ಸಿಜೆ ರಾಯ್ ಕೊನೆ ಕ್ಷಣ ಹೇಗಿತ್ತು? ಜೊತೆಯಲ್ಲಿಯೇ ಇದ್ದ ಮ್ಯಾನೇಜರ್ ದೂರಿನಲ್ಲಿದೆ ಇಂಚಿಂಚು ಮಾಹಿತಿ

Published : Jan 31, 2026, 12:47 PM IST
 CJ Roy s last moments

ಸಾರಾಂಶ

ಉದ್ಯಮಿ ಸಿ.ಜೆ. ರಾಯ್ ಅವರ ಮ್ಯಾನೇಜರ್ ಟಿ. ಎ. ಜೋಸೆಫ್, ರಾಯ್ ಅವರ ಕೊನೆಯ ಕ್ಷಣಗಳ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ತಾಯಿಗೆ ಕರೆ ಮಾಡುವುದಾಗಿ ಹೇಳಿ ಕ್ಯಾಬಿನ್‌ನಿಂದ ಹೊರಗೆ ಕಳುಹಿಸಿದ ರಾಯ್, 20 ನಿಮಿಷಗಳ ನಂತರ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಬೆಂಗಳೂರು: ಉದ್ಯಮಿ ಸಿ.ಜೆ.ರಾಯ್ ಆತ್ಮಹ* ಪ್ರಕರಣ ಸಂಬಂಧ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ. ಸಿಜೆ ರಾಯ್ ಅವರ ಮ್ಯಾನೇಜರ್ ಟಿ. ಎ. ಜೋಸೆಫ್ ಬಿನ್ ಟಿ.ಜೆ. ಅಲೆಕ್ಸಾಂಡರ್ ಘಟನೆ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ರಾಯ್ ಅವರ ಕೊನೆಯ 20 ನಿಮಿಷ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ. ಅಮ್ಮನಿಗೆ ಕರೆ ಮಾಡೋದಾಗಿ ಹೇಳಿದ್ದ ರಾಯ್ ಅವರು ತಮ್ಮ ಜೊತೆಯಲ್ಲಿದ್ದ ಜೋಸೆಫ್‌ ಅವರನ್ನು ಕ್ಯಾಬಿನ್‌ನಿಂದ ಹೊರಗೆ ಕಳುಹಿಸಿದ್ದರು. ಇದಾದ 20 ನಿಮಿಷದ ಬಳಿಕ ಕ್ಯಾಬಿನ್‌ಗೆ ಹೋದಾಗ ರಾಯ್ ರಕ್ತಸಿಕ್ತದ ನಡುವೆ ಕುಳಿತ ಸ್ಥಿತಿಯಲ್ಲಿದ್ದರು ಎಂದು ಮಾಹಿತಿಯನ್ನು ನೀಡಿದ್ದಾರೆ.

ಜೋಸೆಫ್ ನೀಡಿದ ದೂರಿನ ವಿವರ ಹೀಗಿದೆ

ದೂರುದಾರರು ದಿನಾಂಕ 30.01.2026 ರಂದು ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಟಿ.ಎ. ಜೋಸೆಫ್ ಕಾನ್ಫಿಡೆಂಟ್ ಗ್ರೂಪ್ ಮಾನೇಜಿಂಗ್ ಡೈರೆಕ್ಟರ್ ಆಗಿದ್ದು, ಮದ್ಯಾಹ್ನ 03.00 ಗಂಟೆಗೆ ನಾನು ಮತ್ತು ಸಿ.ಜೆ. ರಾಯ್ ಆದಾಯ ತೆರಿಗೆ ಇಲಾಖೆಯವರಿಗೆ ಹೇಳಿಕೆಯನ್ನು ನೀಡಲು ಲ್ಯಾಂಗ್ಫೋರ್ಡ್ ರೋಡ್ ಬೆಂಗಳೂರಿನಲ್ಲಿರುವ ನಮ್ಮ ಆಫೀಸಿಗೆ ಬಂದಿರುತ್ತೇವೆ. ನಂತರ ಸಿ.ಜೆ. ರಾಯ್ ರವರು ಅವರ ಕ್ಯಾಬಿನ್ ಗೆ ತೆರಳಿ ಸ್ವಲ್ಪ ಸಮಯದ ನಂತರ ನಾನು ನನ್ನ ತಾಯಿಗೆ ಸ್ವಲ್ಪ ಮಾತನಾಡಬೇಕೆಂದು ಹೇಳಿದರು. ಆ ನಂತರ ನಾನು ಹೊರಗಡೆ ಬಂದಿರುತ್ತೇನೆ, 10 ನಿಮಿಷದ ನಂತರ ನಾನು ಮರಳಿ ಕ್ಯಾಬಿನ್ ಕಡೆ ಹೋದಾಗ ಅಲ್ಲಿರುವ ಸೆಕ್ಯುರಿಟಿಯವರು ಸಿ.ಜೆ.ರಾಯ್ ರವರು ಯಾರನ್ನು ಕ್ಯಾಬಿನ್ ಗೆ ಬಿಡಬೇಡಿ ಎಂದು ಹೇಳಿದ್ದಾರೆ ಎಂದು ಹೇಳಿದರು.

ಇದಾದ 10 ನಿಮಿಷದ ನಂತರ ನಾನು ಮತ್ತೆ ಕ್ಯಾಬಿನ್ ಕಡೆ ಹೋಗಿ ಬಾಗಿಲನ್ನು ಬಡಿಯಲಾಗಿ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ, ಇದನ್ನರಿತ ನಾನು ಕ್ಯಾಬಿನ್ನ ಬಾಗಿಲು ಒಳಗಿನಿಂದಲೆ ಲಾಕ್ ಆಗಿರುವುದನ್ನು ಗಮನಿಸಿ ನಾವು ಬಾಗಿಲನ್ನು ಮುರಿದು ಕ್ಯಾಬಿನ್ ಒಳಗಡೆ ಹೋಗಿರುತ್ತೇವೆ.

ನಂತರ ನೋಡಲಾಗಿ ಸಿ.ಜೆ. ರಾಯ್ ರವರು ಅವರ ಚೇರ್ ಮೇಲೆ ರಕ್ತಸಿಕ್ತವಾದ ಬಟ್ಟೆಗಳಿಂದ ಕುಳಿತರುವ ಸ್ಥಿತಿಯಲ್ಲಿದ್ದರು. ತಕ್ಷಣ ನಾವು ಅವರ ದೇಹವು ತಣ್ಣಗಾಗಿರುವುದು ಕಂಡು ಕೂಡಲೇ ಆಂಬುಲೆನೆ ಕರೆ ಆ ನಂತರ ನಾನು ಹೊರಗಡೆ ಬಂದಿರುತ್ತೇನೆ, 10 ನಿಮಿಷದ ನಂತರ ನಾನು ಮರಳಿ ಕ್ಯಾಬಿನ್ ಕಡೆ ಹೋದಾಗ ಅಲಿರುವ ಸೆಕ್ಯುರಿಟಿಯವರು ಸಿ ಜೆ ರಾಯ್ ರವರು ಯಾರನ್ನು ಕ್ಯಾಬಿನ್ ಗೆ ಬಿಡಬೇಡಿ ಎಂದು ಹೇಳಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಉದ್ಯಮಿ ಸಿಜೆ ರಾಯ್ ಪ್ರಕರಣ: ಸಮಜಾಯಿಷಿಗೆ ಇಳಿದು ಕೇಂದ್ರದ ಮೊರೆ ಹೋದ ಐಟಿ ಅಧಿಕಾರಿಗಳು

ನಾರಾಯಣ ಆಸ್ಪತ್ರೆಗೆ ದಾಖಲು

ಇದಾದ 10 ನಿಮಿಷದ ನಂತರ ನಾನು ಮತ್ತೆ ಕ್ಯಾಬಿನ್ ಕಡೆ ಹೋಗಿ ಬಾಗಿಲನ್ನು ಬಡಿಯಲಾಗಿ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ. ಇದನ್ನರಿತ ನಾನು ಕ್ಯಾಬಿನ ಬಾಗಿಲು ಒಳಗಿನಿಂದಲೆ ಲಾಕ್ ಆಗಿರುವುದನ್ನು ಗಮನಿಸಿ ನಾವು ಬಾಗಿಲನ್ನು ಮುರಿದು ಕ್ಯಾಬಿನ್ ಒಳಗಡೆ ಹೋಗಿರುತ್ತೇವೆ. ಆಂಬುಲೆನ್ಸ್ ಗೆ ಕರೆ ಮಾಡಿದ್ದು, ಆಂಬುಲೆನ್ಸ್ ನೊಂದಿಗೆ ಬಂದ ವೈದಕೀಯ ಸಿಬ್ಬಂದಿ ನಾಡಿಯನ್ನು ಪರೀಕ್ಷಿಸಲಾಗಿ ನಾಡಿ ಮಿಡಿತ ನಿಂತಿರುವುದು ಕಂಡು ಬಂದಿರುತ್ತದೆ ತಕ್ಷಣ ಅವರಿಗೆ ನಾರಾಯಣ ಆಸ್ಪತ್ರೆ ಹೆಚ್.ಎಸ್.ಆರ್ ಲೇಔಟ್ ಬೆಂಗಳೂರು ಇಚಿಗೆ ಕರೆದುಕೊಂಡು ಬಂದು ಎಮರ್ಜೆನ್ಸಿ ರೂಂಗೆ ದಾಖಲಿಸಿರುತ್ತೇವೆ. ಇದು ನಾನು ಕಂಡ ಸಂಪೂರ್ಣ ಘಟನಾವಳಿಯಾಗಿರುತ್ತದೆ. ಆದರಿಂದ ಸದರಿಯವರು ಯಾವ ಒತ್ತಡಕ್ಕಾಗಿ ಈ ಕಠಿಣ ನಿರ್ಧಾರಕ್ಕೆ ಬಂದಿರುತ್ತಾರೆ ಎಂಬುದರ ಕುರಿತು ವಿವರವಾದ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಪ್ಯಾಲೇಸ್‌ನಂಥ ಮನೆಯಿದ್ರೂ ಹೋಟೆಲ್ ರೂಮ್ ಫಿಕ್ಸ್; 24ನೇ ಮಹಡಿಯ ಕೋಣೆ ರಹಸ್ಯ

PREV
Read more Articles on
click me!

Recommended Stories

CJ Roy: ಕೋಟಿ ಕೋಟಿ ಆಸ್ತಿ ಇದ್ದರೂ ಸಾವಿಗೆ ಶರಣಾಗಿದ್ದು ಯಾಕೆ? ಈ ನಿಗೂಢ ರಹಸ್ಯಕ್ಕೆ 'ಅದೇ' ನಿಜವಾದ ಕಾರಣವಾ?
ಬೆಂಗ್ಳೂರಿನಲ್ಲಿ ಪ್ಯಾಲೇಸ್‌ನಂಥ ಮನೆಯಿದ್ರೂ ಹೋಟೆಲ್ ರೂಮ್ ಫಿಕ್ಸ್; 24ನೇ ಮಹಡಿಯ ಕೋಣೆ ರಹಸ್ಯ