Bengaluru: 40 ಲಕ್ಷದ ಚಿನ್ನ ದೋಚಿ, AI ಫೋಟೋ ಕಳುಹಿಸಿದ ನಕಲಿ ಜ್ಯೋತಿಷಿ ವೆಂಕಟೇಶ್

Published : Sep 17, 2026, 07:57 AM IST
Crime News

ಸಾರಾಂಶ

ಚೌಡೇಶ್ವರಿ ದೇವಿ ಪೂಜೆಯ ನೆಪದಲ್ಲಿ ನಕಲಿ ಜ್ಯೋತಿಷಿಯೊಬ್ಬ ವೃದ್ಧೆಯಿಂದ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ್ದಾನೆ. ಆಭರಣ ವಾಪಸ್ ಕೇಳಿದಾಗ ತನಗೆ ಅಪಘಾತವಾಗಿದೆ ಎಂದು ಎಐ ಫೋಟೋ ಕಳುಹಿಸಿ ಪರಾರಿಯಾಗಿದ್ದಾನೆ.

ಬೆಂಗಳೂರು: ಪೂಜೆ ನೆಪದಲ್ಲಿ ವೃದ್ಧೆ ಬಳಿ 40 ಲಕ್ಷ ರು.ಮೌಲ್ಯದ ಚಿನ್ನಾಭರಣ ಪಡೆದು ನಕಲಿ ಜ್ಯೋತಿಷಿಯೊಬ್ಬ ವಂಚಿಸಿ ಪರಾರಿ ಆಗಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ. ಗಿರಿನಗರದ ಜಿ.ಸಿ.ಶಾಂತಮ್ಮ ಮೋಸ ಹೋಗಿದ್ದು, ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ನಕಲಿ ಜ್ಯೋತಿಷಿ ವೆಂಕಟೇಶ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಕೆಲ ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆ ಬಳಿ ಫುಟ್‌ಪಾತ್‌ನಲ್ಲಿ ಜ್ಯೋತಿಷ್ಯ ಹೇಳುವಾಗ ಶಾಂತಮ್ಮ ಅವರಿಗೆ ವೆಂಕಟೇಶ್ ಪರಿಚಯವಾಗಿದೆ. ಅನಾರೋಗ್ಯ ಹಿನ್ನೆಲೆ ಚಿಕಿತ್ಸೆಗೆ ಆಸ್ಪತ್ರೆಗೆ ಶಾಂತಮ್ಮ ಬಂದಿದ್ದರು. ಬಳಿಕ ನಿಮ್ಮ ಆರೋಗ್ಯ ಹಾಗೂ ಕೌಟುಂಬಿಕ ಕಷ್ಟಗಳಿಗೆ ತಾನು ಹೇಳಿದಂತೆ ಚೌಡೇಶ್ವರಿ ದೇವಿಯ ಪೂಜೆ ಮಾಡಿಸಿದರೆ ಪರಿಹಾರ ಸಿಗಲಿದೆ ಎಂದಿದ್ದ. ಈ ಮಾತು ನಂಬಿದ ಶಾಂತಮ್ಮ, ಮನೆಗೆ ಬಂದು ಪೂಜೆ ಮಾಡುವಂತೆ ಕೋರಿದ್ದರು. ಅಂತೆಯೇ ಮೊದಲ ದಿನ ಅವರ ಮನೆಗೆ ಹೋದ ಆರೋಪಿ, ನಿಂಬೆಹಣ್ಣು ಮಂತ್ರಿಸಿ ಕೊಟ್ಟು ಮರಳಿದ್ದ.

ಅಮಾವಾಸ್ಯೆ, ಹುಣ್ಣಿಮೆ ದಿನಗಳಲ್ಲಿ ವಿಶೇಷ ಪೂಜೆ ನೆಪ

ಅದೇ ಹೊತ್ತಿಗೆ ಕಾಕಾತಾಳಿಯ ಎನ್ನುವಂತೆ ಶಾಂತಮ್ಮ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಇದರಿಂದ ಮತ್ತಷ್ಟು ವಿಶ್ವಾಸಗೊಂಡ ಅವರು, ಮತ್ತೆ ಜ್ಯೋತಿಷಿಯನ್ನು ಸಂಪರ್ಕಿಸಿದ್ದರು. ಆಗ ನಿಮ್ಮ ಮನೆಯಲ್ಲಿ ಚೌಡೇಶ್ವರಿ ದೇವಿ ಪೂಜೆ ಮಾಡಿಸುವಂತೆ ಪ್ರಸ್ತಾಪಿಸಿದ ಆತ, ಆ ಪೂಜೆಗೆ ಆಭರಣ ನೀಡುವಂತೆ ದೂರುದಾರರಿಗೆ ಸೂಚಿಸಿದ್ದ. ಇದಕ್ಕೊಪ್ಪಿದ ನಂತರ ಸಂತ್ರಸ್ತೆ ಮನೆಗೆ ತೆರಳಿ ವೆಂಕಟೇಶ್, ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಲ್ಲಿ ವಿಶೇಷ ಪೂಜೆ ನೆಪದಲ್ಲಿ ಹಂತ ಹಂತವಾಗಿ ಶಾಂತಮ್ಮ ಅವರಿಂದ ಚಿನ್ನಾಭರಣ ಪಡೆದಿದ್ದಾನೆ.

ಇದನ್ನೂ ಓದಿ: Bengaluru: ಕುಮಾರಪಾರ್ಕ್ ಬಳಿಯಿರೋ ಬಿಡಿಎ ಹೊಸ ಕಟ್ಟಡ ನಿರ್ಮಾಣಕ್ಕೆ ಕರವೇ ವಿರೋಧ!

ದೂರು ದಾಖಲಿಸಿರುವ ಶಾಂತಮ್ಮ

ಈತನ ವರ್ತನೆಯಿಂದ ಶಂಕೆಗೊಂಡ ಅವರು, ತಾವು ನೀಡಿದ ಆಭರಣ ಮರಳಿಸುವಂತೆ ಒತ್ತಾಯಿಸಿದ್ದಾರೆ. ಆಗ ತನಗೆ ಅಪಘಾತವಾಗಿದೆ ಎಂದು ಎಐ ಫೋಟೋ ಕಳುಹಿಸಿ ವೆಂಕಟೇಶ್ ಸಂಪರ್ಕ ಕಡಿತಗೊಳಿಸಿದ್ದಾನೆ. ಕೊನೆಗೆ ತಾವು ಮೋಸ ಹೋಗಿರುವುದು ಅರಿವಾಗಿ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಮಾಲ್ ಮತ್ತು ಸಿನಿಮಾ ಮಂದಿರಕ್ಕೆ ಬಿಗ್ ಶಾಕ್! 75 ಸಾವಿರ ದಂಡ

PREV
Read more Articles on
click me!

Recommended Stories

ಬೆಂಗಳೂರಿನ ಪ್ರತಿಷ್ಠಿತ ಮಾಲ್ ಮತ್ತು ಸಿನಿಮಾ ಮಂದಿರಕ್ಕೆ ಬಿಗ್ ಶಾಕ್! 75 ಸಾವಿರ ದಂಡ
UPI Payment: ಯುಪಿಐ ವಹಿವಾಟಿನ ಮೇಲಿನ ಶುಲ್ಕ: ಕೇಂದ್ರದ ವಿರುದ್ಧ ಹೋರಾಟಕ್ಕೆ ಕರೆ ನೀಡಿದ ಸಿಎಂ!