ಬನಶಂಕರಿ ದೇಗುಲಕ್ಕೆ ಲಾರಿ ನುಗ್ಗಿ ಹಾನಿ

Published : Oct 16, 2019, 09:30 AM ISTUpdated : Oct 16, 2019, 10:30 AM IST
ಬನಶಂಕರಿ ದೇಗುಲಕ್ಕೆ ಲಾರಿ ನುಗ್ಗಿ ಹಾನಿ

ಸಾರಾಂಶ

ಬನಶಂಕರಿ ದೇವಸ್ಥಾನದ ಆವರಣದಲ್ಲಿರುವ ಚಾಲುಕ್ಯರ ಕಾಲದಲ್ಲಿ ನಿರ್ಮಿಸಿದ ಹರಿದ್ರಾ ತೀರ್ಥದ ದಕ್ಷಿಣ ದಿಕ್ಕಿನ ಪ್ರವೇಶದ್ವಾರದೊಳಗೆ ಲಾರಿಯೊಂದು ನುಗ್ಗಿದ ಪರಿಣಾಮ, ಮಂಟಪದ ಕಂಬಗಳಿಗೆ ಹಾನಿಯಾಗಿದೆ.

ಬಾದಾಮಿ [ಅ.16]:  ಇಲ್ಲಿನ ಬನಶಂಕರಿ ದೇವಸ್ಥಾನದ ಆವರಣದಲ್ಲಿರುವ ಚಾಲುಕ್ಯರ ಕಾಲದಲ್ಲಿ ನಿರ್ಮಿಸಿದ ಹರಿದ್ರಾ ತೀರ್ಥದ ದಕ್ಷಿಣ ದಿಕ್ಕಿನ ಪ್ರವೇಶದ್ವಾರದೊಳಗೆ ಲಾರಿಯೊಂದು ನುಗ್ಗಿದ ಪರಿಣಾಮ, ಮಂಟಪದ ಕಂಬಗಳಿಗೆ ಹಾನಿಯಾದ ಘಟನೆ ನಡೆದಿದೆ. 

ಕತ್ತಲಿದ್ದ ಕಾರಣ ಸರಿಯಾಗಿ ದಾರಿ ಕಾಣದೆ, ಲಾರಿ ಚಾಲಕ ಬನಶಂಕರಿ ದೇವಸ್ಥಾನಕ್ಕೆ ಲಾರಿಯನ್ನು ನುಗ್ಗಿಸಿದ್ದಾನೆ. ಲಾರಿ ಮಹಾರಾಷ್ಟ್ರ ಮೂಲದ್ದಾಗಿದ್ದು, ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗದಗ ಜಿಲ್ಲೆಯ ರೋಣದಿಂದ ಈ ಲಾರಿಯು ಬಾಗಲಕೋಟೆಗೆ ಹೊರಟಿತ್ತು ಎನ್ನಲಾಗಿದೆ. ಲಾರಿ ಮಾಲೀಕ ಮತ್ತು ಚಾಲಕನ ವಿರುದ್ಧ ಬಾದಾಮಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

PREV
click me!

Recommended Stories

ನಟಿ ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿಯಿಂದ ಗಲಾಟೆ; ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ!
ಬೆಂಗಳೂರಲ್ಲಿ ಪಾಸ್‌ಪೋರ್ಟ್ ಮಾಡಲು ಎಲ್ಲೂ ಹೋಗಬೇಕಿಲ್ಲ, ಮನೆ ಬಾಗಿಲಿಗೆ ಬರಲಿದೆ ವ್ಯಾನ್