50 ರೂ. ಕೊಡದ ಗೆಳೆಯನಿಗೆ ಚಾಕು ಇರಿದು ಕೊಲೆ

Published : Nov 07, 2019, 07:51 AM ISTUpdated : Nov 07, 2019, 07:58 AM IST
50 ರೂ. ಕೊಡದ ಗೆಳೆಯನಿಗೆ ಚಾಕು ಇರಿದು ಕೊಲೆ

ಸಾರಾಂಶ

ತಮಗೆ ₹50 ನೀಡದೆ ಗುರಾಯಿಸಿದ ಎಂಬ ಕಾರಣಕ್ಕೆ ಕೋಪಗೊಂಡು ಗೆಳೆಯನಿಗೆ ಚಾಕುವಿನಿಂದ ಇರಿದು ಕೊಂದು ಪರಾರಿ ಯಾಗಿರುವ ಘಟನೆ ದೇವರಜೀವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೋದಿ ರಸ್ತೆಯಲ್ಲಿ ಬುಧವಾರ ನಡೆದಿದೆ. 

ಬೆಂಗಳೂರು(ನ.07): ತಮಗೆ ₹50 ನೀಡದೆ ಗುರಾಯಿಸಿದ ಎಂಬ ಕಾರಣಕ್ಕೆ ಕೋಪಗೊಂಡು ಗೆಳೆಯನಿಗೆ ಚಾಕುವಿನಿಂದ ಇರಿದು ಕೊಂದು ಪರಾರಿ ಯಾಗಿರುವ ಘಟನೆ ದೇವರಜೀವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೋದಿ ರಸ್ತೆಯಲ್ಲಿ ಬುಧವಾರ ನಡೆದಿದೆ.

ಡಿ.ಜೆ.ಹಳ್ಳಿ ನಿವಾಸಿ ಸೈಯದ್ ಮಹಮ್ಮದ್ ವಾಸೀಂ (18) ಮೃತ ದುರ್ದೈವಿ. ಈ ಪ್ರಕರಣ ಸಂಬಂಧ ಮೃತನ ಸ್ನೇಹಿತ ಶಬೀರ್ ಹಾಗೂ ಆತನ ಸಹಚರರಿಗೆ ಪೊಲೀಸರು ಬಲೆ ಬೀಸಿದ್ದಾರೆ. ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸೈಯದ್, ಮಧ್ಯಾಹ್ನ ಮನೆಗೆ ಊಟಕ್ಕೆ ತೆರಳುವಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿದ್ದೆಗೆಡಿಸಿದ ಚಿಂದಿ ಕಳ್ಳರು! ಪೊಲೀಸರ ಮೊರೆ ಹೋದ ಕಮಿಷನರ್

ಮೃತ ಸೈಯದ್, ತನ್ನ ಕುಟುಂಬದ ಜತೆ ಡಿ.ಜೆ.ಹಳ್ಳಿಯಲ್ಲಿ ನೆಲೆಸಿದ್ದ. ಆತನ ಮನೆ ಸಮೀಪದಲ್ಲಿ ಶಬೀರ್ ಕುಟುಂಬ ವಾಸವಾಗಿದೆ. ಬಾಲ್ಯದಿಂದಲೂ ಅವರು ಸ್ನೇಹಿತರಾಗಿದ್ದರು. ಇತ್ತೀಚೆಗೆ ಕ್ಷುಲ್ಲಕ ವಿಚಾರಗಳಿಗೆ ಆ ಗೆಳೆಯರ ಮಧ್ಯೆ ಮನಸ್ತಾಪವಾಗಿತ್ತು. ಬುಧವಾರ ಮಧ್ಯಾಹ್ನ ಬೇಕರಿಯಿಂದ ಊಟಕ್ಕೆ ಮನೆಗೆ ಬರುತ್ತಿದ್ದ. ಆಗ ಮೋದಿ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದ ಶಬೀರ್ ಹಾಗೂ ಆತನ ಸಹಚರರು, ನಡುರಸ್ತೆಯಲ್ಲಿ ಸೈಯದ್‌ನನ್ನು ಅಡ್ಡಗಟ್ಟಿ ₹50 ಕೇಳಿದ್ದಾರೆ.

ಅದಕ್ಕೆ ಸೈಯದ್, ನನ್ನ ಬಳಿ ಹಣ ಇಲ್ಲವೆಂದು ಹೇಳಿದ್ದಾನೆ. ಜೇಬು ತಡಕಾಟ ನಡೆಸುತ್ತಿದ್ದಾಗ ಪ್ರತಿರೋಧ ವ್ಯಕ್ತಪಡಿಸಿದ್ದ. ಮತ್ತೊಬ್ಬ ಚೂರಿ ತೋರಿಸಿ ಹಣ ನೀಡುವಂತೆ ಬೆದರಿಕೆವೊಡ್ಡುತ್ತಿದ್ದ. ಸೈಯದ್ ಎದೆಗೆ ಚೂರಿಯಿಂದ ಚುಚ್ಚಿ ದುಷ್ಕರ್ಮಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.

ಅಪರಿಚಿತನ ಮನೆಗೆ ಕರೆದೊಯ್ದು ಚಾಕು ಇರಿದು ರಸ್ತೆಗೆ ಬಿಸಾಕಿದ!

PREV
click me!

Recommended Stories

ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ