ಪಾಕ್ ಬೆಂಬಲಿಸಿದ ಟರ್ಕಿ, ಅಜರ್‌ಬೈಜಾನ್‌ನಿಂದ ಬಟ್ಟೆ ಆಮದು ನಿಲ್ಲಿಸಿದ ಬೆಂಗಳೂರು ವ್ಯಾಪಾರಿ

Published : May 17, 2025, 07:42 PM IST
ಪಾಕ್ ಬೆಂಬಲಿಸಿದ ಟರ್ಕಿ, ಅಜರ್‌ಬೈಜಾನ್‌ನಿಂದ ಬಟ್ಟೆ ಆಮದು ನಿಲ್ಲಿಸಿದ ಬೆಂಗಳೂರು ವ್ಯಾಪಾರಿ

ಸಾರಾಂಶ

ಪಾಕಿಸ್ತಾನ ಹಾಗೂ ಭಯೋತ್ಪಾದಕತೆ ಬೆಂಬಲಿಸಿದ ಟರ್ಕಿ ಹಾಗೂ ಅಜರ್‌ಬೈಜನ್ ವಿರುದ್ಧ ಭಾರತದಲ್ಲಿ ಅಭಿಯಾನ ಹೆಚ್ಚಾಗಿದೆ. ಇದೀಗ ಬೆಂಗಳೂರು ವ್ಯಾಪಾರಿ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಟರ್ಕಿ ಹಾಗೂ ಅಜರ್‌ಬೈಜಾನ್‌ನಿಂದ ಬಟ್ಟೆ ಆಮದು ಮಾಡಿಕೊಳ್ಳುವುದನ್ನು ಬೆಂಗಳೂರು ವ್ಯಾಪಾರಿಗಳು ಸ್ಥಗಿತಗೊಳಿಸಿದ್ದಾರೆ.

ಬೆಂಗಳೂರು(ಮೇ.17) ಭಾರತದ ವಿರುದ್ದ ಉಗ್ರರನ್ನು ಕಳುಹಿಸಿದ ಪಾಕಿಸ್ತಾನಕ್ಕೆ ಭಾರತದ ಆಪರೇಶನ್ ಸಿಂದೂರ ಮೂಲಕ ಉತ್ತರ ನೀಡಿತ್ತು. ಆಪರೇಶನ್ ಸಿಂದೂರಕ್ಕೆ ಪ್ರತಿಯಾಗಿ ಪಾಕಿಸ್ತಾನ ನಡೆಸಿದ ದಾಳಿಗೆ ಟರ್ಕಿ, ಅಜರ್‌ಬೈಜಾನ್ ಬೆಂಬಲ ನೀಡಿತ್ತು. ಭಾರತದ ಮೇಲೆ ಪಾಕಿಸ್ತಾನ ನಡೆಸಿದ ದಾಳಿಗೆ ಈ ಎರಡು ರಾಷ್ಟ್ರಗಳು ಎಲ್ಲಾ ನೆರವು ನೀಡಿತ್ತು. ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಟರ್ಕಿ ಹಾಗೂ ಅಜರ್‌ಬೈಜಾನ್ ವಿರುದ್ಧ ಭಾರತೀಯರು ಬಿಷ್ಕಾರ ಅಭಿಯಾನ ತೀವ್ರಗೊಳಿಸಿದ್ದಾರೆ. ಇತ್ತ ಸರ್ಕಾರ ಕೂಡ ಹಲವು ನಿರ್ಬಂಧ ವಿಧಿಸಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಬಟ್ಟೆ ವ್ಯಾಪಾರಿಗಳು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಪಾಕಿಸ್ತಾನ ಬೆಂಬಲಿಸಿದ ಟರ್ಕಿ ಹಾಗೂ ಅಜರ್‌ಬೈಜಾನ್‌ನಿಂದ ಬಟ್ಟೆ ಆಮದು ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದಾರೆ.

ದೇಶದ ಹಿತಾಸಕ್ತಿ ಮುಖ್ಯ
ಬೆಂಗಳೂರಿನ ವೋಲ್‌ಸೇಲ್ ಕ್ಲೋತ್ ಮರ್ಚೆಂಟ್ ಅಸೋಸಿಯೇಶನ್ ಈ ನಿರ್ಧಾರ ಘೋಷಿಸಿದೆ. ಬೆಂಗಳೂರಿನ ಬಟ್ಟೆ ವ್ಯಾಪಾರಿಗಳ ಸಂಘ ಟರ್ಕಿ ಹಾಗೂ ಅಜರ್‌ಬೈಜಾನ್‌ನಿಂದ ಬಟ್ಟೆ ಆಮದು ಮಾಡಿಕೊಳ್ಳುವುದು ನಿಲ್ಲಿಸಿದೆ. ಎರಡು ರಾಷ್ಟ್ರಗಳಿಂದ ಯಾವುದೇ ವ್ಯಾಪಾರ ಮಾಡಿಕೊಳ್ಳುವುದಿಲ್ಲ ಎಂದಿದೆ. ಈ ಕುರಿತು ಮಾತನಾಡಿದ ಬೆಂಗಳೂರು ಬಟ್ಟೆ ವ್ಯಾಪಾರಿಗಳ ಸಂಘಟನೆ ಅಧ್ಯಕ್ಷ ಪ್ರಕಾಶ್ ಪಿರಾಗಲ್,  ದೇಶದ ಹಿತಾಸಕ್ತಿ ಮುಖ್ಯ. ಭಾರತದ ವಿರುದ್ದ ಪ್ರವರ್ತಿಸಿದ ಟರ್ಕಿ ಹಾಗೂ ಅಜರ್‌ಬೈಜಾನ್‌ನಿಂದ ಯಾವುದೇ ವ್ಯಾಪಾರ ವಹಿವಾಟು ಇಟ್ಟುಕೊಳ್ಳುವುದಿಲ್ಲ ಎಂದಿದ್ದಾರೆ.

ಜೆಎನ್‌ಯು, ಜಾಮಿಯಾ ಬಳಿಕ ಟರ್ಕಿ ಜೊತೆಗಿನ ಒಪ್ಪಂದ ರದ್ದುಗೊಳಿಸಿದ ಐಐಟಿ ರೂರ್ಕಿ

ಬೆಂಗಳೂರು ಬಟ್ಟೆ ವ್ಯಾಪಾರಿಗಳ ಸಂಘದಡಿ ಬರೋಬ್ಬರಿ 3,000ಕ್ಕೂ ಹೆಚ್ಚು ಬಟ್ಟೆ ವ್ಯಾಪಾರಿಗಳಿದ್ದಾರೆ. ಈ ಮೂಲಕ ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ವ್ಯಾಪಾರ ವಹಿವಾಟು ಟರ್ಕಿ ಹಾಗೂ ಅಜರ್‌ಬೈಜಾನ್ ಜೊತೆ ನಡೆಸುತ್ತಿದೆ. ಈ ಎರಡು ರಾಷ್ಟ್ರಗಳಿಂದ ಬಟ್ಟೆ ಆಮದು ಮಾಡಿಕೊಳ್ಳುತ್ತದೆ. ಆದರೆ ಭಾರತದ ವಿರುದ್ಧವೇ ಪ್ರವರ್ತಿಸಿದ ಈ ಎರಡು ರಾಷ್ಟ್ರಗಳ ಜೊತೆ ಯಾವುದೇ ವ್ಯಾಪಾರ ವಹಿವಾಟು ಮಾಡದಂತೆ ನಿರ್ಧರಿಸಿದ್ದೇವೆ ಎಂದಿದ್ದಾರೆ.

ಟರ್ಕಿಗೆ ಭಾರಿ ಹೊಡೆತ
ಪಾಕಿಸ್ತಾನ ಬೆಂಬಲಿಸಿದ ಟರ್ಕಿ ಹಾಗೂ ಅಜರ್‌ಬೈಜಾನ್ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಬೆಂಗಳೂರು ವ್ಯಾಪಾರಿಗಳು ನೂರಾರು ಕೋಟಿ ರೂಪಾಯಿ ಬಟ್ಟೆ ವ್ಯಾಪಾರ ಸ್ಥಗಿತಗೊಳಿಸಿದ್ದಾರೆ. ಇತ್ತ ಹಲವು ಟರ್ಕಿ ಉತ್ನನ್ನಗಳಿಗೆ ಬಹಿಷ್ಕಾರ ಹಾಕಲಾಗಿದೆ. ಇನ್ನು ಟರ್ಕಿ ಹಾಗೂ ಅಜರ್‌ಬೈಜಾನ್ ದೇಶಕ್ಕೆ ಪ್ರವಾಸ ಹೋಗುವವರು ರದ್ದು ಮಾಡಿದ್ದಾರೆ. ಭಾರತದ ಹಲವು ಬಹಿಷ್ಕಾರ ಹಾಗೂ ನಿರ್ಬಂಂಧ ಕ್ರಮಗಳು ಉಭಯ ರಾಷ್ಟ್ರಗಳಿಗೆ ಆರ್ಥಿಕವಾಗಿ ತೀವ್ರ ಹೊಡೆತ ನೀಡಿದೆ. ಭಾರತ ಟರ್ಕಿ ಹಾಗೂ ಅಜರ್‌ಬೈಜನ್ ವಿರುದ್ಧ ಯಾವುದೇ ಯುದ್ದ ಮಾಡದೇ ದೇಶದ ಆರ್ಥಿಕತೆ ಮೇಲೆ ದಾಳಿ ಮಾಡಿದೆ. 
 

PREV
Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ