
ಬೆಂಗಳೂರು (ಜ.30) ಪರಿಶ್ರಮದ ಮೂಲಕ ಶ್ರೀಮಂತ ಉದ್ಯಮಿಯಾದ ಸಿಜೆ ರಾಯ್ ದುರಂತ ಅಂತ್ಯಕ್ಕೆ ದೇಶವೇ ಬೆಚ್ಚಿ ಬಿದ್ದಿದೆ. ಸತತ ಐಟಿ ಅಧಿಕಾರಿಗಳ ದಾಳಿಗೆ ಬೇಸತ್ತು ಬದುಕು ಅಂತ್ಯಗೊಳಿಸಿರುವುದಾಗಿ ವರದಿಯಾಗಿದೆ. ಸಿಜೆ ರಾಯ್ ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. ಇದರ ಜೊತೆಗೆ ಸಿನಿಮಾ ನಿರ್ಮಾಣ, ರಿಯಾಲಿಟಿ ಶೋ ಬಹುಮಾನ ಸೇರಿದಂತೆ ಮನರಂಜನಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು. ಕನ್ನಡ ಬಿಗ್ ಬಾಸ್ ಕೆಲ ಆವೃತ್ತಿಗಳಲ್ಲಿ ವಿನ್ನರ್‌ಗೆ 50 ಲಕ್ಷ ರೂ ಬಹುಮಾನ ದೇ ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ನೀಡಿದ್ದಾರೆ. ವಿಶೇಷ ಅಂದರೆ ಬಡಮಕ್ಕಳ ಶಿಕ್ಷಣಕ್ಕೆ ಸಿಜೆ ರಾಯ್ 1 ಕೋಟಿ ರೂಪಾಯಿ ಘೋಷಣೆ ಮಾಡಿದ್ದರು.
ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಯಲ್ಲಿ ಕನ್ನಡಿಗರ ಹೃದಯ ಗೆದ್ದು ಬಿಗ್ ಬಾಸ್ ಚಾಂಪಿಯನ್ ಪಟ್ಟ ಅಲಂಕರಿಸಿದ ಗಾಯಕ ಹನುಮಂತ ಲಮಾಣಿಗೆ ಇದೇ ಕಾನ್ಫಿಡೆಂಟ್ ಗ್ರೂಪ್ ಚೇರ್ಮೆನ್ ಸಿಜೆ ರಾಯ್ 50 ಲಕ್ಷ ರೂಪಾಯಿ ಬಹುಮಾನ ನೀಡಿದ್ದರು. ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಸಿಜೆ ರಾಯ್ 50 ಲಕ್ಷ ರೂಪಾಯಿ ಬಹುಮಾನದ ಚೆಕ್ ವಿತರಿಸಿದ್ದರು. ಇದರ ಬೆನ್ನಲ್ಲೇ ಇದಕ್ಕಿಂತ ಡಬಲ್ ಅಂದರೆ 1 ಕೋಟಿ ರೂಪಾಯಿ ಮೊತ್ತವನ್ನು ಬಡ ಮಕ್ಕಳ ಶಿಕ್ಷಣಕ್ಕೆ ಘೋಷಿಸಿದ್ದರು. 2025ರ ಮಾರ್ಚ್ ತಿಂಗಳಿನಿಂದ ಈ ಸ್ಕಾಲರ್‌ಶಿಪ್ ನೀಡುವುದಾಗಿ ಘೋಷಿಸಿದ್ದರು. ಆದರೆ ದಿಢೀರ್ ಸಿಜೆ ರಾಯ್ ಅಂತ್ಯದಿಂದ ಸ್ಕಾಲರ್‌ಶಿಪ್ ಕುರಿತ ಸ್ಪಷ್ಟತೆ ಲಭ್ಯವಿಲ್ಲ
201 ಬಡ ವಿದ್ಯಾರ್ಥಿಗಳಿಗೆ ತಲಾ 50 ಸಾವಿ ರೂಪಾಯಿ ವರೆಗೆ ನೆರವು ನೀಡುವುದಾಗಿ ಘೋಷಿಸಿದ್ದರು. ಶೇಕಡಾ 80ಕ್ಕಿಂತ ಮೇಲ್ಪಟ್ಟು ಅಂಕ ಪಡೆಯುವ ಬಡ ವಿದ್ಯಾರ್ಥಿಗಳ ಶಿಕ್ಷಣ ಜವಾಬ್ದಾರಿಯನ್ನು ತಾವು ನಿರ್ವಹಿಸುವುದಾಗಿ ಘೋಷಿಸಿದ್ದರು. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದರು.
ಬಿಗ್ ಬಾಸ್ ಹನುಮಂತುಗೆ 50 ಲಕ್ಷ ರೂಪಾಯಿ ಬಹುಮಾನ ನೀಡಿದಾಗ ನೀವೆಲ್ಲಾ ಖುಷಿಯಾಗಿದ್ದೀರಿ. ಇದೀಗ ಅದಕ್ಕಿಂತ ಡಬಲ್ ಸಂಭ್ರಮ ಪಡುವ ಸುದ್ದಿ ಎಂದು ಸಿಜೆ ರಾಯ್ ತಮ್ಮ ಶಿಕ್ಷಣದ ನೆರವು ಘೋಷಿಸಿದ್ದರು. 1 ಕೋಟಿ ರೂಪಾಯಿ ಮೊತ್ತವನ್ನು 201 ಬಡ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದೇನೆ. ನಿಮ್ಮ ತಂದೆ ತಾಯಿ ಕಷ್ಟಪಡುವುದನ್ನು ನೋಡುತ್ತಿರುತ್ತೀರಿ. ಹೀಗಾಗಿ ಮಕ್ಕಳೇ ನೀವು ನಿಮ್ಮ ಶಿಕ್ಷಣದ ಬಗ್ಗೆ ಗಮನ ಹರಿಸಿ. ಫೀಸ್ ಚಿಂತೆ ಬಿಟ್ಟು ಬಿಡಿ. ಶೇಕಡಾ 80 ಕ್ಕಿಂತ ಮೇಲ್ಪಟ್ಟು ಅಂಕ ಪಡೆಯುವ 201 ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂಪಾಯಿಯಂತೆ ನೀಡುತ್ತೇನೆ ಎಂದು ಘೋಷಿಸಿದ್ದರು. ಬಡ ಮಕ್ಕಳಿ ಮೋಟಿವೇಶನ್‌ಗಾಗಿ ನೀಡುತ್ತಿರುವ ಹಣ. ಮಕ್ಕಳೇ ನೀವು ಚೆನ್ನಾಗಿ ಓದಿ ಸಾಧನೆ ಮಾಡಿ ಎಂದು ಸೋಶಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದರು.