
ಬೆಂಗಳೂರು: ನಗರದಲ್ಲಿನ ರಸ್ತೆ ಸುರಕ್ಷತೆಯ ಅರಿವು ಮೂಡಿಸಲು ಈ ಕುರಿತಾದ ಕಾರ್ಯಕ್ರಮ ಹಮ್ಮಿ ಕೊಳ್ಳಲು ಬೆಂಗಳೂರಿನ ಸಂಚಾರಿ ಪೊಲೀಸರೊಂದಿಗೆ ಖ್ಯಾತ ಫುಡ್ ಡೆಲಿವರಿ ಕಂಪನಿ ಸ್ವಿಗ್ಗಿ(ಸ್ವಿಗ್ಗಿ ಲಿಮಿಟೆಡ್, ಎನ್ಎಸ್ಇ: ಸ್ವಿಗ್ಗಿ/ಬಿಎಸ್ಇ: 544285) ಕೈಜೋಡಿಸಿದೆ. ಈ ಕಾರ್ಯಕ್ರಮದಲ್ಲಿ ಸ್ವಿಗ್ಗಿ ಸುಮಾರು 450 ಫುಡ್ ಡೆಲಿವರಿ ಡೆಲಿವರಿ ಬಾಯ್ ಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ರಸ್ತೆಯಲ್ಲಿ ವಾಹನ ಸಂಚಾರದ ವೇಳೆ ಅಗತ್ಯವಿರುವ ಸುರಕ್ಷತೆ, ಚಾಲನೆ ವೇಳೆ ಜಾಗರೂಕತೆ, ವಾಹನ ಚಾಲನೆ ವೇಳೆ ಸಂಚಾರಿ ನಿಯಮಗಳ ಸೂಕ್ತ ಪಾಲನೆ ಹಾಗೂ ಸಮಯ ಪಾಲನೆ ವೇಳೆ ಡೆಲಿವರಿ ಬಾಯ್ ಗಳ ಸುವರ್ತನೆ ಮತ್ತು ಡೆಲಿವರಿ ವೇಳೆ ಸೂಕ್ತ ರಸ್ತೆಗಳ ಆಯ್ಕೆ ಕುರಿತು ಮಾಹಿತಿ ನೀಡಲಾಯಿತು.
ಈ ಕಾರ್ಯಕ್ರಮಕ್ಕೆ ಸಹಾಯಕ ಪೊಲೀಸ್ ಆಯುಕ್ತ, ಎಸ್ಎಚ್ಓ, ಆರ್ಟಿಪಿ ಇನ್ ಸ್ಪೆಕ್ಟರ್ ಗಳ ನೇತೃತ್ವ ದಲ್ಲಿ ಬೆಂಗಳೂರು ಸಂಚಾರಿ ಪೊಲೀಸ್ ಅಧಿಕಾರಿಗಳು ಡೆಲಿವರಿ ಬಾಯ್ ಗಳಿಗೆ ಉಪಯುಕ್ತ ತರಬೇತಿ ಮತ್ತು ಮಾರ್ಗದರ್ಶನ ಹಾಗೂ ರಸ್ತೆ ಸಂಚಾರದ ವೇಳೆ ಅಗತ್ಯವಾದ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದರು. ಈ ವೇಳೆ, ಸಂಚಾರಿ ನಿಯಮಗಳ ಕುರಿತಾದ ರಸ ಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ವಿಜೇತರಿಗೆ ಟ್ರೋಫಿ ಗಳನ್ನು ನೀಡಿ ಗೌರವಿಸಲಾಯಿತು. ಈ ವೇಳೆ ಡೆಲಿವರಿ ಬಾಯ್ ಗಳಿಗೆ ʼಐ ಡೆಲಿವರ್ ಸೇಫ್ʼಎನ್ನುವ ಬ್ಯಾಡ್ಜ್, ಬೈಕುಗಳಿಗೆ ಡೆಲಿವರಿಂಗ್ ಸೇಫ್ಲಿ ಎನ್ನುವ ಸ್ಟಿಕ್ಕರ್ ಅಂಟಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಮಾಣಪತ್ರ ನಗ್ಗೆಟ್ಸ್ ಎಂಬ ಆಪ್ ಮೂಲಕ ನೀಡಲಾಗುವುದು.
``ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಜಾಗತಿಕವಾಗಿ ಗಮನಿಸಿ ದರೆ, ಭಾರತದಲ್ಲಿ ರಸ್ತೆ ಅಫಘಾತಗಳ ಸಂಖ್ಯೆ ಗಣನೀಯವಾಗಿ ಏರಿದೆ. ಈ ನಿಟ್ಟಿನಲ್ಲಿ, ಫುಡ್ ಡೆಲಿವರಿ ಬಾಯ್ ಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸ್ವಿಗ್ಗಿ ಕಂಪನಿಯು, ಡೆಲಿವರಿ ಬಾಯ್ ಗಳ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಜತೆ ರಸ್ತೆ ಸಂಚಾರ ಸುರಕ್ಷತೆ ಕುರಿತಂತೆ ಹಲವು ಅಭಿಯಾನಗಳನ್ನು ಕೈಗೊಳ್ಳುತ್ತಿವೆ. ಇಂಥ ಕಾರ್ಯಕ್ರಮ ದೇಶಾದ್ಯಂತ ನಡೆಯುತ್ತಿದೆ. ರಸ್ತೆ ಸಂಚಾರದ ವೇಳೆ ಪ್ರತಿ ಸಲ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು ಉದ್ದೇಶವಾಗಿದೆ. ಈ ವಿಚಾರದಲ್ಲಿ ಮುಂಬೈನ ಸಂಚಾರಿ ಪೊಲೀಸರ ಸಹಕಾರಕ್ಕೆ ಕೃತಜ್ಞತೆಗಳು’’ ಎಂದು ಸ್ವಿಗ್ಗಿಯ ಚಾಲಕರ ಸಂಘಟನೆಯ ಹಿರಿಯ ಉಪಾಧ್ಯಕ್ಷ ಶಲಭ್ ಶ್ರೀವಾಸ್ತವ್ ಮೆಚ್ಚುಗೆ ವ್ಯಕ್ತಪಡಿಸಿದರು.
ತನ್ನ ಫುಡ್ ಡೆಲಿವರಿ ಕೆಲಸದಲ್ಲಿ ಸುರಕ್ಷತೆಯತ್ತ ಗಮನ ಹರಿಸಲು ಸ್ವಿಗ್ಗಿ ಕಂಪನಿಯು, ದೇಶದ ವಿವಿಧ ಭಾಗಗಳಲ್ಲಿ ಸುರಕ್ಷತೆ ಕುರಿತಾದ ಹಲವು ಅಭಿಯಾನಗಳನ್ನು ಹಮ್ಮಿಕೊಳ್ಳುತ್ತಿದೆ. ಫುಡ್ ಡೆಲಿವರಿ ಬಾಯ್ ಗಳಿಗಾಗಿ ವಿಮೆ ವ್ಯವಸ್ಥೆಯನ್ನು ಸ್ವಿಗ್ಗಿ ಕಲ್ಪಿಸಿದೆ.
ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಗುರುಗ್ರಾಮ ನಗರದ ಸಂಚಾರಿ ಪೊಲೀಸರ ರಸ್ತೆ ಸಾರಿಗೆ ಸುರಕ್ಷತೆ ಬಗ್ಗೆ ಹಾಗೂ ಸಂಚಾರಿ ಅರಿವಿನ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳುವಲ್ಲಿ ಸ್ವಿಗ್ಗಿ ಪಾಲುದಾರಿಕೆ ಮಾಡಿತ್ತು. ಈ ತರಬೇತಿ ಕಾರ್ಯಕ್ರಮದಲ್ಲಿ ಸುಮಾರು 100 ಡೆಲಿವರ್ ಬಾಯ್ ಗಳು ಭಾಗವಹಿಸಿದ್ದರು. ಕೈಗಾರಿಕಾ ಮಟ್ಟದಲ್ಲಿ 2023ರಲ್ಲಿ ತಮ್ಮ ಕಂಪನಿಯ ಡೆಲಿವರಿ ಬಾಯ್ ಗಳಿಗಾಗಿ ಉಚಿತ ಹಾಗೂ ವೇಗದ ಆಂಬ್ಯು ಲೆನ್ಸ್ ಸೇವೆ ನೀಡಲು ಡಯಲ್ 4242 ಜತೆ ಪಾಲುದಾರಿಕೆಗೆ ಸಹಿ ಹಾಕಿತು.
ಇದನ್ನೂ ಓದಿ: ಪದೇಪದೆ ರೂಲ್ಸ್ ಬ್ರೇಕ್ ಮಾಡ್ತಿದ್ದ ವಾಹನ ಸವಾರರಿಗೆ ಬಿಗ್ ಶಾಕ್; ₹50,000+ ದಂಡ ಬಾಕಿ ಇದ್ದ 85 ವಾಹನ ಜಪ್ತಿ!
ರಸ್ತೆ ಅಪಘಾತಕ್ಕೀಡಾಗುವ ಡೆಲಿವರಿ ಬಾಯ್ ಗಳ ಅಗತ್ಯಕ್ಕೆ ತುರ್ತು ಬೆಂಬಲ ಸೇವೆ ನೀಡುವ ವ್ಯವಸ್ಥೆಯನ್ನು ಸ್ವಿಗ್ಗಿ ಕಂಪನಿ ಹೊಂದಿದೆ. ಈ ತುರ್ತು ಬೆಂಬಲ ಸೇವಾ ವ್ಯವಸ್ಥೆಯಲ್ಲಿ 24*7 ಹಾಟ್ ಲೈನ್ ಸಂಖ್ಯೆಗಳು, ಡೆಲಿವರಿ ಬಾಯ್ ಗಳಿಗಾಗಿ ತುರ್ತು ಕಾರ್ಡುಗಳು, ಸ್ಥಳೀಯ ಪೊಲೀಸರೊಂದಿಗೆ ನೇರ ಸಂಪರ್ಕ, ಆಪ್ ಮೂಲಕ ಎಸ್ಒಎಸ್ ಗುಂಡಿ ಒತ್ತಿದಲ್ಲಿ ಆಂಬುಲೆನ್ಸ್ ಸೇವೆ ಲಭ್ಯವಿದೆ.
ಸ್ವಿಗ್ಗಿಯು ರಸ್ತೆ ಸುರಕ್ಷತೆ ಕುರಿತ ಅಭಿಯಾನವನ್ನು ಕೋಲ್ಕತ್ತಾ, ಪುಣೆ, ಚಂಡೀಗಢ ಹಾಗೂ ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಹಮ್ಮಿಕೊಂಡಿದೆ. ಸ್ವಿಗ್ಗಿ ಕಂಪನಿಗೆ ಡೆಲಿವರಿ ಬಾಯ್ ಗಳ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ. ಫುಡ್ ಡೆಲಿವರಿ ಆರಂಭಿಸುವ ಮುನ್ನ ಡೆಲಿವರಿ ಬಾಯ್ ಗಳು ರಸ್ತೆ ಸುರಕ್ಷತಾ ಮಾಡ್ಯೂಲ್ ಅನ್ನು ಗಮನಿಸಲೇಬೇಕು. ಈ ಮಾಡ್ಯೂಲ್ ನಲ್ಲಿ ಸುರಕ್ಷತಾ ಅಭಿಯಾನ ನಡೆಸಲಾಗುವುದು.
ಇದನ್ನೂ ಓದಿ: Bengaluru: ಎಚ್ಚರ... ಬೆಂಗಳೂರಿನ AI ಕ್ಯಾಮೆರಾಗಳು ಸೀಟ್‌ಬೆಲ್ಟ್ ಹಾಕಿದ್ರೂ, ತಪ್ಪಾಗಿ ಫೈನ್ ಹಾಕ್ತಿವೆ!