ಕಾಲೇಜು ಪಕ್ಕ ಸ್ಟಿಂಗ್ ಆಪರೇಶನ್ ವ್ಯಕ್ತಿ ಜೊತೆ ಎಷ್ಟು ಹೊತ್ತು ಕೂತಿದ್ರಿ? ಸಿಎಂಗೆ ಹೆಚ್‌ಡಿಕೆ ಪ್ರಶ್ನೆ

Published : Oct 11, 2026, 01:42 PM IST
Kumaraswamy Questions DK Shivakumar Over Sting Operation

ಸಾರಾಂಶ

ಕಾಲೇಜು ಸಮೀಪದ ಹೊಟೆಲ್‌ನಲ್ಲಿ ಸ್ಟಿಂಗ್ ಆಪರೇಶನ್ ಮಾಡುವ ವ್ಯಕ್ತಿ ಜೊತೆ ಎಷ್ಟು ಹೊತ್ತು ಕೂತಿದ್ರಿ? ಆ ವ್ಯಕ್ತಿ ಯಾರು ಅನ್ನೋದು ಜನತೆ ಮುಂದೆ ಇಡಬೇಕಲ್ವಾ ಎಂದು ಹೆಚ್ ಡಿ ಕುಮಾರಸ್ವಾಮಿ ಸ್ಫೋಟಕ ಆರೋಪ ಮಾಡಿದ್ದಾರೆ.

ಬೆಂಗಳೂರು (ಅ.11) ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಾಗೂ ಎನ್‌‌ಡಿಎ ನಡುವೆ ಸ್ಟಿಂಗ್ ಆಪರೇಶನ್ ಜಟಾಪಟಿ ತೀವ್ರಗೊಳ್ಳುತ್ತಿದೆ. ನಮ್ಮ ನಾಯಕರು, ಸಚಿವರ ಸ್ಟಿಂಗ್ ವಿಡಿಯೋ ಮಾಡಲಾಗುತ್ತಿದೆ ಗಂಭೀರ ಆರೋಪ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಆರೋಪ ಪ್ರತ್ಯಾರೋಪಗಳ ನಡುವೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಮೌಂಟ್ ಕಾರ್ಮೆಲ್ ಕಾಲೇಜಿನ ಬಳಿಯ ಹೊಟೆಲ್‌ನಲ್ಲಿ ಸ್ಟಿಂಗ್ ಆಪರೇಶನ್ ಮಾಡುವ ವ್ಯಕ್ತಿ ಜೊತೆ ಎಷ್ಟು ಹೊತ್ತು ಕುಳಿತಿದ್ದೀರಿ ಎಂದು ಜನತೆ ಮುಂದೆ ಹೇಳಿ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಯಾರ ಜೊತೆ ಕೂತಿದ್ರಿ, ಜನರ ಮುಂದೆ ಇಡಿ

ಡಿಕೆ ಶಿವಕುಮಾರ್ ಸ್ಟಿಂಗ್ ಆಪರೇಶನ್ ಕುರಿತು ಸಮಜಾಯಿಷಿ ಕೊಟ್ಟಿದ್ದಾರೆ. ನನ್ನನ್ನು ಕೂಡಾ ಸ್ಟಿಂಗ್ ಆಪರೇಷನ್ ಮಾಡಲು ಬಂದಿದ್ರು ಅಂದಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ಲ ಹೇಳಿಕೆಯಿಂದ ಸಚಿವ ಸಂಪುಟದಲ್ಲಿ ಈ ವಿಚಾರ ಪ್ರಸ್ತಾಪ ಆಗಿದ್ದು ನಿಜ ಎಂದಾಯಿತು. ಹಾಗಾದರೆ ಮೌಂಟ್ ಕಾರ್ಮೆಲ್ ಕಾಲೇಜಿನ ಬಳಿಯ ಹೋಟೆಲ್ ನಲ್ಲಿ ಸ್ಟಿಂಗ್ ಆಪರೇಷನ್ ಮಾಡುವ ವ್ಯಕ್ತಿ ಜೊತೆ ಎಷ್ಟು ಹೊತ್ತು ಕೂತಿದ್ರಿ? ಆ ವ್ಯಕ್ತಿ ಯಾರು ಅಂತ ಜನರ ಮುಂದೆ ಇಡಬೇಕಲ್ವಾ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯದಲ್ಲಿ ಏನು ನಡೆಯುತ್ತಿದೆ ಅನ್ನೋದು ಜನರ ಮುಂದೆ ಮುಖ್ಯಮಂತ್ರಿಗಳು ಇಡಬೇಕು. ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರೊಬ್ಬರ ಮೇಲೆ ಸ್ಟಿಂಗ್ ಆಪರೇಷನ್ ಆಗಿದೆ ಅನ್ನೋ ವಿಚಾರ ಬಂದು ಹಾಗೇ ಸೈಲೆಂಟ್ ಆಯ್ತು. ನಮಗೆ ಸ್ಟಿಂಗ್ ಆಪರೇಷನ್ ಮಾಡಿ ಅಭ್ಯಾಸ ಇಲ್ಲ. ಅವರನ್ನು ಸ್ಟಿಂಗ್ ಆಪರೇಷನ್ ನ ಪಿತಾಮಹ, ಅಥವಾ ಸಾಮ್ರಾಟ ಅನ್ನ ಬೇಕೋ ಗೊತ್ತಿಲ್ಲ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಯಾವ ಐದು ಮಂದಿ ಮೇಲೆ ಸ್ಟಿಂಗ್ ಆಗಿದೆ?

ಯಾವ ಐದು ನಾಯಕರ ಮೇಲೆ ಸ್ಟಿಂಗ್ ಆಪರೇಶನ್ ಆಗಿದೆ ಅನ್ನೋದು ತನಿಖೆ ಆಗಬೇಕಲ್ವಾ? ನಿಮ್ಮದೇ ಸರ್ಕಾರ ಇದೆ, ತನಿಖೆ ಮಾಡಿಸಿ ಎಂದು ಹೆಚ್‌ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಎಂತೆಂತಹವರ ಬಗ್ಗೆ ಏನೆಲ್ಲಾ ನಡೆಸಿದ್ದೀರಿ. ಈಗ ಐದು ಜನ ಮಂತ್ರಿ ಗಳ ಮೇಲೆ ,,ಸ್ಟಿಂಗ್ ಆಗಿದೆ ಅಂತೀರಲ್ಲ. ಅಂತಹ ಮಂತ್ರಿ ಗಳನ್ನು ಯಾಕೆ ಇಟ್ಟುಕೊಂಡಿದ್ದೀರಿ ಎಂದು ಕುಮಾರಾಸ್ವಾಮಿ ಪ್ರಶ್ನಿಸಿದ್ದಾರೆ.

ವಿಜಯದಶಮಿ ಮುಂಚೆಯೇ ಬೆಳವಣಿಗೆ

ವಿಜಯದಶಮಿ ನಂತರ ಹಲವಾರು ಬೆಳವಣಿಗೆ ಗಳು ಆಗುತ್ತವೆ ಅಂತ ಹೇಳಿದ್ದೆ. ಆದರೆ ಅದಕ್ಕಿಂತ ಮುಂಚೆಯೇ ಆರಂಭವಾಗಿದೆ. ಇದಕ್ಕೆ ಮುಖ್ಯಮಂತ್ರಿ ಗಳಿಗೆ ಅಭಿನಂದನೆ ಸಲ್ಲಿಸಬೇಕು. ಎಲ್ಲರ ಗಮನ ನಾಡಿನ ಹಬ್ಬ ದಸರಾ ಕಡೆ ಇದೆ. ನಾನು ಅನಿವಾರ್ಯ ವಾಗಿ ಎರಡು ವಿಚಾರ ಪ್ರಸ್ತಾಪ ಮಾಡಬೇಕು ಎಂದ ಹೆಚ್‌ಡಿ ಕುಮಾರಸ್ವಾಮಿ ಸ್ಟಿಂಗ್ ಆಪರೇಶನ್ ಕುರಿತು ಹಲವು ಪ್ರಶ್ನೆ ಮುಂದಿಟ್ಟಿದ್ದಾರೆ. ಗೃಹ ಸಚಿವರು ಸ್ಟಿಂಗ್ ಆಪರೇಷನ್ ಬಗ್ಗೆ ದೂರು ಕೊಡಲಿ ಅಂತಾ ಹೇಳಿದ್ದಾರೆ. ಎಷ್ಟು ಕೇಸ್ ಗಳಲ್ಲಿ ದೂರನ್ನೇ ಕೊಡದೇ ತನಿಖೆ ಗೆ ಅವಕಾಶ ಕೊಟ್ಟಿಲ್ಲವೇ.? ನಾಡಿನ ಜನರ ಮುಂದೆ ಹಲವಾರು ಸಂಶಯಗಳು ಬರುವ ರೀತಿ ಮುಖ್ಯಮಂತ್ರಿ ಗಳೇ ವೇದಿಕೆ ಸಿದ್ದ ಮಾಡಿ ಕೊಟ್ಡಿದ್ದಾರೆ. ಸಚಿವ ಸಂಪುಟದಲ್ಲಿ ಪ್ರಮುಖ ವಿಚಾರ ಪ್ರಸ್ತಾಪ ಮಾಡಿದ್ದಾರೆ ಅಂತ ಮಾದ್ಯಮ ಗಳಲ್ಲಿ ಬಂತು. ಸ್ಟಿಂಗ್ ಆಪರೇಷನ್ ಬಗ್ಗೆ ಸಿಎಂ ಸಚುವರು ಗಳಿಗೆ ಎಚ್ಚರಿಕೆ ಕೊಟ್ಟಿದ್ದು ಅಷ್ಟೇ ಅಲ್ಲ. ಅವತ್ತು ಕ್ಯಾಬಿನೆಟ್ ಗೆ ಹೋಗುವಾಗ ಸ್ಟಿಂಗ್ ಆಪರೇಷನ್ ಬಗ್ಗೆ ಮಾಹಿತಿಗಳ ಫೈಲ್ ಅನ್ನೂ ತೆಗೆದುಕೊಂಡು ಹೋಗಿದ್ದಾರೆ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

PREV
Read more Articles on
click me!

Recommended Stories

ಅಮೆರಿಕಾದಲ್ಲಿರೋ ಬೆಂಗಳೂರಿನ ಕುರುಬರಹಳ್ಳಿ, ಲಗ್ಗೆರೆ ಬ್ರಿಡ್ಜ್‌ : ವಿಡಿಯೋ ವೈರಲ್!
Bengaluru: ಇಂದಿರಾ ಕ್ಯಾಂಟೀನ್‌ನಿಂದ ಅನ್ನ, ಸಾಂಬಾರ್, ಪಲ್ಯ, ಪಾಯಸ ಮಾಯ; ಮೆನು ಉಲ್ಲಂಘನೆ