ವಿದೇಶ ಪ್ರಯಾಣಿಕರಿಗೂ ‘ಡಿಜಿ ಯಾತ್ರಾ’ ಸೌಲಭ್ಯ: ಬೆಂಗಳೂರು ಸೇರಿ 7 ಏರ್‌ಪೋರ್ಟ್‌ಗಳಲ್ಲಿ ಪ್ರಾಯೋಗಿಕ ಜಾರಿ

Sathish Kumar KH   | Kannada Prabha
Published : Nov 02, 2026, 05:50 AM IST
Digiyatra in Bengaluru Airport

ಸಾರಾಂಶ

ದೇಶೀಯ ಪ್ರಯಾಣಿಕರಿಗೆ ಮಾತ್ರ ಲಭ್ಯವಿದ್ದ ಡಿಜಿ ಯಾತ್ರಾ ಸೇವೆಯನ್ನು ಇದೀಗ ವಿದೇಶಕ್ಕೆ ಪ್ರಯಾಣಿಸುವ ಭಾರತೀಯರಿಗೂ ಪ್ರಾಯೋಗಿಕವಾಗಿ ವಿಸ್ತರಿಸಲಾಗಿದೆ. ಬೆಂಗಳೂರು ಸೇರಿದಂತೆ 7 ವಿಮಾನ ನಿಲ್ದಾಣಗಳಲ್ಲಿ ಏರ್‌ ಇಂಡಿಯಾ ಮತ್ತು ಇಂಡಿಗೋ ವಿಮಾನಗಳಿಗೆ ಈ ಸೌಲಭ್ಯ ಲಭ್ಯವಿದೆ. 2027ರ ವೇಳೆಗೆ ಇದು ಪೂರ್ಣ ಪ್ರಮಾಣದಲ್ಲಿ ಜಾರಿಯಾಗುವ ನಿರೀಕ್ಷೆಯಿದೆ.

ನವದೆಹಲಿ: ಇಷ್ಟು ಕಾಲ ದೇಶದ ಒಳಗೆ ಪ್ರಯಾಣಿಸುವವರಿಗಷ್ಟೇ ಲಭ್ಯವಿದ್ದ ಡಿಜಿ ಯಾತ್ರಾ ಸೇವೆಯನ್ನು ಇದೀಗ ಪ್ರಾಯೋಗಿಕವಾಗಿ ಬೆಂಗಳೂರು ಸೇರಿದಂತೆ 7 ನಗರಗಳ ವಿಮಾನ ನಿಲ್ದಾಣಗಳಲ್ಲಿ, ವಿದೇಶಕ್ಕೆ ಪ್ರಯಾಣಿಸುವ ಭಾರತೀಯರಿಗೂ ವಿಸ್ತರಿಸಲಾಗಿದೆ. ಇದು 2027ರಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಯಾಗುವ ನಿರೀಕ್ಷೆಯಿದೆ.

ಮುದ್ರಿತ ಬೋರ್ಡಿಂಗ್‌ ಪಾಸ್‌ ಹೊಂದುವ ಬದಲು, ಏರ್‌ಪೋರ್ಟ್‌ಗೆ ತಲುಪುವ ಮುನ್ನವೇ ಬೋರ್ಡಿಂಗ್‌ ಪಾಸ್‌ ಅನ್ನು ಡಿಜಿಯಾತ್ರಾ ಆ್ಯಪ್‌ಗೆ ಅಪ್‌ಲೋಡ್‌ ಮಾಡಬಹುದು. ಇದರಿಂದ ವಿಮಾನ ನಿಲ್ದಾಣ ಪ್ರವೇಶ, ಭದ್ರತಾ ಪರಿಶೀಲನೆ, ಬೋರ್ಡಿಂಗ್‌ ವೇಳೆ ಪಾಸ್‌ ತೋರಿಸುವ ಬದಲು ಮುಖ ಗುರುತಿಸುವಿಕೆ ತಂತ್ರಜ್ಞಾನದ ಮೂಲಕ ಪ್ರವೇಶ ಪಡೆಯಲು ಅನುಕೂಲವಾಗುವಂತೆ ವಿಮಾನಯಾನ ಸಚಿವಾಲಯ ಮತ್ತು ಡಿಜಿಯಾತ್ರಾ ಒಟ್ಟಾಗಿ ಈ ವ್ಯವಸ್ಥೆಯನ್ನು ರೂಪಿಸಿವೆ. ಇದಷ್ಟು ದಿನ ಈ ಸೌಲಭ್ಯ ಭಾರತದ ಒಳಗೆ ಪ್ರಯಾಣಿಸುವವರಿಗಷ್ಟೇ ಇತ್ತು.

ಡಿಸೆಂಬರ್‌ ವರೆಗೆ ಪ್ರಾಯೋಗಿಕವಾಗಿ ಜಾರಿ

ಆದರೀಗ ಇ-ಪಾಸ್‌ಪೋರ್ಟ್‌ ಜತೆ ಏರ್‌ ಇಂಡಿಯಾ ಹಾಗೂ ಇಂಡಿಗೋ ವಿಮಾನದಲ್ಲಿ ವಿದೇಶಕ್ಕೆ ಪ್ರಯಾಣಿಸಲಿರುವ ಭಾರತೀಯರು, ಬೆಂಗಳೂರು, ದೆಹಲಿ, ಹೈದರಾಬಾದ್, ಕೊಚ್ಚಿನ್, ಮುಂಬೈ, ಚೆನ್ನೈ ಮತ್ತು ಅಮೃತಸರ ವಿಮಾನ ನಿಲ್ದಾಣಗಳಲ್ಲಿ ಡಿಜಿ ಯಾತ್ರಾ ಬಳಸಬಹುದು. ನವೆಂಬರ್‌ನಿಂದ ಡಿಸೆಂಬರ್‌ ವರೆಗೆ ಪ್ರಾಯೋಗಿಕವಾಗಿ ಈ ಅವಕಾಶ ನೀಡಲಾಗಿದ್ದು, ಜನರ ಪ್ರತಿಕ್ರಿಯೆ ಹಾಗೂ ಕಾರ್ಯಸಾಧುತ್ವವನ್ನು ಪರಿಶೀಲಿಸಲಾಗುವುದು. ಆದ್ದರಿಂದ ಡಿಜಿಯಾತ್ರಾದಲ್ಲಿ ಬೋರ್ಡಿಂಗ್‌ ಪಾಸ್‌ ಹೊಂದಿರುವ ಹೊರತಾಗಿಯೂ ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ. ಈ ಪ್ರಯೋಗ ಯಶಸ್ವಿಯಾದಲ್ಲಿ, 2027ರಿಂದ ವಿದೇಶಕ್ಕೆ ಹಾರಲಿರುವ ಎಲ್ಲಾ ಭಾರತೀಯರಿಗೆ ಈ ಸೌಲಭ್ಯ ಲಭ್ಯವಾಗುವುದು.

PREV
Read more Articles on
click me!

Recommended Stories

ದರ್ಶನ್ ಕುಟುಂಬದಿಂದ ನಟ ಧನ್ವೀರ್‌ಗೆ ಮತ್ತೊಂದು ಶಾಕ್, ಮಾನನಷ್ಟ ಮೊಕದ್ದಮೆ ಹೂಡಿದ ವಿಜಯಲಕ್ಷ್ಮಿ
Bengaluru: ಅನ್ನ ಹಾಕಿದ ಮನೆಯಲ್ಲಿ ₹40 ಲಕ್ಷ ಎಗರಿಸಿದ್ದ ಕೆಲಸದವ, ಲಕ್ಷ ಲಕ್ಷ ಹಣ ಏನ್ ಮಾಡ್ದಾ?