5 ಸಾವಿರ ಮನೆ ನಿರ್ಮಿಸಲು ವಸತಿ ಇಲಾಖೆಗೆ 96 ಎಕ್ರೆ

By Kannadaprabha NewsFirst Published Oct 24, 2019, 11:45 AM IST
Highlights

'ಸರ್ವರಿಗೂ ಸೂರು’ ಯೋಜನೆಯಡಿ ಚಿಕ್ಕಬಳ್ಳಾಪುರದಲ್ಲಿ ಸುಮಾರು 5000 ವಸತಿರಹಿತರಿಗೆ ಮನೆ ನಿರ್ಮಿಸಿಕೊಡಲು ಕಂದಾಯ ಇಲಾಖೆಗೆ ಸೇರಿದ 96 ಎಕರೆ ಭೂಮಿಯನ್ನು ವಸತಿ ಇಲಾಖೆಗೆ ಹಸ್ತಾಂತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
 

ಬೆಂಗಳೂರು(ಅ.24): ‘ಸರ್ವರಿಗೂ ಸೂರು’ ಯೋಜನೆಯಡಿ ಚಿಕ್ಕಬಳ್ಳಾಪುರದಲ್ಲಿ ಸುಮಾರು 5000 ವಸತಿರಹಿತರಿಗೆ ಮನೆ ನಿರ್ಮಿಸಿಕೊಡಲು ಕಂದಾಯ ಇಲಾಖೆಗೆ ಸೇರಿದ 96 ಎಕರೆ ಭೂಮಿಯನ್ನು ವಸತಿ ಇಲಾಖೆಗೆ ಹಸ್ತಾಂತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸುಮಾರು 5000 ನಿವೇಶನಗಳನ್ನು ರಚಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವಿನೊಂದಿಗೆ ಒಂದು ವರ್ಷದಲ್ಲಿ ಮನೆ ನಿರ್ಮಿಸಿಕೊಡುವ ಉದ್ದೇಶವನ್ನು ಹೊಂದಲಾಗಿದೆ. ಭೂಮಿ ಹಸ್ತಾಂತರಿಸುವ ಸಂಬಂಧ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕನ್ನಡಿಗರಿಗೆ ಕ್ಲರ್ಕ್ ಪರೀಕ್ಷೆಯಲ್ಲೂ ‘ಕೇರಳ’ ತಾರತಮ್ಯ!

ಚಿಕ್ಕಬಳ್ಳಾಪುರದ ಮರಳುಕುಂಟೆ ಗ್ರಾಮದಲ್ಲಿ 61 ಎಕರೆ, ಆವಲಹಳ್ಳಿಯಲ್ಲಿ 10 ಎಕರೆ, ಚಿಕ್ಕತಿಮ್ಮನಹಳ್ಳಿಯಲ್ಲಿ 25 ಎಕರೆ ಸೇರಿ ಒಟ್ಟು 96 ಎಕರೆ ಭೂಮಿ ಈವರೆಗೆ ಕಂದಾಯ ಇಲಾಖೆಗೆ ಸೇರಿತ್ತು. ವಸತಿರಹಿತರಿಗೆ ಮನೆ ನಿರ್ಮಿಸಿಕೊಡಬೇಕೆಂದು ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಭೂಮಿಯನ್ನು ವಸತಿ ಇಲಾಖೆಗೆ ಹಸ್ತಾಂತರಿಸಲು ತೀರ್ಮಾನಿಸಿದೆ.

ಬಿಜೆಪಿಗೂ ಅನರ್ಹರಿಗೂ ಸಂಬಂಧವಿಲ್ಲ: ಸವದಿ

click me!