ಬನಶಂಕರಿಯಲ್ಲಿ ಚಿರತೆ; ಸುಳ್ಳು ಸುದ್ದಿಯಿಂದ ಬೆಚ್ಚಿ ಬಿದ್ದ ಜನತೆ!

Published : Jun 12, 2020, 03:38 PM ISTUpdated : Jun 12, 2020, 04:20 PM IST
ಬನಶಂಕರಿಯಲ್ಲಿ ಚಿರತೆ; ಸುಳ್ಳು ಸುದ್ದಿಯಿಂದ ಬೆಚ್ಚಿ ಬಿದ್ದ ಜನತೆ!

ಸಾರಾಂಶ

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುದ್ದಿ, ಫೋಟೋ ಕುರಿತು ಎಚ್ಚರ ವಹಿಸಲೇಬೇಕು. ಕಾರಣ ಬಹುತೇಕ ಸುದ್ದಿಗಳನ್ನು ತಿರುಚಿಲಾಗುತ್ತದೆ. ಬಹುತೇಕ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಇದೇ ರೀತಿ ನಗರದ ಬನಶಂಕರಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಕೆಲ ಪುಂಡರು ಸುಳ್ಳು ಸುದ್ದಿ ಹರಡಿದ ಕಾರಣ, ಕೆಲ ಹೊತ್ತಲ್ಲೇ ಜನರೆಲ್ಲಾ ಮನೆಯೊಳೆಗೆ ಸೇರಿದ ಘಟನೆ ನಡೆದಿದೆ.

ಬೆಂಗಳೂರು(ಜೂ.12):  ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಸಮಯದಲ್ಲಿ ಬಹತೇಕ ಪ್ರಾಣಿ ಪಕ್ಷಿಗಳು ನಾಡಿನತ್ತ ಮುಖಮಾಡಿ ಸ್ವಚ್ಚಂದವಾಗಿ ತಿರುಗಾಡಿದ ಹಲವು ಘಟನೆಗಳು ವರದಿಯಾಗಿದೆ. ಇಷ್ಟೇ ಅಲ್ಲ ಮಾಗಡಿ, ಪೀನ್ಯಾ ಸೇರಿದಂತೆ  ನಗರದ ಹಲವೆಡೆ ಚಿರತೆ ಪ್ರತ್ಯಕ್ಷವಾಗಿತ್ತು. ಇದೇ ಸಂದರ್ಭವನ್ನು ಬಳಸಿಕೊಂಡ ಕೆಲ ಕೇಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಚಿರತೆ ಫೋಟೋ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಬನಶಂಕರಿಯಲ್ಲಿ ಓಡಾಡುತ್ತಿರುವ ಚಿರತೆ ಎಂದು ಬರೆದಿದ್ದಾರೆ.

ವಿಜಯಪುರ: ಕೊನೆಗೂ ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಜನತೆ

ಮಂಗಳವಾರ(ಜೂ.09)ರಂದು ಈ ರೀತಿ ಸುಳ್ಳು ಸುದ್ದಿಯನ್ನು ಹರಿಬಿಡಲಾಗಿತ್ತು. ಮರುದಿನ ಬೆಳಗ್ಗೆ ಬನಶಂಕರಿಯ ಸ್ಥಳೀಯ ನಿವಾಸಿಗಳು ರಸ್ತೆಗೆ ಇಳಿದಿಲ್ಲ. ಇತ್ತ ಅರಣ್ಯಾಧಿಕಾರಿಗಳಿಗೆ ಹಲವು ಕರೆಗಳು ಹೋಗಿವೆ. ಬನಶಂಕರಿಯಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಕುರಿತು ಸಾಮಾಜಿಕ ಜಾಲತಾಣದ ಮಾಹಿತಿ ಅರಣ್ಯಾಧಿಕಾರಿಗಳಿಗೆ ತಲುಪಿದೆ.. ತಕ್ಷಣವೇ ಅರಣ್ಯಾಧಿಕಾರಿಗಳು ಸಾಮಾಜಿಕ ಜಾಲತಾಣದ ಕುರಿತು ಪರಿಶೀಲನೆ ನಡೆಸಿದ್ದಾರೆ. ಇಷ್ಟೇ ಅಲ್ಲ ಬನಶಂಕರಿಗೆ ದೌಡಾಯಿಸಿದ್ದಾರೆ.

ರಾಮನಗರ: ಮಾಗಡಿಯಲ್ಲಿ ಬೋನಿಗೆ ಬಿದ್ದ 10ನೇ ಚಿರತೆ

ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಫೋಟೋ ಕಳೆದ ತಿಂಗಳು ತುಮಕೂರಿನಲ್ಲಿ ಪತ್ತೆಯಾದ ಚಿರತೆಯದ್ದಾಗಿದೆ. ಬನಶಂಕರಿಯಲ್ಲಿ ಯಾವುದೇ ಚಿರತೆ ಪ್ರತ್ಯಕ್ಷವಾಗಿಲ್ಲ. ಯಾವುದೇ ಸ್ಥಳದಲ್ಲಿ ಚಿರತೆ ಸೇರಿದಂತೆ ಕಾಡು ಪ್ರಾಣಿಗಳು ಪ್ರತ್ಯಕ್ಷವಾದರೆ ಅರಣ್ಯಾಧಿರಾಗಳಿಗೆ ಮಾಹಿತಿ ನೀಡಿ. ಸುಳ್ಳು ಸುದ್ದಿಯನ್ನು ಹರಡಬೇಡಿ ಎಂದು ಬೆಂಗಳೂರ ಗ್ರಾಮಾಂತರ ಅರಣ್ಯಾಧಿಕಾರಿ ಅ್ಯಂಟೋನಿ ಮರಿಯಪ್ಪ ಹೇಳಿದ್ದಾರೆ.

"

PREV
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್