ನಮ್ಮ ಬೆಂಗಳೂರು ಪ್ರತಿಷ್ಠಾನದಿಂದ ದೊಡ್ಡನಕುಂದಿ ಕೆರೆ ಸ್ವಚ್ಚತಾ ಕಾರ್ಯ, ಸ್ಥಳೀಯರಿಂದ ಮೆಚ್ಚುಗೆ!

Published : May 02, 2022, 04:34 PM IST
ನಮ್ಮ ಬೆಂಗಳೂರು ಪ್ರತಿಷ್ಠಾನದಿಂದ ದೊಡ್ಡನಕುಂದಿ ಕೆರೆ ಸ್ವಚ್ಚತಾ ಕಾರ್ಯ, ಸ್ಥಳೀಯರಿಂದ ಮೆಚ್ಚುಗೆ!

ಸಾರಾಂಶ

ಬೆಂಗಳೂರಿನ ಕೆರೆಗೆ ಹೊಸ ಜೀವ ನೀಡಿದ NBF 3 ಕೀ.ಮಿ ವ್ಯಾಪ್ತಿಯಲ್ಲಿ ಶುಚಿ ಕಾರ್ಯ 120 ಕೆಜಿ ಪ್ಲಾಸ್ಟಿಕ್, ಗಾಜಿನ್ ಬಾಟಲಿ ಸಂಗ್ರಹ  

ಬೆಂಗಳೂರು(ಮೇ.02): ಬೆಂಗಳೂರಿನ ಕೆರೆಗಳಿಗೆ ಕಾಯಕಲ್ಪ ನೀಡುವ ಹಲವು ಪ್ರಯತ್ನಗಳು ನಡೆಯುತ್ತಿದೆ. ಇದೀಗ ನಮ್ಮ ಬೆಂಗಳೂರು ಫೌಂಡೇಷನ್(NBF) ಈ ಮಹತ್ ಕಾರ್ಯದಲ್ಲಿ ಕೈಜೋಡಿಸಿದೆ. ಸಾಮಾಜಿಕ ಕಳಕಳಿ, ಪರಿಸರ ನೈರ್ಮಲ್ಯ ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ NBF ಇದೀಗ ದೊಡ್ಡನಕುಂದಿ ಕೆರೆಯ ವ್ಯಾಪ್ತಿ ಪ್ರದೇಶವನ್ನು ಪ್ಲಾಸ್ಟಿಕ್, ಕಸಗಳಿಂದ ಮುಕ್ತವಾಗಿಸಿದೆ.

ಆದರ್ಶ್ ವಿಸ್ಟಾ ರೆಸಿಡೆಂಟ್ಸ್ ಎಸ್‌ಸಿ ಹಾಗೂ ರೋಟರಿ ಇ ಕನೆಕ್ಟ್ ಮತ್ತು ರೋಟರಿ ಇಂಟರಾಕ್ಟ್ ಸಹಯೋಗದಲ್ಲಿ ನಮ್ಮ ಬೆಂಗಳೂರು ಫೌಂಡೇಷನ್  ಸ್ವಚ್ಚತಾ ಕಾರ್ಯವನ್ನು ಯಶಸ್ವಿಯಾಗಿ ಮಾಡಿದೆ. ಎಪ್ರಿಲ್ 30 ರಂದು ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಶುಚಿ ಕಾರ್ಯ ಮಾಡಲಾಗಿತ್ತು.  50ಕ್ಕೂ ಹೆಚ್ಚು ಸ್ವಯಂ ಸೇವಕರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಆನೆ ಕಾರಿಡಾರ್‌ ಫಾಸ್ಟ್ ಟ್ರ್ಯಾಕ್ ಸರ್ವೇ.. ಡಿಸಿಗೆ NBF ಅಭಿನಂದನೆ

ದೊಡ್ಡನಕುಂದಿ ಕೆರೆಯ 3 ಕಿಲೋಮೀಟರ್  ವ್ಯಾಪ್ತಿಯಲ್ಲಿ ಬಿಸಾಡಿದ ಪ್ಲಾಸ್ಟಿಕ್, ಗಾಜಿನ ಬಾಟಲಿ ಸೇರಿದಂತೆ ತಾಜ್ಯಗಳನ್ನು ಹೆಕ್ಕಿ ತೆಗೆದು ಹೊಸ ರೂಪ ನೀಡಲಾಗಿದೆ. ತ್ಯಾಜ್ಯಗಳನ್ನು 15ಕ್ಕೂ ಹೆಚ್ಚು ಕಸದ ಚೀಲಗಳಲ್ಲಿ ಸಂಗ್ರಹಿಸಲಾಗಿತ್ತು. 120ಕೆಜಿ ಪ್ಲಾಸ್ಟಿಕ್ ಹಾಗೂ ಗಾಜಿನ ಬಾಟಲಿಗಳನ್ನು ಸಂಗ್ರಹಿಸಲಾಗಿತ್ತು.

NBF ಸ್ವಯಂಸೇವಕರು ಇತರ ಸಂಸ್ಥೆಗಳ ಸಹಯೋಗದೊಂದಿಗೆ ದೊಡ್ಡನಕುಂದಿ ಕೆರೆ ಬಳಿ ಸ್ವಚ್ಚತಾ ಕಾರ್ಯಕ್ಕೆ ಮುಂದಾದರು. ನಾವು ಸೇರಿದಾಗ ಸ್ಥಳೀಯರು ಉತ್ತಮ ಸಾಥ್ ನೀಡಿದರು. ಇದರಿಂದ ನಮ್ಮ ಸಂಖ್ಯೆದೊಡ್ಡಾಯಿತು. ಎಲ್ಲರಿಗೂ ಕಸದ ಚೀಲ ಹಾಗೂ ಗ್ಲೌಸ್ ನೀಡಲಾಯಿತು. ಸ್ವಯಂ ಸೇವಕರು ಕೆರೆಯ ಸುತ್ತ ಮುತ್ತ ಬಿಸಾಡಿದ ಪ್ಲಾಸ್ಟಿಕ್, ನೀರಿನ ಬಾಟಲಿ, ಪ್ಲಾಸ್ಟಿಕ್ ಬಾಟಲಿ, ಕ್ಯಾಪ್, ಬ್ಯಾಗ್, ಕವರ್, ಡೆಲಿವರಿ ಪ್ಯಾಕೆಟ್, ಪಾನ್, ಕ್ಯಾಂಡಿ ರ್ಯಾಪರ್ ಸೇರಿದಂತೆ ತ್ಯಾಜ್ಯಗಳನ್ನು ಹೆಕ್ಕಿ ತೆಗೆಯಲಾಯಿತು ಎಂದು ಸ್ವಯಂ ಸೇವಕರು ಹೇಳಿದ್ದಾರೆ.

ಕೆರೆ ಸುತ್ತ ಮುತ್ತಲಿನ ತ್ಯಾಜ್ಯಗಳನ್ನು ಹೆಕ್ಕಿ ತೆಗೆದು ಇಡೀ ವಾತಾವರಣವನ್ನು ಶುಚಿಗೊಳಿಸಲಾಗಿದೆ. ನಮ್ಮ ಈ ಕಾರ್ಯದಿಂದ ಇದೀಗ ಸ್ಥಳೀಯರೂ ಬಿದ್ದಿರುವ ಕಸಗಳನ್ನು ಹೆಕ್ಕಿ ಕಸದ ಬುಟ್ಟಿಗೆ ಹಾಕುತ್ತಿದ್ದಾರೆ. ಇದರಿಂದ ನಮ್ಮ ಡ್ರೈವ್ ಯಶಸ್ವಿಯಾಗಿದೆ. ಈ ತೃಪ್ತಿ ನಮಗಿದೆ ಎಂದು ಸ್ವಯಂ ಸೇವಕರು ಹೇಳಿದ್ದಾರೆ.

NBF ನಿಂದ ವೃಕ್ಷ ಅಭಿಯಾನ: ಬೆಂಗಳೂರು ಸುತ್ತಮುತ್ತ 75 ಸಾವಿರ ಗಿಡಗಳನ್ನು ನೆಡುವ ಗುರಿ

ಕಳೆದ 13 ವರ್ಷಗಳಿಂದ ಕರೆ ಸಮೀಪದಲ್ಲಿ ವಾಸಿಸುತ್ತಿದ್ದೇನೆ. ಈ ಕೆರೆ ನಶಿಸುತ್ತಿರುವುದನ್ನು ನೋಡುತ್ತಲೇ ಇದ್ದೇನೆ. ತ್ಯಾಜ್ಯ, ಪ್ಲಾಸ್ಟಿಕ್ ದೊಡ್ಡನಕುಂದಿ ಕೆರೆಯನ್ನು ನುಂಗುತ್ತಿದೆ. ಪಾಚಿ ಆಕ್ರಮಿಸಿಕೊಳ್ಳುತ್ತಿದೆ. ಹಿಂದೆ ನಿರ್ಮಲವಾಗಿದ್ದ ನೀರು ಇದೀಗ ಬರಿದಾಗುತ್ತಿದೆ. ಕೊಳಕು ನೀರಾಗಿ ಪರಿವರ್ತನೆಯಾಗಿದೆ. ಇದೀಗ ತ್ಯಾಜ್ಯಗಳನ್ನು ಹೆಕ್ಕಿ ತೆಗೆದು ಶುಚಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡನಕುಂದಿ ಕೆರೆಗೆ ಸರ್ಕಾರ ಪುನರುಜ್ಜೀವ ನೀಡಬೇಕು ಎಂದು ಸ್ಥಳೀಯರು ಹೇಳಿದ್ದಾರೆ.

PREV
Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಬೆಳಗಾವಿ ಅಧಿವೇಶನ: 89 ಸಂಘಟನೆಗಳಿಂದ ಪ್ರತಿಭಟನೆಗೆ ಕರೆ, 6000ಕ್ಕೂ ಹೆಚ್ಚು ಪೊಲೀಸರಿಂದ ಸರ್ಪಗಾವಲು