ಮಲಯಾಳಂ ಸಿನಿಮಾ ಸೂಕ್ಷ್ಮದರ್ಶಿನಿ ಸ್ಟೈಲ್‌ನಲ್ಲಿ ಕೊ*, ಮೃತರ ಮೊಬೈಲ್‌ ತನ್ನಲ್ಲೇ ಇರಿಸಿಕೊಂಡು ಅವರ ಕುಟುಂಬಕ್ಕೆ ಮೆಸೇಜ್‌ ಕಳಿಸ್ತಿದ್ದ ಇಂದುಶೇಖರ್‌!

Published : Nov 06, 2026, 12:53 PM IST
Sookshmadarshini Movie Style Case In Bengaluru

ಸಾರಾಂಶ

ಬೆಂಗಳೂರಿನ ರಾಜಾಜಿನಗರದ ಭಾಷ್ಯಂ ಸರ್ಕಲ್‌ನಲ್ಲಿ ನಡೆದ 7 ಮಂದಿಯ ಭೀಕರ ಸಾಮೂಹಿಕ ಹ** ಮಲಯಾಳಂನ 'ಸೂಕ್ಷ್ಮದರ್ಶಿನಿ' ಸಿನಿಮಾ ಶೈಲಿಯ ಸಾಕ್ಷ್ಯನಾಶದ ಯತ್ನ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕ ಇಂದುಶೇಖರ್, ತನ್ನ ಪತ್ನಿ ಸುನೀತಾ ಸೇರಿದಂತೆ ಕುಟುಂಬದ 7 ಮಂದಿಯನ್ನು ರುಬ್ಬುಗುಂಡಿನಿಂದ ಜಜ್ಜಿ ಪೂರ್ವಯೋಜಿತವಾಗಿ ಹ**ಮಾಡಿದ್ದ.

ಬೆಂಗಳೂರು (ನ.6): ಮಲಯಾಳಂನ ಲೇಡಿ ಸೂಪರ್‌ಸ್ಟಾರ್‌ ನಜರಿಯಾ ನಜೀಂ ಅಭಿನಯದ ಸೂಕ್ಷ್ಮದರ್ಶಿನಿ ಸಿನಿಮಾ ಸ್ಟೈಲ್‌ನಲ್ಲೇ ಬೆಂಗಳೂರಿನಲ್ಲಿ ಭೀಕರ ಕೊ* ಆಗಿದೆ. 2024ರಲ್ಲಿ ರಿಲೀಸ್‌ ಆಗಿ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿದ್ದ ಈ ಸಿನಿಮಾದಲ್ಲಿ ಸ್ವಂತ ಅಕ್ಕನನ್ನೇ ಕೊ* ಮಾಡಿ ಸಾಕ್ಷ್ಯನಾಶಕ್ಕೆ ಮಾಡುವ ಥ್ರಿಲ್ಲರ್‌ ಕಥಾಹಂದರ ಹೊಂದಿತ್ತು. ಸೂಕ್ಷ್ಮದರ್ಶಿನಿ ಸಿನಿಮಾದಲ್ಲಿ ಅಕ್ಕನನ್ನೇ ಕೊಲೆ ಮಾಡುವ ತಮ್ಮ ಆಕೆಯ ಮೊಬೈಲ್‌ ತನ್ನಲ್ಲೇ ಇರಿಸಿಕೊಂಡು, ಅದರಿಂದ ಮೆಸೇಜ್‌ ಕಳಿಸಿ ಸಾಕ್ಷ್ಯನಾಶ ಮಾಡುವ ಕಥೆ ಇತ್ತು.ಅದೇ ರೀತಿಯಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದ ಒಂದೇ ಕುಟುಂಬದ 7 ಮಂದಿಯ ಕೊ**ಯಲ್ಲೂ ನಡೆದಿದೆ. ಇಲ್ಲೂ ಕೂಡ ಸಂಚಿನಿಂದ ಈ ವ್ಯಕ್ತಿಗಳ ಬರ್ಬರ ಹ* ಮಾಡಿದ್ದಲ್ಲದೆ, ಸಾಕ್ಷಿಗಳನ್ನು ಮುಚ್ಚಿಹಾಕುವ ಸಲುವಾಗಿ ನಡೆದ ಪ್ರಯತ್ನ ಸೂಕ್ಷ್ಮದರ್ಶಿನಿ ಸಿನಿಮಾದ ಕ್ಲೈಮ್ಯಾಕ್ಸ್‌ನಂತೆಯೇ ಇದೆ.

ರಾಜಾಜಿನಗರದ ಬಾಷ್ಯಂ ಸರ್ಕಲ್‌ನಲ್ಲಿ ಒಂದೇ ಕುಟುಂಬದ 7 ಮಂದಿಯನ್ನು ಹ** ಮಾಡಿದ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಘಟನೆಯ ಬಗ್ಗೆ ಒಂದೊಂದೇ ವಿವರಗಳು ಈಗ ಹೊರಬರುತ್ತಿದ್ದು, ಕೇಸ್‌ನಲ್ಲಿ ಇಂದುಶೇಖರ್‌ ಮಾತ್ರಲ್ಲದೆ ಆತನ ಅಪ್ರಾಪ್ತ ಮಗಳು ಕೂಡ ಈ ಕೇಸ್‌ನಲ್ಲಿ ಭಾಗಿಯಾಗಿರುವುದು ಖಚಿತವಾಗಿದೆ. ಇನ್ನು ಪೊಲೀಸರ ನಿರ್ಲಕ್ಯದ ಬಗ್ಗೆಯೂ ದೂರುಗಳು ಬಂದಿವೆ. 15 ದಿನಗಳ ಅಂತರದಲ್ಲಿ ಈ ಘಟನೆ ನಡೆದಿದ್ದು, ಮೊದಲ ಕೊ** ನಡೆದ ಬಳಿಕ ಒಂದಿಬ್ಬರ ನಾಪತ್ತೆಯಾಗಿದ್ದರು. ಈ ವೇಳೆ ಮಿಸ್ಸಿಂಗ್‌ ದೂರು ದಾಖಲು ಮಾಡಲಾಗಿತ್ತು. ಈ ವೇಳೆ ಸರಿಯಾಗಿ ತನಿಖೆ ಮಾಡಿದ್ದರೆ, ಕೆಲವರಾದರೂ ಉಳಿಯುತ್ತಿದ್ದರು ಎಂದು ಕುಟುಂಬದವರ ಆರೋಪವಾಗಿದೆ.

ಸೂಕ್ಷ್ಮದರ್ಶಿನಿ ಫಿಲ್ಮ್‌ ಸ್ಟೈಲ್‌ನಲ್ಲಿ ಸಾಕ್ಷ್ಯನಾಶ

ಅಕ್ಟೋಬರ್‌16 ರಿಂದಲೇ ಇಂದುಶೇಖರ್‌ ಕೊ** ಮಾಡಲು ಆರಂಭಿಸಿದ್ದ. ನಂದಿಬೆಟ್ಟ ಚಾರ್ಮಾಡಿ ಘಾಟ್‌, ತಮಿಳುನಾಡಿನ ವಿವಿಧ ಕಡೆ ಬಾಡಿ ಎಸೆದಿದ್ದಾಗಿ ಮಾಹಿತಿ ನೀಡಿದ್ದಾರೆ. ಕೊ* ಮಾಡಿದ ಬಳಿಕ ಮೃತರಾದವರ ಎಲ್ಲರ ಮೊಬೈಲ್‌ಗಳನ್ನು ತನ್ನಲ್ಲಿಯೇ ಇರಿಸಿಕೊಂಡಿದ್ದ. ಆ ಬಳಿಕ ಅವರ ಮೊಬೈಲ್‌ಗಳಿಂದಲೇ ಅವರ ಕುಟುಂಬಕ್ಕೆ ನಾವೆಲ್ಲಾ ಟ್ರಿಪ್‌ಗೆ ಹೋಗಿರುವುದಾಗಿ ವಿಚಾರ ತಿಳಿಸಿದ್ದ. ಟ್ರಿಪ್‌ಗೆ ಹೋಗಿದ್ದೇವೆ. ಇಲ್ಲಿ ನೆಟ್‌ವರ್ಕ್‌ ಸಿಕ್ತಾ ಇಲ್ಲ ಎಂದು ಮೆಸೇಜ್‌ ಹಾಕಿದ್ದ. ಪೊಲೀಸರಿಗೆ ಎಲ್ಲಾರೂ ಕಾಣೆ ಆದ ಬಗ್ಗೆ ಮಾಹಿತಿ ಸಿಕ್ಕಿದಾಗ ಲೊಕೇಷನ್ ಟ್ರೇಸ್ ಮಾಡಿದ್ದಾರೆ. ಈ ವೇಳೆ ಅಷ್ಟೂ ಮೊಬೈಲ್‌ಗಳು ಒಂದೇ ಲೊಕೇಷನ್‌ನಲ್ಲಿ ಪತ್ತೆಯಾಗಿದೆ. ಈ ವೇಳೆ ಇಂದುಶೇಖರ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಏಳು ಜನರ ಹ** ಆಗಿರುವುದು ಬೆಳಕಿಗೆ ಬಂದಿದೆ. ಎಲ್ಲರನ್ನೂ ಬೆಂಗಳೂರಿನಲ್ಲೇ ಹ** ಮಾಡಿದ್ದಾನೆಯೇ ಅಥವಾ ಬೇರೆ ಕಡೆ ಈ ಕೃತ್ಯ ಎಸಗಿದ್ದಾನೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ.

ದಿವ್ಯಾ ತಾಯಿಗೆ ಕಳಿಸಿದ್ದ ಮೆಸೇಜ್‌

ಮೃತಳಾಗಿರುವ ದಿವ್ಯಾ ಅವರ ತಾಯಿಗೆ ದಿವ್ಯಾ ಅವರ ಮೊಬೈಲ್‌ನಿಂದಲೇ ಇಂದುಶೇಖರ್‌ ಕಳಿಸಿರುವ ಮೆಸೇಜ್‌ ಕೂಡ ಪೊಲೀಸರಿಗೆ ಸಿಕ್ಕಿದೆ. ಆರೋಪಿ ಮೃತ ಕುಟುಂಸ್ಥರಿಗೆ ಈತ ಮೆಸೇಜ್‌ ಕಳಿಸಿದ್ದ. ಮೃತ ದಿವ್ಯಾ ಕೊನೆಯದಾಗಿ ತನ್ನ ಅಕ್ಕ ಉಷಾಗೆ ಈ ಮೆಸೇಜ್‌ ಕಳಿಸಿದ್ದಳು. ಈ ಮಸೇಜ್ ಆರೋಪಿ ಇಂದುಶೇಖರ್ ಕಳುಹಿಸಿರುವ ಅನುಮಾನ ವ್ಯಕ್ತವಾಗಿದೆ. ಟ್ರಿಪ್ ಗೆ ಬಂದಿದ್ದೇವೆ, ಎಲ್ಲಾ ಅರಾಮಾಗಿದ್ದೇವೆ ಅಂತ ಕೊನೆಯ ಮೆಸೇಜ್ ದಿವ್ಯಾಳ ಮೊಬೈಲ್‌ನಿಂದ ಬಂದಿತ್ತು.

ಅಕ್ಟೋಬರ್‌ 26 ರಂದು ದಿವ್ಯಾಳ ಮೊಬೈಲ್‌ನಿಂದ ಸಂಜೆ 7.09 ನಿಮಿಷಕ್ಕೆ 'ಹೊಗೆನಕಲ್‌ ಟ್ರಿಪ್‌ಗೆ ಬಂದಿದ್ದೀವಿ. ಗುರುವಾರ ಬರ್ತೀನಿ. ಯಾರೂ ಟೆಂಕ್ಷನ್‌ ಮಾಡ್ಕೋಬೇಡಿ' ಎನ್ನುವ ಸಂದೇಶ ಬಂದಿತ್ತು. ಗುರುವಾರವೂ ಬರದೇ ಇದ್ದಾಗ ದಿವ್ಯಾ ಅವರ ಅಕ್ಕ ಮೆಸೇಜ್‌ ಮಾಡಿದ್ದು, 'ದಿವ್ಯಾ ಸಂಘಕ್ಕೆ ದುಡ್ಡು ಕೊಡಬೇಕಂತೆ ಕೊಡ್ತಾಳಾ ಇಲ್ವಾ ಕೇಳೇ' ಅನ್ನೋ ಮೆಸೇಜ್‌ ಹೋಗಿದೆ. ಇದೇ ಮೆಸೇಜ್‌ 'ಇವತ್ತು 6 ಗಂಟೆ ಒಳಗೆ ಕಳಿಸ್ತೀನಿ ಅಂತಾ ಹೇಳಿದೀನಿ. ಸಂಜೆಯೊಳಗೆ ಹಣವನ್ನು ಕಳಿಸಿಕೊಡುತ್ತೇನೆ' ಎಂದು ಮೆಸೇಜ್‌ ಹೋಗಿದೆ.

PREV
Read more Articles on
click me!

Recommended Stories

ಗೃಹಲಕ್ಷ್ಮೀ ಹಣ ಪಡೆದವರು ಡಿಕೆಶಿ ಅಣ್ಣನ ಋಣ ತೀರಿಸ್ಬೇಕು, 2028ರಲ್ಲಿ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರಬೇಕು: ಮಹಿಳೆಯರಿಗೆ ಸಿಎಂ ಮನವಿ
ರಾಜಧಾನಿಯಲ್ಲಿ ಎದೆನಡೆಗಿಸುವ ಕೃತ್ಯ; 7 ಜನರನ್ನು ಮುಗಿಸಿ, ಕಸದಂತೆ ಪುಣ್ಯಕ್ಷೇತ್ರದಲ್ಲಿ ಎಸೆದ ಪಾಪಿ ಇಂದುಶೇಖರ!