X ಪೋಸ್ಟ್ ಅಲ್ಲ ಬೇಡಿಕೆ ಈಡೇರಿಸಿ, ಅಣ್ಣನಾಗಿ ಸಿಎಂ ಮಾಡಿದ ಮನವಿ ತಿರಸ್ಕರಿಸಿದ ಆಶಾ ಕಾರ್ಯಕರ್ತೆಯರು

Published : Nov 21, 2026, 06:22 PM IST
ASHA Workers Turn Down CM Appeal

ಸಾರಾಂಶ

ಆಶಾ ಕಾರ್ಯಕರ್ತೆಯರಲ್ಲಿ ಪ್ರತಿಭಟನೆ ಕೈಬಿಡುವಂತೆ ಸಿಎಂ ಡಿಕೆ ಶಿವುಕಮಾರ್ ಮಾಡಿದ ಮನವಿಯನ್ನು ಹೋರಾಟಗಾರರು ತಿರಸ್ಕರಿಸಿದ್ದಾರೆ. ಎಕ್ಸ್ ಮೂಲಕ ಪೋಸ್ಟ್ ಮಾಡುವುದಲ್ಲ, ಇಲ್ಲಿಗೆ ಬನ್ನಿ, ಲಿಖಿತ ಬರವಸೆ ನೀಡಿ ಎಂದು ಪಟ್ಟು ಹಿಡಿದಿದ್ದಾರೆ.

ಬೆಂಗಳೂರು (ನ.21) ಪ್ರೋತ್ಸಾಹ ಧನ ಸೇರಿ ವಿವಿದ ಬೇಡಿಕೆಗಳ ಈಡೇರಿಕೆಗೆ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಲಿಖಿತ ಭರವಸೆ ನೀಡಿದ ತಾವು ಹೋರಾಟ ಕೈಬಿಡುವ ಪ್ರಶ್ನಯೇ ಇಲ್ಲ ಎಂದಿರುವ ಆಶಾ ಕಾರ್ಯಕರ್ತರೆಯರ ಬಳಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ಅಣ್ಣನಾಗಿ ಮನವಿ ಮಾಡುತ್ತಿದ್ದೇನೆ, ಸಂಪುಟದ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಎಕ್ಸ್ ಮೂಲಕ ಮನವಿ ಮಾಡಿದ್ದಾರೆ. ಆದರೆ ಡಿಕೆ ಶಿವಕುಮಾರ್ ಮನವಿಯನ್ನು ಆಶಾ ಕಾರ್ಯಕರ್ತೆಯರು ತಿರಸ್ಕರಿಸಿದ್ದಾರೆ. ಲಿಖಿತ ಭರವಸೆ ನೀಡಿದ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ್ದಾರೆ.

ಆಶಾ ಸಹೋದರಿಯರಲ್ಲಿ ಸರ್ಕಾರದ ಪರವಾಗಿ ನನ್ನ ಕಳಕಳಿಯ ಮನವಿ ಎಂದು ಡಿಕೆ ಶಿವಕುಮಾರ್ ಎಕ್ಸ್ ಮೂಲಕ ಪೋಸ್ಟ್ ಮಾಡಿದ್ದಾರೆ. ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗಾಗಿ ನೀವು ನಡೆಸುತ್ತಿರುವ ಹೋರಾಟದ ನೋವು ಮತ್ತು ಸಂಕಷ್ಟ ನನಗೆ ಅರ್ಥವಾಗುತ್ತದೆ. ನಿಮ್ಮ ಕುಟುಂಬದವರನ್ನು ಬಿಟ್ಟು ಹಗಲು ರಾತ್ರಿ ಎನ್ನದೆ ಹೋರಾಟ ಮಾಡುತ್ತಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ನೀವು ನನಗೆ ಕೇವಲ ಆಶಾ ಕಾರ್ಯಕರ್ತೆಯರಲ್ಲ, ನನ್ನ ಸಹೋದರಿಯರಿದ್ದಂತೆ ಎಂದು ಡಿಕೆ ಶಿವಕುಮಾರ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ನಿಮ್ಮ ಬೇಡಿಕೆಗಳಿಗೆ ಮುಂದಿನ ದಿನಗಳಲ್ಲಿ ಸಮಗ್ರ ಮತ್ತು ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ. ಸಂಪುಟದ ಜೊತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ನಿಮ್ಮೊಂದಿಗೆ ನಾವಿದ್ದೇವೆ. ಒಬ್ಬ ಅಣ್ಣನಾಗಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ನನ್ನ ಮನವಿಗೆ ಸ್ಪಂದಿಸಿ, ಹೋರಾಟವನ್ನು ಕೈಬಿಡಿ. ನಿಮ್ಮ ಸೇವೆ, ಶ್ರಮ ಮತ್ತು ತ್ಯಾಗವನ್ನು ನಾವು ಗೌರವಿಸುತ್ತೇವೆ. ನಿಮ್ಮ ಬೇಡಿಕೆಗಳಿಗೆ ಸ್ಪಂದಿಸಿ, ಸೂಕ್ತ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಹೋರಾಟದ ಕಿಚ್ಚು ನಾಳೆಯಿಂದ ತೀವ್ರ

ಪ್ರತಿಭಟನೆ ವಾಪಾಸ್ ಪಡೆಯುವಂತೆ ಸಿಎಂ ಡಿಕೆ ಶಿವಕುಮಾರ್ ಪೋಸ್ಟ್ ಕುರಿತು ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರು ಪ್ರತಿಕ್ರಿಯಿಸಿದ್ದಾರೆ. ಪೋಸ್ಟ್ ಮಾಡಿದರೂ ನಾವು ಕೇರ್ ಮಾಡಲ್ಲ. ಹೋರಾಟದ ಕಿಚ್ಚು ನಾಳೆಯಿಂದ ಮತ್ತಷ್ಟು ಜೋರಾಗಲಿದೆ. ಈ ಹಿಂದೆಯೂ ಲಿಖಿತ ರೂಪದಲ್ಲಿ ಪತ್ರ ನೀಡಿದ್ದರು. ಆದರೆ ಭರವಸೆ ಈಡೇರಿಸಿಲ್ಲ. ಈ‌ಬಾರಿ‌ ಸಿಎಂ ಸ್ಥಳಕ್ಕೆ‌ ಬಂದು ನಮ್ಮ ಬೇಡಿಕೆ ಈಡೇರಿಸುವವರೆಗೂ ನಾವು ಇಲ್ಲಿಂದ ಕದಲೋದಿಲ್ಲ. ಇದೊಂದು ನೀಚಗೆಟ್ಟ ಸರ್ಕಾರ. ಈ ಸಂಬಳಕ್ಕೆ ನಾವು ಬದುಕೋದು ಹೇಗೆ ? ಪ್ರೋತ್ಸಾಹಧನ ಫಿಕ್ಸ್ ಆಗೋವರೆಗೂ ಹೋಗಲ್ಲ. ನಾಳೆಯಿಂದ ಮನೆಯವರೆಲ್ಲ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ ಎಂದು ಆಶಾ ಕಾರ್ಯಕರ್ತೆಯರು ಆಕ್ರೋಶ ಹೊರಹಾಕಿದ್ದಾರೆ.

PREV
Read more Articles on
click me!

Recommended Stories

ನಮ್ಮ ಮೆಟ್ರೋ ಪಿಂಕ್ ಲೈನ್ ಎಸ್‌ಜಿ ಪಾಳ್ಯದಿಂದ ಶಿವಾಜಿನಗರದವರೆಗೆ ಸುರಂಗ ಮಾರ್ಗ ಟ್ರಯಲ್ ರನ್‌ಗೆ ಸಿದ್ದತೆ!
ವಿಧಾನ ಪರಿಷತ್ ಮುಖ್ಯ ಸಚೇತಕರಾಗಿ ಮಂಜುನಾಥ್ ಭಂಡಾರಿ ನೇಮಕ, ಅಧಿಕೃತ ಆದೇಶ ಪ್ರಕಟ