ಪಾರದರ್ಶಕತೆ ಜಾರಿಗೆ ತರಲು ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ

Published : Oct 17, 2019, 10:01 PM ISTUpdated : Oct 17, 2019, 10:03 PM IST
ಪಾರದರ್ಶಕತೆ ಜಾರಿಗೆ ತರಲು ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ

ಸಾರಾಂಶ

ಬೆಂಗಳೂರು ನಗರ ಪೊಲೀಸ್ ಆಯುಕ್ತರ ನೂತನ ಆದೇಶ|ಬೆಂಗಳೂರು ಪೊಲೀಸ್ ಠಾಣಾ ಸಿಬ್ಬಂದಿಗಳ ಕೆಲಸದ ಬದಲಾವಣೆಗೆ ಮುಂದಾದ ನಗರ ಪೊಲೀಸ್ ಆಯುಕ್ತರು|ಪೊಲೀಸ್ ಇಲಾಖೆಯಲ್ಲಿ ಪಾರದರ್ಶಕತೆ ಜಾರಿಗೆ ತರಲು ನೂತನ ಆದೇಶ.

ಬೆಂಗಳೂರು, [ಅ.17]:  ಪೊಲೀಸ್ ಇಲಾಖೆಯಲ್ಲಿ ಪಾರದರ್ಶಕತೆ ಜಾರಿಗೆ ತರಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್‌ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಬೆಂಗಳೂರು ಪೊಲೀಸ್ ಠಾಣಾ ಸಿಬ್ಬಂದಿಗಳ ಕೆಲಸದ ಬದಲಾವಣೆಗೆ ಮುಂದಾದ ನಗರ ಪೊಲೀಸ್ ಆಯುಕ್ತರು, ಠಾಣೆಗಳಲ್ಲಿ‌ ನ್ಯಾಯಾಲಯ, ಠಾಣಾ ಬರಹಗಾರರು, ಅಪರಾಧ ವಿಭಾಗ, ತನಿಖಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದವರ ಬದಲಾವಣೆಗೆ ಆದೇಶ ಹೊರಡಿಸಿದ್ದಾರೆ.

 ಸಾವರ್ಕರ್ ಭಾರತ ರತ್ನಕ್ಕೆ ಜಿದ್ದಾಜಿದ್ದಿ: ಓದಿ ಇಂದಿನ ಟಾಪ್ 10 ಸುದ್ದಿ!

ಅಷ್ಟೇ ಅಲ್ಲದೇ ತುಂಬಾ ವರ್ಷಗಳಿಂದ ಒಂದೇ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದವರನ್ನೂ ಸಹ ಬದಲಾವಣೆಗೆ ಸೂಚನೆ ನೀಡಿದ್ದಾರೆ. ಎಲ್ಲಾ ಸಿಬ್ಬಂದಿಗಳಿಗೂ ಸಮಾನವಾಗಿ ಕರ್ತವ್ಯಕ್ಕೆ ನಿಯೋಜಿಸಬೇಕು. ಈ ಹಿನ್ನೆಲೆಯಲ್ಲಿ ಹೊಸ ಸಿಬ್ಬಂದಿಗಳಿಗೆ ಅವಕಾಶ ನೀಡಲು ಸೂಚಿಸಿದ್ದಾರೆ.

ಈ ಹಿಂದೆ ಸಿಬ್ಬಂದಿ ವೈಯಕ್ತಿಕ ಹಿತಾಸಕ್ತಿ ರೂಡಿಸಿಕೊಂಡಿದ್ದಾರೆ ಎಂಬ ಆರೋಪವಿತ್ತು. ಪೊಲೀಸ್ ಠಾಣೆಗಳ ಆಡಳಿತದ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತವೆ ಎಂಬೆಲ್ಲಾ ಆರೋಪಗಳು ಕೇಳಿ ಬಂದಿದ್ದವು.

ಹೀಗಾಗಿ ಬೆಂಗಳೂರು ನಗರದ ಎಲ್ಲಾ ಪೊಲೀಸ್ ಠಾಣಾಧಿಕಾರಿಗಳಿಗೆ ಈ ಸೂಚನೆಗಳನ್ನು ನೀಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್‌ ಇಂದು [ಗುರುವಾರ] ಆದೇಶಿಸಿದ್ದಾರೆ.

PREV
click me!

Recommended Stories

ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಬಾಲಕಿ; ದೆಹಲಿ, ಬೆಂಗಳೂರು ಸೇರಿ 2 ವರ್ಷ ವೇಶ್ಯಾವಾಟಿಕೆ ನರಕ ದರ್ಶನ!
ಡಿಜಿಟಲ್ ಅರೆಸ್ಟ್‌ಗೆ ಹೆದರಿ ಕೋಟಿಗಟ್ಟಲೆ ಬೆಲೆಬಾಳುವ ಸೈಟ್, ಮನೆ ಮಠ ಮಾರಿದ ಬೆಂಗಳೂರು ಮಹಿಳಾ ಟೆಕ್ಕಿ!