
ಬೆಂಗಳೂರು(ಫೆ.13) ಬೆಂಗಳೂರಲ್ಲಿ ಕೆಲಸದ ಒತ್ತಡ, ಪ್ರಯಾಣದ ಕಿರಿಕಿರಿ ಸಾಮಾನ್ಯ. ಅದೆಷ್ಟೇ ಬೇಗ ಹೊರಟರೂ ಕಚೇರಿಗೆ ತುಲುಪುದು ಲೇಟ್. ಟ್ರಾಫಿಕ್ ಸಮಸ್ಯೆಗಳ ನಡುವೆ ಕಚೇರಿಗೆ ತಲುವುದೇ ದೊಡ್ಡ ಸಾಹಸ. ಇನ್ನು ಕೋವಿಡ್ ಕಾಲದಿಂದ ಜಾರಿಗೊಂಡ ವರ್ಕ್ ಫ್ರಮ್ ಹೋಮ್ ಆಯ್ಕೆ, ಹೈಬ್ರಿಡ್ ಮಾಡೆಲ್‌ಗಳೂ ಚಾಲ್ತಿಯಲ್ಲಿದೆ. ಆದರೆ ಎಂದಾದರೂ ವರ್ಕ್ ಫ್ರಮ್ ಕಾರ್ ಕೇಳಿದ್ದೀರಾ? ಇದು ಬೆಂಗಳೂರಿನಲ್ಲಿ ಮಾತ್ರ ಸಾಧ್ಯ.ಮಹಿಳೆಯೊಬ್ಬರು ಕಾರು ಡ್ರೈವಿಂಗ್ ಮಾಡುತ್ತಾ ಸಾಗಿದ್ದಾರೆ. ಆದರೆ ಡ್ರೈವಿಂಗ್ ಜೊತೆಗೆ ಲ್ಯಾಪ್‌ಟಾಪ್ ಮೂಲಕ ಕೆಲಸ ಮಾಡುತ್ತಾ ಸಾಗುತ್ತಿರುವ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಬೆಂಗಳೂರು ಪೊಲೀಸರು ಈ ಮಹಿಳೆ ಪತ್ತೆ ಹಚ್ಚಿ ಉಡುಗೊರೆ ನೀಡಿದ್ದಾರೆ.
ಉತ್ತರ ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ಈ ದೃಶ್ಯದಲ್ಲಿ ಮಹಿಳೆಯೊಬ್ಬರು ಮಾರುತಿ ಸುಜುಕಿ ಬಲೆನೋ ಡ್ರೈವಿಂಗ್ ಮಾಡುತ್ತಾ ಸಾಗುತ್ತಿದ್ದಾರೆ. ಇದು ಮನೆಗೆ ತೆರಳುವ ಧಾವಂತದಲ್ಲಿ ಕೆಲಸ ಅರ್ಧ ಮುಗಿಸಿ ಇನ್ನುಳಿದ ಕೆಲಸವನ್ನು ಕಾರಿನಲ್ಲಿ ಮಾಡುತ್ತಾ ಸಾಗಿದ ಘಟನೆ ಎಂದು ವಿಶ್ಲೇಷಿಸಲಾಗುತ್ತಿದೆ. ಮಹಿಳೆ ಕಾರಿನಲ್ಲಿ ಡ್ರೈವಿಂಗ್ ಮಾಡುತ್ತಾ ಸಾಗುವ ಜೊತೆಗೆ ಲ್ಯಾಪ್‌ಟಾಪ್ ತೆರೆದು ಕೆಲಸ ಮಾಡುತ್ತಾ ಸಾಗಿದ್ದಾರೆ. ಕಿಕ್ಕಿರಿದು ತುಂಬಿದ ಟ್ರಾಫಿಕ್ ರಸ್ತೆಯಲ್ಲಿ ಮಹಿಳೆ ಈ ರೀತಿ ಸಾಗಿದ್ದಾರೆ.
ಟೆಕ್ಕಿಗಳ ಮೀರಿಸುತ್ತಿದೆ ಅಡುಗೆ ಕೆಲಸದ ರಿತು ದೀದಿ ರೆಸ್ಯೂಮ್, ಇದು ಬೆಂಗಳೂರಲ್ಲಿ ಮಾತ್ರ!
ರಸ್ತೆ, ಲ್ಯಾಪ್‌ಟಾಪ್, ಇತರ ವಾಹನ, ಹೀಗೆ ಎಲ್ಲವನ್ನೂ ಏಕಕಾಲದಲ್ಲಿ ನಿಭಾಯಿಸುತ್ತಾ ಸಾಗಿದ್ದಾರೆ. ಮಹಿಳೆಯ ಈ ಸಾಹಸವನ್ನು ಮತ್ತೊಂದು ಕಾರಿನ ಪ್ರಯಾಣಿಕರು ವಿಡಿಯೋ ಮೂಲಕ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಬೆಂಗಳೂರು ಉತ್ತರ ಡಿಸಿಸಿ ಕೈಸೇರಿದೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಕಾರಿನ ನೋಂದಣಿ ಸಂಖ್ಯೆ ಪಡೆದು ವಾಹನದ ವಿವರ ಪಡೆದಿದ್ದಾರೆ. ಬಳಿಕ ಮಹಿಳೆಯನ್ನು ಪತ್ತೆ ಹಚ್ಚಿ ದಂಡ ವಿಧಿಸಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ದಂಡ ವಿಧಿಸಲಾಗಿದೆ.
ಈ ವಿಡಿಯೋ ಹಂಚಿಕೊಂಡ ಪೊಲೀಸ್, ವರ್ಕ್ ಪ್ರಮ್ ಹೋಮ್ ಸರಿ ಆದರೆ ಡ್ರೈವಿಂಗ್ ಮಾಡುತ್ತಾ ವರ್ಕ್ ಫ್ರಮ್ ಕಾರು ನಿಯಮ ಉಲ್ಲಂಘನೆ ಎಂದು ಪೊಲೀಸ್ ಈ ವಿಡಿಯೋ ಹಾಗೂ ಫೋಟೋ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಭಾರಿ ಕಮೆಂಟ್ ವ್ಯಕ್ತವಾಗಿದೆ. ಈ ರೀತಿ ಸ್ಟಂಟ್ ಮಾಡುವವರ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಲು ಆಗ್ರಹಿಸಿದ್ದಾರೆ. ಮತ್ತೆ ಕೆಲವರು, ಇದು ರೀಲ್ಸ್‌ಗಾಗಿ ಮಾಡಿರಹುದು ಎಂದಿದ್ದಾರೆ. ಇದಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ. ರೀಲ್ಸ್ ಆದರೂ ಸರಿ ಏನೇ ಆದರೂ ಸರಿ ನಿಯಮ ಉಲ್ಲಂಘನೆಯಾಗಿದೆ ಎಂದಿದ್ದಾರೆ
ಇದೇ ವೇಳೆ ಮತ್ತೆ ಒಂದಷ್ಟು ಮಂದಿ ಫನ್ನಿ ಕಮೆಂಟ್ ಮಾಡಿದ್ದಾರೆ. ಈ ಮಹಿಳೆಯ ಬಾಸ್ ನಾರಾಯಣಮೂರ್ತಿ, ಎಸ್ಎನ್ ಸುಬ್ರಹ್ಮಣ್ಯ ಅಥವಾ ಎಲಾನ್ ಮಸ್ಕ್ ಆಗಿರುವ ಸಾಧ್ಯತೆ ಇದೆ. 70 ಗಂಟೆ, 90 ಗಂಟೆ ಹಾಗೂ 120 ಕೆಲಸ ಮಾಡಬೇಕು ಎಂದರೆ ಬೆಂಗಳೂರಲ್ಲಿ ಇದಲ್ಲದೆ ಬೇರೆ ವಿಧಿಇಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇನ್ಪೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ, ಎಲ್ ಆ್ಯಂಡ್ ಟಿ ಮುಖ್ಯಸ್ಥ ಎಸ್ ಎನ್ ಸುಬ್ರಹ್ಮಣ್ಯನ್ ಕೆಲಸದ ಕುರಿತು ನೀಡಿದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು. ನಾರಾಯಣ ಮೂರ್ತಿ ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದಿದ್ದರು. ಇತ್ತ ಸುಬ್ರಹ್ಮಣ್ಯನ್ ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು ಎಂದಿದ್ದಾರೆ. ಇಷ್ಟೇ ಅಲ್ಲ ಭಾನುವಾರ ಪತ್ನಿ ಮುಖ ಎಷ್ಟು ನೋಡುತ್ತೀರಿ. ಕಚೇರಿಗೆ ಬಂದು ಕೆಲಸ ಮಾಡಿ ಎಂದಿದ್ದರು. ಇತ್ತ ಉದ್ಯಮಿ ಎಲಾನ್ ಮಸ್ಕ್ ವಾರದಲ್ಲಿ 120 ಗಂಟೆ ಕೆಲಸ ಮಾಡಿ ಎಂದಿದ್ದರು. ಈ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಇದೀಗ ಮಹಿಳೆ ಕಾರಿನಲ್ಲಿ ಕೆಲಸ ಮಾಡಿದ ವಿಡಿಯೋಗೆ ಕಮೆಂಟ್ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಟ್ರಾಫಿಕ್ ಹೆಚ್ಚಾಗಿದೆ. 10 ರಿಂದ 15 ಕಿಲೋಮೀಟರ್ ದೂರದ ಪ್ರಯಾಣಕ್ಕೆ 2 ಗಂಟೆ ಹೆಚ್ಚು ತೆಗೆದುಕೊಳ್ಳುತ್ತಿದೆ. ಕೆಲಸ ಮುಗಿಸಬೇಕು, ಮನೆ ನಿರ್ವಹಣೆ, ಮಕ್ಕಳ ನಿರ್ವಹಣೆ ಎಲ್ಲವನ್ನು ಮಾಡಲು ಈ ರೀತಿ ಕಾರಿನಲ್ಲೂ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ.
ಇದು ಬೆಂಗಳೂರಲ್ಲಿ ಮಾತ್ರ, ಬಾಡಿಗೆದಾರನ ಸ್ಟಾರ್ಟ್ಅಪ್ ಉದ್ಯಮಕ್ಕೆ ಮನೆ ಮಾಲೀಕನೇ ಟೆಕ್ ಗುರು!