ಆತ ಮಾಡಿದ್ದೇನು ಇಲ್ಲಿದೆ ಡಿಟೇಲ್ ಸ್ಟೋರಿ.

ಯುವ ವಿದ್ಯಾರ್ಥಿಯೋರ್ವ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಎಂಬ ಹುಮ್ಮಸ್ಸಿನೊಂದಿಗೆ ತಾನು ಚಾಲನೆ ಮಾಡುತ್ತಿದ್ದ ಕಾರಿನ ಸೈಲೆನ್ಸರ್‌ನಿಂದ ಬೆಂಕಿ ಉಗುಳುವಂತೆ ವಾಹನವನ್ನು ಮಾರ್ಪಡಿಸಿದ್ದ ಇದರಿಂದ ಕಾರಿನ ಸೈಲೆನ್ಸರ್‌ನಿಂದ ಕಾರು ನಿಂತಿದ್ದ ಸಮಯದಲ್ಲೂ ಬೆಂಕಿ ಹೊರಬರುತ್ತಿತ್ತು. ಕಾರುಗಳು ರಸ್ತೆ ಪಕ್ಕ ನಿಂತಿದ್ದ ಸಮಯದಲ್ಲಿ ಈ ಕಾರಿನ ಸೈಲೆನ್ಸರ್‌ನಿಂದ ಬೆಂಕಿ ಬರುತ್ತಿರುವುದನ್ನು ನೋಡಿ ಅನೇಕ ಯುವಕರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ವೀಡಿಯೋ ಮಾಡುತ್ತಿರುವ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಸೆರೆ ಆಗಿದೆ. ಈ ರೀಲ್ಸ್ ಮಾಡಿ ಫೇಮಸ್ ಆಗುವುದಕ್ಕಾಗಿ ಕಾರನ್ನು ಈ ರೀತಿ ಕಸ್ಟಮೈಸ್ ಮಾಡಿದ್ದಾನೆ.

ಈ ವಿದ್ಯಾರ್ಥಿ 2002ರ ಈ ಹೋಂಡಾ ಸಿಟಿ ಕಾರನ್ನು 70 ಸಾವಿರ ರೂಪಾಯಿ ನೀಡಿ ಖರೀದಿ ಮಾಡಿದ್ದ. ಹಳೆಯದಾಗಿದ್ದ ಈ ಕಾರನ್ನು ನಂತರ ಆತ ಡಿಸೈನ್ ಪೇಂಟಿಂಗ್ ಎಲ್ಲಾ ಮಾಡಿ ಕಣ್ಮನ ಸೆಳೆಯುವ ಹೊಸ ಕಾರಿನಂತೆ ಬದಲಾಯಿಸಿದ್ದ. ಈ ವಾಹನಕ್ಕೆ ಅಧಿಕೃತವಲ್ಲದ ಹಲವು ಮಾರ್ಪಡುಗಳನ್ನು ಮಾಡಲಾಗಿತ್ತು. ಸಂಪೂರ್ಣವಾಗಿ ಕಾರಿನ ಬಣ್ಣವನ್ನು ಬದಲಿಸಿದ್ದಲ್ಲದೇ ಅದರ ಯಂತ್ರಗಳ ಹಲವು ಭಾಗಗಳನ್ನು ಬದಲಾಯಿಸಲಾಗಿತ್ತು. ಬ್ಯಾಂಗರ್ ಎಂದು ಹಿಂಭಾಗದ ಮೇಲೆ ಬರೆಯಲಾಗಿತ್ತು. ಹಾಗೂ ಅದರ ಎಕ್ಸಾಸ್ಟ್ ಸಿಸ್ಟಂ ಅಂದರೆ ಸೈಲೆನ್ಸರ್‌ ಅನ್ನು ಸಂಪೂರ್ಣವಾಗಿ ತಿರುಚಲಾಗಿತ್ತು.

ಆತ ತನ್ನ ಕಾರಿಗೆ ಮಾಡಿದ ಅತ್ಯಂತ ಅಪಾಯಕಾರಿ ಬದಲಾವಣೆ ಎಂದರೆ ಕಾರಿನ ಸೈಲೆನ್ಸರ್‌ನಿಂದ ಆತ ಬೆಂಕಿ ಉಗುಳುವಂತೆ ಮಾಡಿದ್ದು. ಬೆಂಕಿ ಮತ್ತು ರಸ್ತೆ ಸುರಕ್ಷತೆಯ ಅಪಾಯಗಳಿಂದಾಗಿ ಭಾರತೀಯ ಮೋಟಾರು ವಾಹನ ಕಾನೂನುಗಳ ಅಡಿಯಲ್ಲಿ ಇಂತಹ ಕ್ರಮವೂ ಕಟ್ಟುನಿಟ್ಟಾಗಿ ಕಾನೂನುಬಾಹಿರವಾಗಿದೆ.

ಹೊಸ ವರ್ಷವನ್ನು ಸ್ವಾಗತಿಸುವುದಕ್ಕಾಗಿ ಈ ವಿದ್ಯಾರ್ಥಿಯು ಮಾರ್ಪಡಿಸಿದ ಈ ಕಾರನ್ನು ಬೆಂಗಳೂರಿನ ವಿವಿಧ ರಸ್ತೆಗಳಲ್ಲಿ ಓಡಿಸಿದ್ದಾನೆ. ವೈರಲ್ ಆದ ವಿಡಿಯೋದಲ್ಲಿ ಆತ ನಗರದ ರಸ್ತೆಗಳಲ್ಲಿ ವಾಹನದ ಸೈಲೆನ್ಸರ್‌ನಿಂದ ಬೆಂಕಿ ಹಾಗೂ ಸದ್ದು ಒಟ್ಟೊಟ್ಟಿಗೆ ಬರುವಂತೆ ಮಾಡುತ್ತಾ ಅಪಾಯಕಾರಿ ಸಾಹಸಗಳನ್ನು ಮಾಡಿದ. ಈ ರೀತಿ ಮಾಡಿದ ನಂತರ ಆ ವಿಡಿಯೋಗಳನ್ನು ಆತ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಸ್ಥಳೀಯರು ನೋಡುಗರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ಈ ಕಾರನ್ನು ಉತ್ತರ ಬೆಂಗಳೂರಿನಲ್ಲಿ ಪತ್ತೆ ಮಾಡಿದ್ದು, ಕಾರಿಗಿಂತಲೂ ದುಬಾರಿ ಮೊತ್ತದ ದಂಡ ವಿಧಿಸಿದ್ದಾರೆ.

ಈಶಾನ್ಯ ಬೆಂಗಳೂರಿನ ಭಾರತೀಯ ಸಿಟಿಯಲ್ಲಿ ಕಾರನ್ನು ಪತ್ತೆ ಮಾಡಿದ ಪೊಲೀಸರು ಈ ಕಾರು ಭಾರತೀಯ ಮೋಟಾರು ವಾಹನ ಕಾಯ್ದೆಯ ಹಲವು ನಿಯಮಗಳನ್ನು ಉಲ್ಲಂಘಿಸಿರುವುದನ್ನು ಗಮನಿಸಿದ್ದಾರೆ. ಈ ಕಾರಿನ ಸೈಲೆನ್ಸರ್‌ನಿಂದ ಕೇಳಲಾಗದಷ್ಟು ಬಿರುಸಾದ ಸದ್ದಿನ ಜೊತೆ ಬೆಂಕಿ ಶೂಟ್ ಮಾಡಿದಂತೆ ಹೊರಬರುತ್ತಿತ್ತು. ಹೀಗಾಗಿ ಸಾರ್ವಜನಿಕರಿಗೆ ಇದೊಂದು ಬಹಳ ಗಂಭೀರವಾದ ಬೆಂಕಿಯ ಅಪಾಯವನ್ನು ಒಳಗೊಂಡಿತ್ತು ಎಂದು ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಅಲಿಬಾಗ್‌ನಲ್ಲಿ ಮತ್ತೊಂದು ದುಬಾರಿ ಆಸ್ತಿ ಖರೀದಿಸಿದ ವಿರುಷ್ಕಾ: ಸ್ಟಾಂಪ್ ಡ್ಯೂಟಿಯೇ 2.27 ಕೋಟಿ: ಆಸ್ತಿ ಮೊತ್ತವೆಷ್ಟು?

ಈ ಕಾರನ್ನು ವಶಪಡಿಸಿಕೊಂಡ ನಂತರ ಯಲಹಂಕ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಅಧಿಕಾರಿಗಳು ವಿವರವಾದ ತಪಾಸಣೆ ನಡೆಸಿದಾಗ ವಾಹನವು ಹಲವಾರು ನಿಯಮಗಳ ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ.

  • ಸೈಲೆನ್ಸರ್ ಬದಲಿಸಲಾಗಿತ್ತು
  • ಅನಧಿಕೃತವಾಗಿ ರಚನೆಯನ್ನು ಬದಲಿಸಲಾಗಿತ್ತು
  • ಅನುಮೋದನೆ ಇಲ್ಲದೆ ಬಣ್ಣ ಬದಲಿಸಲಾಗಿತ್ತು
  • ಅಸುರಕ್ಷಿತವಾದ ಯಾಂತ್ರಿಕ ಮಾರ್ಪಾಡು ಮಾಡಲಾಗಿತ್ತು.

ಹೀಗಾಗಿ ಈ ಕಾರನ್ನು ಆ ವಿದ್ಯಾರ್ಥಿ ಖರೀದಿಸಿದಕ್ಕಿಂತ ಹೆಚ್ಚು ಮೊತ್ತದ ದಂಡವನ್ನು ಟ್ರಾಫಿಕ್ ಪೊಲೀಸರು ವಿಧಿಸಿದ್ದಾರೆ. ಕಾರನ್ನು 70000 ಸಾವಿರ ರೂಪಾಯಿಗೆ ಆತ ಖರೀದಿಸಿದ್ದರೆ ಆತನಿಗೆ ವಿಧಿಸಿದ ದಂಡದ ಒಟ್ಟು ಮೊತ್ತ 1.11ಲಕ್ಷ ರೂ ಆಗಿತ್ತು. ನಂತರ ವಿದ್ಯಾರ್ಥಿ ದಂಡ ಪಾವತಿ ಮಾಡಿದ್ದಾನೆ. ಆತನಿಗೆ ಇಂತಹ ಸಾಹಸಗಳನ್ನು ಪುನರಾವರ್ತಿಸದಂತೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಲಾಗಿದೆ. ವಿಪರ್ಯಾಸವೆಂದರೆ, ಅದೇ ವಾಹನವನ್ನು ಕೇರಳದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ಕಾನೂನು ಕ್ರಮಕ್ಕೆ ಸಿಲುಕದಂತೆ ಓಡಿಸಲಾಗಿದೆ ಎಂಬುದು ಪೊಲೀಸರು ಈ ವೇಳೆ ಪತ್ತೆ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ರೀಲ್‌ಗಾಗಿ ಆತ ಕಾರನ್ನು ಖರೀದಿಸುವುದಕ್ಕಿಂತ ಹೆಚ್ಚಿನ ಮೊತ್ತದ ಹಣವನ್ನು ದಂಡಕ್ಕೆ ವೆಚ್ಚ ಮಾಡಿದ್ದಾನೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಇದನ್ನೂ ಓದಿ: ಅಳಿಯನಿಗೆ ರಾಜ ಮರ್ಯಾದೆ: 158 ಬಗೆಯ ಭಕ್ಷ್ಯ ಸಿದ್ಧಪಡಿಸಿ ಬಡಿಸಿದ ಆಂಧ್ರದ ಕುಟುಂಬ

 

 

PREV
Read more Articles on
click me!

Recommended Stories

ಗಂಡನ ಮೇಲಿನ ಕೋಪಕ್ಕೆ 4 ವರ್ಷದ ಮಗಳನ್ನೇ ಸಜೀವ ದಹನ ಮಾಡಲು ಮುಂದಾದ ತಾಯಿ; ತಾನೂ ಬೆಂಕಿ ಹಚ್ಚಿಕೊಂಡು ಸಾವು!
70 ಸಾವಿರ ಬೆಲೆಯ ಕಾರಿಗೆ 1.11 ಲಕ್ಷ ರು. ದಂಡ ಕಟ್ಟಿದ ಮಾಲೀಕ