ಅಕ್ಟೋಬರ್ ಮಾಸಕ್ಕೆ ಸೀಮಿತವಾದಂತೆ ಕಳೆದ ಎರಡು ದಶಕಗಳ ಅತಿ ದೊಡ್ಡ ಮಳೆಯನ್ನು ಪ್ರಸಕ್ತ ವರ್ಷ ರಾಜ್ಯ ಕಂಡಿದೆ. ಕೆಎಸ್‌ಎನ್‌ಡಿಎಂಸಿ ಪ್ರಕಾರ ಪ್ರಸಕ್ತ ವರ್ಷದ ಅಕ್ಟೋಬರ್ 1ರಿಂದ 21 ವರೆಗೆ 166 ಮಿ.ಮೀ. ಮಳೆಯಾಗಿದ್ದು, ಇದು ವಾಡಿಕೆಗಿಂತ 63 ಪಟ್ಟು ಅಧಿಕ ಹಾಗೂ ಎರಡು ದಶಕಗಳ ದಾಖಲೆ ಆಗಿದೆ.
ಬೆಂಗಳೂರು(ಅ.24): ಅಕ್ಟೋಬರ್ ಮಾಸಕ್ಕೆ ಸೀಮಿತವಾದಂತೆ ಕಳೆದ ಎರಡು ದಶಕಗಳ ಅತಿ ದೊಡ್ಡ ಮಳೆಯನ್ನು ಪ್ರಸಕ್ತ ವರ್ಷ ರಾಜ್ಯ ಕಂಡಿದೆ. ಅಷ್ಟೇ ಅಲ್ಲ, ಅಕ್ಟೋಬರ್ ಮಾಸದ ಮೂರನೇ ವಾರದಲ್ಲಾಗುವ ಮಳೆಯನ್ನು ಪರಿಗಣನೆಗೆ ತೆಗೆದುಕೊಂಡರೆ ಈ ಬಾರಿ ಸುರಿದ ಮಳೆ ಕಳೆದ 48 ವರ್ಷಗಳ ಎರಡನೇ ಅತಿ ದೊಡ್ಡ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ದೃಢಪಡಿಸಿದೆ.
ಕೆಎಸ್‌ಎನ್‌ಡಿಎಂಸಿ ಪ್ರಕಾರ ಪ್ರಸಕ್ತ ವರ್ಷದ ಅಕ್ಟೋಬರ್ 1ರಿಂದ 21 ವರೆಗೆ 166 ಮಿ.ಮೀ. ಮಳೆಯಾಗಿದ್ದು, ಇದು ವಾಡಿಕೆಗಿಂತ 63 ಪಟ್ಟು ಅಧಿಕ ಹಾಗೂ ಎರಡು ದಶಕಗಳ ದಾಖಲೆ ಆಗಿದೆ. ಈ ಬಾರಿ ಸುರಿದ ಪ್ರಮಾಣಕ್ಕಿಂತ ಹೆಚ್ಚಿನ ಮಳೆ 1999ರಲ್ಲಿ ಆಗಿತ್ತು. ಆ ವರ್ಷ ವಾಡಿಕೆಗಿಂತ ಶೇ.88ರಷ್ಟುಹೆಚ್ಚು ಮಳೆಯಾಗಿತ್ತು.
undefined
ನೆರೆ: ಸಾಂಕ್ರಾಮಿಕ ರೋಗ ತಡೆಗೆ ಸರ್ಕಾರ ಆದೇಶ
ಇನ್ನು ಅಕ್ಟೋಬರ್ ಮೂರನೇ ವಾರದಲ್ಲಿ (ಅ.15ರಿಂದ ಅ.21) ಸುರಿದ ಮಳೆಯನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಂಡರೆ ಅದು 48 ವರ್ಷಗಳ ಅವಧಿಯಲ್ಲಿ ಸುರಿದ ಎರಡನೇ ಅತಿ ಹೆಚ್ಚು ಮಳೆ. ಅಕ್ಟೋಬರ್‌ನ ಮೂರನೇ ವಾರದಲ್ಲಿ 68 ಮಿ.ಮೀ. ಮಳೆಯಾಗಿದೆ. ಇದಕ್ಕೂ ಮುನ್ನ ಅಂದರೆ 1993ರಲ್ಲಿ ಈ ಅವಧಿಯಲ್ಲಿ ಈ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾಗಿತ್ತು.
6 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ:
ಅಕ್ಟೋಬರ್ 3ನೇ ವಾರದಲ್ಲಿ ಇಡೀ ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದ ಮಳೆಯಾಗಿದ್ದರೂ ಬೆಂಗಳೂರು ನಗರ, ಯಾದಗಿರಿ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿದೆ. ಬೆಂಗಳೂರು ನಗರ ವಾಡಿಕೆಗಿಂತ ಶೇ.-47ರಷ್ಟುಮಳೆ ಕೊರತೆ ಅನುಭವಿಸಿದರೆ, ಯಾದಗಿರಿ ಶೇ.-44, ರಾಮನಗರ ಶೇ.-26, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ತಲಾ ಶೇ.-15, ರಾಯಚೂರು ಶೇ.-6ರಷ್ಟುಮಳೆ ಕೊರತೆ ಉಂಟಾಗಿದೆ. ಇನ್ನು ಅಕ್ಟೋಬರ್ ಇಡೀ ತಿಂಗಳ ಮಳೆ ಪ್ರಮಾಣ ಗಮನಿಸಿದೆ, ಯಾದಗಿರಿ ಶೇ.-47 ಹಾಗೂ ರಾಯಚೂರು ಶೇ.-22ರಷ್ಟುಮಳೆ ಕೊರತೆ ಎದುರಿಸಿವೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.
ತಗ್ಗಿದ ಮಳೆ ಆರ್ಭಟ: ಕುಗ್ಗಿದ ನೆರೆ
ಅಕ್ಟೋಬರ್‌ನಲ್ಲಿ ಸುರಿದ ಮಳೆ ಕಳೆದ 20 ವರ್ಷದಲ್ಲಿ ಅತ್ಯಧಿಕ ಮಳೆಯಾಗಿದೆ. ಇನ್ನು ಮೂರನೇ ವಾರದಲ್ಲಿ 48 ವರ್ಷದಲ್ಲೇ ಎರಡನೇ ಅತಿ ಹೆಚ್ಚಿನ ಮಳೆಯಾಗಿದೆ. ಇನ್ನೂ ಎರಡ್ಮೂರು ದಿನ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಕ್ಟೋಬರ್ ಮಳೆ ಸಾರ್ವಕಾಲಿಕ ದಾಖಲೆ ಮಳೆಯಾಗುವ ಲಕ್ಷಣ ಕಾಣುತ್ತಿದೆ ಎಂದುಬ ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.
ಭಾರೀ ಮಳೆ: ಗದಗನಲ್ಲಿ ಶವಸಂಸ್ಕಾರಕ್ಕೂ ಅವಕಾಶ ನೀಡದ ವರುಣ
ಕಳೆದ 4 ವರ್ಷದ ಅಕ್ಟೋಬರ್ ಮಳೆ ವಿವರ (ಮಿ.ಮೀ)(ಅ.1 ರಿಂದ ಅ.21)
ಪ್ರದೇಶ ವಾಡಿಕೆ ಮಳೆ 2015 2016 2017 2018 2019
ದಕ್ಷಿಣ ಒಳನಾಡು 109 107(ಶೇ.-2) 22 (ಶೇ.-80) 193 (ಶೇ.+77) 96(ಶೇ.-12) 162(ಶೇ.+49)
ಉತ್ತರ ಒಳನಾಡು 84 55(ಶೇ.-35) 22(ಶೇ.-74) 115(ಶೇ.+37) 38(ಶೇ.-55) 132(ಶೇ.+57)
ಮಲೆನಾಡು 118 97(ಶೇ.-18) 29(ಶೇ.-75) 97(ಶೇ.-18) 104(ಶೇ.-12) 217(ಶೇ.+84)
ಕರಾವಳಿ 139 134(ಶೇ-4) 79(ಶೇ.-43) 151(ಶೇ.+9) 156(ಶೇ.+12) 272(ಶೇ.+96)
ಒಟ್ಟು 102 84(ಶೇ.-18) 28(ಶೇ.73) 140(ಶೇ.+37) 76(ಶೇ.-25) 166(ಶೇ.+63)
ಅ.15 ರಿಂದ 21ರ ಅವಧಿಯಲ್ಲಿ ಸುರಿದ ಮಳೆ ವಿವರ
ಪ್ರದೇಶ ವಾಡಿಕೆ ಮಳೆ ಸುರಿದ ಮಳೆ ಶೇಕಡಾ ಪ್ರಮಾಣ
ದಕ್ಷಿಣ ಒಳನಾಡು 28 46 64
ಉತ್ತರ ಒಳನಾಡು 19 52 174
ಮಲೆನಾಡು 33 102 209
ಕರಾವಳಿ 36 160 344
ಒಟ್ಟು 25 68 172
-ವಿಶ್ವನಾಥ ಮಲೇಬೆನ್ನೂರು