ಬೆಂಗಳೂರು ರಾಗಿಗುಡ್ಡ ಮೆಟ್ರೋ ನಿಲ್ದಾಣದ ಬಳಿ ಬೆಂಕಿ ಅವಘಢ, ತ್ಯಾಜ್ಯ ಸ್ಥಳದಲ್ಲಿ ಘಟನೆ

Published : Nov 21, 2026, 09:18 PM ISTUpdated : Nov 21, 2026, 09:23 PM IST
Blaze Erupts near Ragigudda Metro Station

ಸಾರಾಂಶ

ಬೆಂಗಳೂರಿನ ರಾಗಿಗುಡ್ಡ ಮೆಟ್ರೋ ನಿಲ್ದಾಣ ಬಳಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಘಟನೆ ನಡೆದಿದೆ. ಮೆಟ್ರೋ ನಿಲ್ದಾಣದ ಪಕ್ಕದಲ್ಲೇ ಇದ್ದ ತ್ಯಾಜ್ಯ ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡು ಘಟನೆ ಸಂಭವಿಸಿದೆ.

ಬೆಂಗಳೂರು (ನ.21) ಬೆಂಗಳೂರಿನ ರಾಗಿಗುಡ್ಡ ಮೆಟ್ರೋ ನಿಲ್ದಾಣದ ಬಳಿ ಬೆಂಕಿ ಅವಘಡ ಸಂಭವಿಸಿದೆ. ಯೆಲ್ಲೋ ಲೈನ್ ಮೆಟ್ರೋ ಲೈನ್‌ನಲ್ಲಿ ಬರುವ ರಾಗಿ ಗುಡ್ಡ ಮೆಟ್ರೋ ನಿಲ್ದಾಣದ ಪಕ್ಕದಲ್ಲೇ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಕೆಲಕಾಲ ಮೆಟ್ರೋ ನಿಲ್ದಾಣ ಬಳಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೆಟ್ರೋ ನಿಲ್ದಾಣದ ಪಕ್ಕದಲ್ಲಿನ ಕಸ ಹಾಕುವ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೆಲವೇ ಕ್ಷಣದಲ್ಲಿ ಬೆಂಕಿ ಜ್ವಾಲೆಯಾಗಿ ಆವರಿಸಿಕೊಂಡು ಆತಂಕಕಾರಿ ಘಟನೆ ನಡೆದಿತ್ತು. ತಕ್ಷಣವೇ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ತ್ಯಾಜ್ಯ ಬಿಸಾಡಿದ್ದ ಜಾಗದಲ್ಲಿ ಕಾಣಿಸಿಕೊಂಡ ಬೆಂಕಿ

ರಾಗಿಗುಡ್ಡ ಮೆಟ್ರೋ ನಿಲ್ದಾಣದ ಪಕ್ಕದಲ್ಲಿ ತ್ಯಾಜ್ಯ ಬಿಸಾಡುತ್ತಿದ್ದ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಸದ ರಾಶಿಗೆ ಅಪರಿಚಿತರು ಸಿಗರೇಟು ಸೇದಿ ಬಿಸಾಡಿರುವ ಅನುಮಾನ ವ್ಯಕ್ತವಾಗಿದೆ. ಸ್ಥಳದಲ್ಲಿನ ಸಿಸಿಟಿವಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಸದ್ಯ ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದು ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಸದ ರಾಶಿಗೆ ಬೆಂಕಿ ಹೊತ್ತಿಕೊಂಡು ಜ್ವಾಲೆ ವ್ಯಾಪಕವಾಗಿ ಹರಡಿತ್ತು. ರಾಗಿಗುಡ್ಡ ಮೆಟ್ರೋ ನಿಲ್ದಾಣದ ಪಕ್ಕದಲ್ಲಿ ಬೆಂಕಿಯ ಕೆನ್ನಾಲಗೆ ಆವರಿಸಿತ್ತು. ಇದರಿಂದ ಟ್ರಾಫಿಕ್ ಜಾಮ್ ಕೂಡ ಸಂಭವಿಸಿದೆ. ಕಸದ ರಾಶಿ ಸಂಪೂರ್ಣ ಬೆಂಕಿ ಆವರಿಸಿಕೊಂಡ ಪರಿಣಾಮ ಹೊತ್ತಿ ಉರಿದಿದೆ. ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇತ್ತ ರಾಗಿ ಗುಡ್ಡ ಮೆಟ್ರೋ ನಿಲ್ದಾಣಕ್ಕೂ ಯಾವುದೇ ಸಮಸ್ಯೆಯಾಗಿಲ್ಲ. ಮೆಟ್ರೋ ರೈಲುಗಳು ಯಾವುದೇ ಆತಂಕವಿಲ್ಲದೆ ಸೇವೆ ನೀಡಿದೆ.

ರಾಷ್ಟ್ರೀಯ ವಿದ್ಯಾಲಯದಿಂದ ಆರಂಭಗೊಳ್ಳುವ ಯೆಲ್ಲೋ ಲೈನ್ ಮೆಟ್ರೋದ ಎರಡನೇ ನಿಲ್ದಾಣ ರಾಗಿ ಗುಡ್ಡ. 19.15 ಕಿಲೋಮೀಟರ್ ಉದ್ದರ ಯೆಲ್ಲೋ ಲೈನ್ ಮೆಟ್ರೋ ನಿಲ್ದಾಣ, ಎಲೆಕ್ಟ್ರಾನಿಕ್‌ ಸಿಟಿ, ಬಯೋಕಾನ್ ಹೆಬ್ಬಗೋಡಿ ಸೇರಿದಂತೆ ಬೊಮ್ಮಸಂದ್ರವರೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಭಾಗದ ಜನರಿಗೆ ಯೆಲ್ಲೋ ಲೈನ್ ಮೆಟ್ರೋ ಪ್ರಮುಖ ಸಂಪರ್ಕ ಸೇತುವೆಯಾಗಿದೆ. ಇಷ್ಟೇ ಅಲ್ಲ ಟ್ರಾಫಿಕ್ ದಟ್ಟಣೆ ನಡುವೆ ಜನರು ತಕ್ಕ ಸಮಯದಲ್ಲಿ ಕಚೇರಿ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳಿಗೆ ತಲುಪುವುದು ಸುಲಭವಾಗಿದೆ.

PREV
Read more Articles on
click me!

Recommended Stories

2027ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರ್ಕಾರ, ಒಟ್ಟು ರಜೆ ಎಷ್ಟಿದೆ?
X ಪೋಸ್ಟ್ ಅಲ್ಲ ಬೇಡಿಕೆ ಈಡೇರಿಸಿ, ಅಣ್ಣನಾಗಿ ಸಿಎಂ ಮಾಡಿದ ಮನವಿ ತಿರಸ್ಕರಿಸಿದ ಆಶಾ ಕಾರ್ಯಕರ್ತೆಯರು