ಗಣಿ ರೀತಿ ನೆರೆಗೂ ಸಿದ್ದು ನೇತೃತ್ವದಲ್ಲಿ ಪಾದಯಾತ್ರೆ

By Kannadaprabha NewsFirst Published Oct 24, 2019, 1:49 PM IST
Highlights

ನೆರೆ ಸಂತ್ರಸ್ತರ ಸಂಕಷ್ಟಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಮರ್ಪಕವಾಗಿ ಸ್ಪಂದಿಸದಿರುವ ಬಗ್ಗೆ ಜಾಗೃತಿ ಮೂಡಿಸಿ ಬಿಜೆಪಿ ವಿರುದ್ಧ ಜನಾಂದೋಲನ ರೂಪಿಸಲು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ನವೆಂಬರ್‌ನಲ್ಲಿ ಬಾಗಲ ಕೋಟೆಯಿಂದ ಬೆಳಗಾವಿವರೆಗೆ ಪಾದ ಯಾತ್ರೆ ನಡೆಸಲಿದ್ದಾರೆ.

ಬೆಂಗಳೂರು(ಅ.24): ನೆರೆ ಸಂತ್ರಸ್ತರ ಸಂಕಷ್ಟಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಮರ್ಪಕವಾಗಿ ಸ್ಪಂದಿಸದಿರುವ ಬಗ್ಗೆ ಜಾಗೃತಿ ಮೂಡಿಸಿ ಬಿಜೆಪಿ ವಿರುದ್ಧ ಜನಾಂದೋಲನ ರೂಪಿಸಲು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ನವೆಂಬರ್‌ನಲ್ಲಿ ಬಾಗಲ ಕೋಟೆಯಿಂದ ಬೆಳಗಾವಿವರೆಗೆ ಪಾದ ಯಾತ್ರೆ ನಡೆಸಲಿದ್ದಾರೆ.

ಈ ಬಗ್ಗೆ ಚರ್ಚಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಬುಧವಾರ ನಡೆದ ಉತ್ತರ ಕರ್ನಾಟಕ ಭಾಗದ ಶಾಸಕರು, ನಾಯಕರು ಹಾಗೂ ಜಿಲ್ಲಾಧ್ಯಕ್ಷರ ಸಭೆಯಲ್ಲಿ ಬಾಗಲಕೋಟೆಯಿಂದ ಆರಂಭಿಸಿ ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿವರೆಗೆ 100 ಕಿ.ಮೀ. ಪಾದಯಾತ್ರೆ ನಡೆಸಿ ಬೆಳಗಾವಿಯಲ್ಲಿ ಸಮಾವೇಶ ನಡೆಸುವ ಮೂಲಕ ಅಂತ್ಯಗೊಳಿಸಲು ಯೋಜಿಸಲಾಗಿದೆ.

ಸಿದ್ದು ನೋಡಲು ಬಂದ 99ರ ಅಜ್ಜಿ; ಮಾಜಿ ಸಿಎಂ ಪ್ರತಿಕ್ರಿಯೆ ನೋಡಿ

ಈ ಹಿಂದೆ ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಬಳ್ಳಾರಿಗೆ ನಡೆಸಿದ್ದ ಪಾದಯಾತ್ರೆಯಿಂದ ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಅನುಕೂಲವಾಗಿತ್ತು. ಅದೇ ರೀತಿಯಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ ಹೋರಾಟ ಆಯೋಜಿಸುವ ಮೂಲಕ ಬಿಜೆಪಿ ವೈಫಲ್ಯಗಳನ್ನು ಜನರ ಮುಂದಿಡಲು ಕಾಂಗ್ರೆಸ್ ತೀರ್ಮಾ ನಿಸಿದೆ. ಸಿದ್ದರಾಮಯ್ಯ ನೇತೃತ್ವದ ಈ ಪಾದಯಾತ್ರೆಯಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳಲಿದ್ದಾರೆ.

ಸುಪ್ರೀಂ ತೀರ್ಮಾನ ನೋಡಿ ಹೋರಾಟ: ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ಪಾದಯಾತ್ರೆ ಯನ್ನು ಬಳಸಿಕೊಳ್ಳುವುದು ಕಾಂಗ್ರೆಸ್‌ನ ಉದ್ದೇಶ. ಆದರೆ, ಉಪ ಚುನಾವಣೆ ನಡೆಯುವ ಬಗ್ಗೆಯೇ ಕಾಂಗ್ರೆಸ್ ನಾಯಕತ್ವಕ್ಕೆ ತುಸು ಅನುಮಾನವಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಅನರ್ಹ ಶಾಸಕರ ಕುರಿತು ಕೈಗೊಂಡಿರುವ ತೀರ್ಮಾನವನ್ನು ಪುನರ್ ಪರಿಶೀಲಿಸುವಂತೆ ಸ್ಪೀಕರ್ ಗೆ ಸೂಚಿಸಿದರೆ ಆಗ ಉಪ ಚುನಾವಣೆ ಸಾಧ್ಯತೆಯೇ ಇಲ್ಲವಾಗುತ್ತದೆ. ಹೀಗಾಗಿ ತೀರ್ಪು ನೋಡಿಕೊಂಡು ಪಾದಯಾತ್ರೆ ದಿನಾಂಕ ನಿಗದಿಪಡಿಸಲಾಗುತ್ತದೆ. 

ಬಾದಾಮಿ: ಸ್ವಂತ ಕಾರು ಬಿಟ್ಟು ಪೊಲೀಸರ ಜೀಪು ಹತ್ತಿದ ಸಿದ್ದರಾಮಯ್ಯ

click me!