ನೀಲಮಣಿ ರಾಜು ಸ್ಥಾನಕ್ಕೆ ನೆಕ್ಸ್ಟ್ ಯಾರು..? ಪೊಲೀಸ್ ಬಾಸ್ ಹುದ್ದೆಗೆ ಪೈಪೋಟಿ ಶುರು..!

Published : Nov 07, 2019, 08:12 AM IST
ನೀಲಮಣಿ ರಾಜು ಸ್ಥಾನಕ್ಕೆ ನೆಕ್ಸ್ಟ್ ಯಾರು..? ಪೊಲೀಸ್ ಬಾಸ್ ಹುದ್ದೆಗೆ ಪೈಪೋಟಿ ಶುರು..!

ಸಾರಾಂಶ

ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರು ಜನವರಿ ಅಂತ್ಯದಲ್ಲಿ ನಿವೃತ್ತಿಯಾಗಲಿರುವ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿ ಸ್ಥಾನಕ್ಕೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ನಡುವೆ ಪೈಪೋಟಿ ಶುರುವಾಗಿದೆ. ಸೇವಾ ಹಿರಿತನದ ಆಧಾರದ ಮೇರೆಗೆ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಅಶಿತ್ ಮೋಹನ್ ಪ್ರಸಾದ್, ಅಪರಾಧ ತನಿಖಾ ದಳದ ಮುಖ್ಯಸ್ಥ ಪ್ರವೀಣ್ ಸೂದ್ ಹಾಗೂ ನೇಮ ಕಾತಿ ಮತ್ತು ತರಬೇತಿ ವಿಭಾಗದ ಡಿಜಿಪಿ ಪದಮ್ ಕುಮಾರ್ ಗರ್ಗ್ ಅರ್ಹರಾಗಿದ್ದಾರೆ.

ಬೆಂಗಳೂರು(ನ.07): ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರು ಜನವರಿ ಅಂತ್ಯದಲ್ಲಿ ನಿವೃತ್ತಿಯಾಗಲಿರುವ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿ ಸ್ಥಾನಕ್ಕೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ನಡುವೆ ಪೈಪೋಟಿ ಶುರುವಾಗಿದೆ.

ಸೇವಾ ಹಿರಿತನದ ಆಧಾರದ ಮೇರೆಗೆ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಅಶಿತ್ ಮೋಹನ್ ಪ್ರಸಾದ್, ಅಪರಾಧ ತನಿಖಾ ದಳದ ಮುಖ್ಯಸ್ಥ ಪ್ರವೀಣ್ ಸೂದ್ ಹಾಗೂ ನೇಮ ಕಾತಿ ಮತ್ತು ತರಬೇತಿ ವಿಭಾಗದ ಡಿಜಿಪಿ ಪದಮ್ ಕುಮಾರ್ ಗರ್ಗ್ ಅರ್ಹರಾಗಿದ್ದಾರೆ. ಈ ಅಧಿಕಾರಿಗಳ ಪೈಕಿ ಅಶಿತ್ ಮೋಹನ್ ಪ್ರಸಾದ್ ಅವರು ಉಳಿದವರಿಗಿಂತ 1 ವರ್ಷ ಸೇವೆಯಲ್ಲಿ ಹಿರಿತನ ಹೊಂದಿದ್ದಾರೆ.

ಸೈನೈಡ್‌ ಪ್ರಸಾದ ತಿನ್ನಿಸಿ 10 ಜನರ ಕೊಂದವ ಬಲೆಗೆ!

ನೀಲಮಣಿ ರಾಜು ಅವರಿಂದ ತೆರವಾದ ಹುದ್ದೆ ಈ ಮೂವರ ಪೈಕಿ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಎ. ಎಂ.ಪ್ರಸಾದ್ ಹೆಸರು ಪ್ರಸ್ತಾಪವಾಗಿತ್ತು. ಈ ಪ್ರಕರಣವು ಡಿಜಿಪಿ ಹುದ್ದೆ ಪಡೆಯಲು ಅವರಿಗೆ ಅಡ್ಡಿಯಾಗಬಹುದು. ಅಲ್ಲದೆ, ಗಣಪತಿ ಆತ್ಯಹತ್ಯೆ ಪ್ರಕರಣವನ್ನು ಮುಂದಿಟ್ಟು ಕೊಂಡು ವಿರೋಧ ಪಕ್ಷದಲ್ಲಿದ್ದಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೋರಾಟ ನಡೆಸಿದ್ದರು.

ಹೀಗಾಗಿ ಡಿಜಿ- ಐಜಿ ಹುದ್ದೆಗೆ ಪ್ರಸಾದ್ ಅವರ ಹೆಸರನ್ನು ಬಿಜೆಪಿ ಸರ್ಕಾರ ಪರಿಗಣಿಸುತ್ತದೆಯೇ ಎಂಬುದು ಇಲಾಖೆಯಲ್ಲಿ ಪ್ರಶ್ನೆ ಹುಟ್ಟು ಹಾಕಿದೆ. ಇನ್ನುಳಿದ ಅಧಿಕಾರಿಗಳ ವಿರುದ್ಧ ಯಾವುದೇ ಗುರುತರ ಆರೋಪಗಳಿಲ್ಲ. ಇನ್ನು ಸೇವಾ ಹಿರಿತನದಲ್ಲಿ ಪ್ರಸಾದ್ ನಂತರ ಸ್ಥಾನದಲ್ಲಿರು ವ ಪ್ರವೀಣ್ ಸೂದ್ ಅವರು ಡಿಜಿ-ಐಜಿ ಹುದ್ದೆಗೇರಿದರೆ, ಸುಮಾರು 4 ವರ್ಷ ರಾಜ್ಯ ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಇದರಿಂದ ಡಿಜಿ-ಐಜಿ ಹುದ್ದೆಯಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಇತಿಹಾಸವನ್ನು ಸೂದ್ ಬರೆಯಲಿದ್ದಾರೆ.

50 ರೂ. ಕೊಡದ್ದಕ್ಕೆ ಗೆಳೆಯನಿಗೆ ಚಾಕು ಇರಿದು ಕೊಲೆ

PREV
click me!

Recommended Stories

ಅಪರೂಪದ ಕೋತಿ ಪ್ರಭೇದ ಬ್ಯಾಗ್‌ನಲ್ಲಿಟ್ಟು ವಿದೇಶದಿಂದ ಅಕ್ರಮ ಸಾಗಾಟ, ಬೆಂಗಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ!
ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!