HMT ಇತಿಹಾಸಕ್ಕೆ ಹೊಸ ಕಳೆ; ವಾಚ್‌ಗೆ ನಾಡಿನ ಅಸ್ಮಿತೆ 'ಗಂಡಭೇರುಂಡ'ದ ಸ್ಪರ್ಶ, ಎಚ್‌ಡಿಕೆ ಸಾಥ್!

Published : Nov 01, 2026, 10:45 PM IST
HMT News Watch release HDK

ಸಾರಾಂಶ

ಕರ್ನಾಟಕದ ಸಾಂಸ್ಕೃತಿಕ ಅಸ್ಮಿತೆಯಾದ 'ಗಂಡಭೇರುಂಡ' ಲಾಂಛನ ಹಾಗೂ ಕನ್ನಡ ಅಂಕಿಗಳನ್ನು ಒಳಗೊಂಡ ಹೊಸ 'ಎಚ್‌ಎಂಟಿ ಕನ್ನಡಿಗ' ವಾಚ್‌ಗಳ ಸರಣಿ ಬಿಡುಗಡೆಯಾಗಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಸಾಥ್‌ನೊಂದಿಗೆ ಅನಾವರಣಗೊಂಡ ಈ ವಿಶೇಷ ವಾಚ್‌ಗಳ ಬೆಲೆ, ವೈಶಿಷ್ಟ್ಯ ಹಾಗೂ ಲಭ್ಯತೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು: 71ನೇ ಕನ್ನಡ ರಾಜ್ಯೋತ್ಸವದ ಸವಿ ನೆನಪಿಗಾಗಿ ಸಾರ್ವಜನಿಕ ವಲಯದ ಹೆಮ್ಮೆಯ ಹೆಚ್‌ಎಂಟಿ ವಾಚ್ ಡಿವಿಷನ್ ವತಿಯಿಂದ ಕನ್ನಡಿಗರಿಗಾಗಿಯೇ ವಿಶೇಷವಾಗಿ ರೂಪಿಸಲಾದ ‘ಹೆಚ್‌ಎಂಟಿ ಕನ್ನಡಿಗ’ ಹೆಸರಿನ ನಾಲ್ಕು ಹೊಸ ಮಾದರಿಯ ವಾಚ್‌ಗಳನ್ನು ಅದ್ದೂರಿಯಾಗಿ ಲೋಕಾರ್ಪಣೆಗೊಳಿಸಲಾಗಿದೆ. ಜಾಲಹಳ್ಳಿಯ ಹೆಚ್‌ಎಂಟಿ ಮೈದಾನದಲ್ಲಿ ನಡೆದ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಧಿಕೃತ ಚಾಲನೆ ನೀಡಿದ್ದಾರೆ.

ಅದ್ದೂರಿ ಬಿಡುಗಡೆ!

ಕನ್ನಡ ರಾಜ್ಯೋತ್ಸವದ ಅಂಗವಾಗಿ ಹೆಚ್‌ಎಂಟಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ಹೆಚ್‌ಎಂಟಿಯ ಹೊಸ ಅವತರಣಿಕೆಯ "ಗಂಡಭೇರುಂಡ ಕನ್ನಡಿಗ" ವಾಚ್ ಅನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಈ ಹೊಸ ಕನ್ನಡಿಗ ವಾಚ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದರು. ನಂತರ ವೇದಿಕೆಯಲ್ಲಿ ಮಾತನಾಡಿದ ಕುಮಾರಸ್ವಾಮಿಯವರು, ಇಂದು ಹೆಚ್‌ಎಂಟಿಯ ಒಟ್ಟು ನಾಲ್ಕು ಹೊಸ ಅವತರಣಿಕೆಯ ವಾಚ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದರು.

ವಾಚ್‌ನ ವಿಶೇಷತೆ!

ಹೊಸ ಅವತರಣಿಕೆಯ ಈ ವಾಚ್‌ನಲ್ಲಿ ಕನ್ನಡದ ಬಾವುಟ, 'ಕನ್ನಡಿಗ' ಎಂಬ ಪದ ಹಾಗೂ ಮೈಸೂರು ಸಂಸ್ಥಾನದ ರಾಜಲಾಂಛನವಾದ 'ಗಂಡಭೇರುಂಡ' ಚಿತ್ರವನ್ನು ಅತ್ಯಾಕರ್ಷಕವಾಗಿ ಅಳವಡಿಸಲಾಗಿದೆ. ಹೆಚ್‌ಎಂಟಿ ಸಂಸ್ಥೆಯು ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಾರ್ಖಾನೆಯಾಗಿದ್ದು, ಇದನ್ನು ಮತ್ತೆ ಪುನಶ್ಚೇತನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. 30-40 ವರ್ಷಗಳ ಹಿಂದೆ ಇದ್ದ ವೈಭವದ ರೀತಿಯಲ್ಲೇ ಹೆಚ್‌ಎಂಟಿ ಮತ್ತೆ ರಾರಾಜಿಸಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದು ಸಚಿವರು ತಿಳಿಸಿದರು.

ಗಣ್ಯರ ಉಪಸ್ಥಿತಿ!

ಈ ಅದ್ದೂರಿ ಸಮಾರಂಭದಲ್ಲಿ ಸಂಸದ ಡಾ. ಸಿ.ಎನ್. ಮಂಜುನಾಥ್, ಶಾಸಕ ಮುನಿರತ್ನ ಮತ್ತು ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಸೇರಿದಂತೆ ಹಲವು ರಾಜಕೀಯ ಮುಮುಖಂಡರು ಸಾಕ್ಷಿಯಾದರು. ಅಲ್ಲದೆ, ಪ್ರಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ತಂಡದವರಿಂದ ಆಯೋಜಿಸಲಾಗಿದ್ದ ರಸಮಂಜರಿ ಕಾರ್ಯಕ್ರಮವು ನೆರೆದಿದ್ದ ಸಾರ್ವಜನಿಕರಿಗೆ ಮತ್ತು ಹೆಚ್‌ಎಂಟಿ ಕಾರ್ಮಿಕರಿಗೆ ಭರ್ಜರಿ ಮನರಂಜನೆ ನೀಡಿತು

PREV
Read more Articles on
click me!

Recommended Stories

ಬೆಂಗಳೂರಿನಿಂದ ಮುಂಬೈ, ಚೆನ್ನೈ, ಹೈದರಾಬಾದ್ ನಗರಗಳಿಗೆ ಬುಲೆಟ್ ಟ್ರೈನ್: 4000 ಕಿಮೀ ಯೋಜನೆಗೆ ಮೋದಿ ಅಂಕಿತ!
ರಾಜ್ಯದೆಲ್ಲೆಡೆ ಏರ್ಪೋರ್ಟ್‌ ಮಾದರಿ ರೈಲು ನಿಲ್ದಾಣಗಳ ಅಭಿವೃದ್ಧಿ: ರೈಲ್ವೆ ಸಚಿವ ವಿ. ಸೋಮಣ್ಣ