
ಕೆಲವು ಸ್ಟ್ರೀಟ್ ಫೋಟೋಗ್ರಾಫರ್‌ಗಳು ಚೆಂದ ಚೆಂದದ ಹೆಣ್ಣು ಮಕ್ಕಳ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಅವರ ಅನುಮತಿ ಪಡೆದು ಪೋಸ್ಟ್ ಮಾಡುತ್ತಿರುತ್ತಾರೆ. ಇದು ಬೀದಿಗಳಲ್ಲಿ ನಡೆಯುವ ಇನ್ಸ್ಟಾಂಟ್ ಫೋಟೋಗ್ರಾಫಿಗೆ ಅನೇಕರು ಫಿದಾ ಆಗುತ್ತಾರೆ. ಹೀಗೆ ಬೀದಿ ಫೋಟೋಗ್ರಾಫರ್‌ಗಳ ಕ್ಯಾಮರಾಗೆ ಬೀದಿಯಲ್ಲಿಯೇ ಪೋಸ್ ಕೊಟ್ಟ ಅನೇಕ ಹೆಣ್ಣು ಮಕ್ಕಳು ಸಖತ್ ಫೇಮಸ್ ಆಗಿದ್ದಾರೆ. ಬೀದಿಗಳಲ್ಲಿ ಅಪರಿಚಿತರನ್ನು ಮಾತನಾಡಿಸಿ ಪರಿಚಯ ಮಾಡಿಕೊಳ್ಳುವ ಫೋಟೋಗ್ರಾಫರ್‌ಗಳು ಜನಜಂಗುಳಿ ಇರುವ ಬೀದಿಯಲ್ಲಿಯೇ ನಿಲ್ಲಿಸಿ ಅವರಿಗೆ ಸೊಗಸಾಗಿ ಪೋಸ್ ನೀಡುವುದಕ್ಕೆ ಹೇಳುತ್ತಾರೆ. ಕ್ಯಾಮರಾ ಕಂಡ ಸುಂದರಿಯರು ಬೀದಿಯಲ್ಲೇ ಸಖತ್ ಪೋಸ್ ನೀಡುತ್ತಾರೆ. ಹಾಗೆಯೇ ಬೀದಿ ಫೋಟ್ರೋಗ್ರಾಫರ್ ಒಬ್ಬರ ಕ್ಯಾಮರಾದಲ್ಲಿ ಜರ್ಮನ್ ಬೆಡಗಿಯೊಬ್ಬರು ಸೆರೆ ಆಗಿದ್ದು, ಅವರು ಈಗ ಸಾಕಷ್ಟು ವೈರಲ್ ಆಗಿದ್ದಾರೆ.
rakesh.photopedia ಎಂಬ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿರುವ Rakesh Naik CK ಎಂಬುವವರು ಈ ಜರ್ಮನ್ ಯುವತಿಯ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ. ಲಿಜ್ ಎಂಬ ಈ ಜರ್ಮನ್ ಮಹಿಳೆ ಬೆಂಗಳೂರಿನ ಬೀದಿಯಲ್ಲಿ ನಡೆದು ಹೋಗುತ್ತಿರುವ ವೇಳೆ ಆಕೆಯನ್ನು ಪರಿಚಯಿಸಿಕೊಂಡ ರಾಕೇಶ್ ಅವರು, ತಾವು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಿ ಫೋಟೋಗೆ ಪೋಸ್ ನೀಡುವಿರಾ ಎಂದು ಕೇಳಿದ್ದಾರೆ. ಇದಕ್ಕೆ ಆ ಜರ್ಮನ್ ಮಹಿಳೆ ಬಹಳ ಖುಷಿ ಖುಷಿಯಾಗಿಯೇ ಫೋಟೋಗೆ ಪೋಸ್ ನೀಡಿದ್ದು, ಲಿಜ್ ಅವರ ಫೋಟೋ ಹಾಗೂ ವೀಡಿಯೋಗಳು ಸಾಕಷ್ಟು ವೈರಲ್ ಆಗಿವೆ. ವೀಡಿಯೋ ನೋಡಿದ ನೆಟ್ಟಿಗರು ಈಕೆ ಹೊಸ ನ್ಯಾಷನಲ್ ಕ್ರಶ್ ಎಂದು ಕಾಮೆಂಟ್ ಮಾಡ್ತಿದ್ದಾರೆ.
ಸ್ಲೀವ್ ಲೆಸ್ ಬ್ಲೌಸ್‌ಗೆ ಕೆಂಪು ನೀಲಿ ಗೋಲ್ಡನ್ ಮಿಶ್ರಿತ ಬಣ್ಣದ ಬಾರ್ಡರ್ ಇರುವ ಕ್ರೀಮ್ ಕಲರ್‌ನ ಸಾರಿ ಧರಿಸಿರುವ ಈಕೆ ಜರ್ಮನಿಯಿಂದ ಭಾರತದ ಬೆಂಗಳೂರಿಗೆ ಪ್ರವಾಸ ಬಂದಿರುವ ಮಹಿಳೆಯಾಗಿದ್ದಾರೆ. ಬೆಂಗಳೂರಿನಲ್ಲಿ ಈ ಹಿಂದೆ ನಾನು ಮೂರು ತಿಂಗಳು ಇದ್ದೆ. ಬೆಂಗಳೂರು ನನಗೆ ತುಂಬಾ ಇಷ್ಟ ಆಯ್ತು ಹೀಗಾಗಿ ನಾನು ಮತ್ತೆ ಬೆಂಗಳೂರಿಗೆ ಬಂದಿದ್ದೇನೆ ಎಂದು ಅವರು ಫೋಟೋಗ್ರಾಫರ್ ಬಳಿ ಹೇಳಿಕೊಂಡಿದ್ದಾರೆ. ಈ ವೀಡಿಯೋ ಹಾಗೂ ಫೋಟೋಗಳು ಭಾರಿ ವೈರಲ್ ಆಗಿದ್ದು, ಅನೇಕರು ಜರ್ಮನ್ ಬ್ಯೂಟಿಯ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ.
ನೀವು ಸೀರೆಯಲ್ಲಿ ತುಂಬಾ ಸೊಗಸಾಗಿ ಕಾಣುತ್ತಿದ್ದೀರಿ ನಾನು ಸ್ಟ್ರೀಟ್ ಫೋಟೋಗ್ರಾಫರ್ ನಾನು ಅಪರಿಚಿತರ ಫೋಟೋಗಳನ್ನು ತೆಗೆಯುತ್ತೇನೆ. ನೀವು ಬೇಸರಿಸದೇ ಇದ್ದರೆ ಫೋಟೋಗಳನ್ನು ತೆಗೆಯುತ್ತೇನೆ ಎಂದು ಫೋಟೋಗ್ರಾಪರ್ ಹೇಳಿದ ಕೂಡಲೇ ಧನ್ಯವಾದ ಹೇಳಿದ ಲಿಜ್ ಯಾವಾಗ ಎಂದು ಕೇಳಿದ್ದಾರೆ. ಈಗಲೇ ಎಂದು ಹೇಳಿದಾಗ ಕೂಡಲೇ ಅವರು ತಮ್ಮ ಸೀರೆಯನ್ನೊಮ್ಮೆ ನೋಡಿಕೊಂಡು ಖುಷಿ ಖುಷಿಯಿಂದಲೇ ಸಿದ್ಧಗೊಂಡಿದ್ದಾರೆ. ಇದೇ ವೇಳೆ ಭಾರತದಲ್ಲಿ ನಿಮಗೆ ಇಷ್ಟದ ಹಾಡು ಯಾವುದು ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಅವರು ತನಗೆ Seedhi saadhi chhori sharabi ho gayi ಹಾಡು ಇಷ್ಟ ಎಂದು ಹೇಳಿದ್ದಾರೆ. ಜೊತೆಗೆ ತಾನು ಮೊದಲಿಗೆ ಇಲ್ಲಿಗೆ ಬಂದಾಗ ಹೋಳಿ ಹಬ್ಬವಿತ್ತು. ಆ ಸಮಯದಲ್ಲಿ ಈ ಹಾಡನ್ನು ಹಾಡಲಾಗ್ತಿತ್ತು. ಈ ಹಾಡು ನನಗೆ ತುಂಬಾ ಇಷ್ಟವಾಯ್ತು ಎಂದು ಹೇಳಿದ್ದಾರೆ. ಇದು ರಣ್‌ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಯೇಹ್ ಜವಾನಿ ಹೇ ದಿವಾನಿ ಸಿನಿಮಾದಲ್ಲಿ ಬರುವ ಬಾಲಮ್ ಪಿಚಕಾರಿ ಹಾಡಿನ ಸಾಲಾಗಿದೆ.