ರಾಜಧಾನಿಯಲ್ಲಿ ಎದೆನಡೆಗಿಸುವ ಕೃತ್ಯ; 7 ಜನರನ್ನು ಮುಗಿಸಿ, ಕಸದಂತೆ ಪುಣ್ಯಕ್ಷೇತ್ರದಲ್ಲಿ ಎಸೆದ ಪಾಪಿ ಇಂದುಶೇಖರ!

Published : Nov 06, 2026, 12:43 PM IST
Bengaluru Crime

ಸಾರಾಂಶ

ಬೆಂಗಳೂರಿನಲ್ಲಿ ಇಂದುಶೇಖರ್ ಎಂಬಾತ ತನ್ನ ಸ್ವಂತ ಮಗಳೊಂದಿಗೆ ಸೇರಿ ಪತ್ನಿ ಸೇರಿದಂತೆ ಕುಟುಂಬದ 7 ಜನರನ್ನು ಮುಗಿಸಿದ್ದಾನೆ. ಶವಗಳನ್ನು ತುಂಡರಿಸಿ ಕಸದ ಚೀಲಗಳಲ್ಲಿ ತುಂಬಿ, ಪ್ರವಾಸದ ನೆಪದಲ್ಲಿ ಘಾಟ್ ಪ್ರದೇಶಗಳಲ್ಲಿ ಎಸೆದಿದ್ದಾನೆ. ಬಾಲಕ ಯತಿನ್ ನೀಡಿದ ಹೇಳಿಕೆಯಿಂದ ಈ ಭೀಕರ ಕರಾಳ ಕಥೆ ಬಯಲಾಗಿದೆ.

ಬದುಕು ಕೆಲವೊಮ್ಮೆ ಎಷ್ಟು ಕ್ರೂರ ಮತ್ತು ನಿಗೂಢ ಅನಿಸಿಬಿಡುತ್ತದೆ. ಒಂದೆಡೆ ಬಾಳಿ ಬದುಕಬೇಕಾದ ಜೀವಗಳು, ಇನ್ನೊಂದೆಡೆ ಜಗತ್ತನ್ನೇ ಸರಿಯಾಗಿ ಕಾಣದ ಕಂದಮ್ಮಗಳು... ಮತ್ತೊಂದೆಡೆ ಕಿಂಚಿತ್ತೂ ಕರುಣೆ ಇಲ್ಲದೆ ಜೀವ ತೆಗೆದ ಆ ಪಾಪಿ ಮನಸ್ಸಿಗೆ ತೋಚಿದ್ದಾದರೂ ಏನು? ಬೆಂಗಳೂರನ್ನು ನಡುಗಿಸಿದ ಈ 7 ಜನರ ಭೀಕರ ಸಾಮೂಹಿಕ ಹ*ಕಾಂಡಕ್ಕೆ ಸ್ವಂತ ಮಗಳೇ ತಂದೆಗೆ ಸಹಕರಿಸಿರುವುದು ಇಡೀ ಪ್ರಕರಣಕ್ಕೆ ಅತ್ಯಂತ ರೋಚಕ ಹಾಗೂ ದಿಗ್ಭ್ರಮೆ ಮೂಡಿಸುವ ತಿರುವು ನೀಡಿದೆ. ಹಾಗಾದರೆ, ಇಷ್ಟೂ ಜನರನ್ನು ಕೊಂದಿದ್ದು ಹೇಗೆ? ಅವರು ಯಾರ್‍ಯಾರು? ಕಸದಂತೆ ಶವಗಳನ್ನು ಎಸೆದಿದ್ದು ಎಲ್ಲಿ? ಈ ರ*ಸಿಕ್ತ ಕರಾಳ ಕಥೆಯ ಸಂಪೂರ್ಣ ವಿವರ ಇಲ್ಲಿದೆ.

ಅಲ್ಲಿದ್ದವರು ಯಾರ್‍ಯಾರು?

ಈ ಸಂಪೂರ್ಣ ಸ್ಟೋರಿ ಕೇಂದ್ರಬಿಂದು ವಾರ ಪತ್ರಿಕೆ ಸಂಪಾದಕ ಕಂ ಕ್ಯಾಬ್ ಚಾಲಕ ಇಂದುಶೇಖರ. ಇವನು ತನ್ನ ಪತ್ನಿ ಸುನೀತಾಳನ್ನು ಮಾತ್ರವಲ್ಲದೆ, ತನ್ನ ಅತ್ತೆ ರೂಪಾವತಿ, ಸೋದರ ಮಾವ ಶಿವಕುಮಾರ್ ಮತ್ತು ಶಂಕರ್, ರೂಪಾವತಿಯ ಇಬ್ಬರು ಸೊಸೆಯಂದಿರಾದ ದಿವ್ಯಾ ಮತ್ತು ನಳಿನಿ ಮತ್ತು ಸೋದರ ಮಾವನ ಏಳು ವರ್ಷದ ಮಗ ಪುನೀತ್ ನನ್ನು ಸಹ ಮುಗಿಸಿದ್ದಾನೆ. ಇಲ್ಲೇ ನೋಡಬಹುದು, ವಿಕೃತಿ ಎಷ್ಟರ ಮಟ್ಟಿಗೆ ಎಸೆಗಿದೆ ಎನ್ನುವುದನ್ನು ಸಾರಿ, ಸಾರಿ ಹೇಳುತ್ತದೆ.

ಅದು ಪ್ರವಾಸವಲ್ಲ, ಕರಾಳ ಪಯಣ!

ಅದೊಂದು ಕೇವಲ ಪ್ರವಾಸವಾಗಿರಲಿಲ್ಲ, ಅದೊಂದು ರಕ್ತಸಿಕ್ತ ರಹಸ್ಯವನ್ನು ಹೊತ್ತು ಸಾಗಿದ ಕರಾಳ ಪಯಣವಾಗಿತ್ತು. ತನಿಖೆಯ ತೀವ್ರತೆ ಹೆಚ್ಚುತ್ತಿದ್ದಂತೆ ಪೊಲೀಸರ ಮುಂದೆ ಬಂದ ನಿಗೂಢ ಸಾಕ್ಷಿ ಶಂಕರ್ ಪುತ್ರ‌ ಯತಿನ್ ಬಿಚ್ಚಿಟ್ಟ ಆ ಒಂದು ಹೇಳಿಕೆ, ಇಡೀ ಪ್ರಕರಣದ ದಿಕ್ಕನ್ನೇ ಬದಲಿಸಿಬಿಟ್ಟಿತು. ಆತ ಹೇಳಿದ ಆ ಮಾತುಗಳು ಯಾವುದೇ ಕ್ರೈಮ್ ಥ್ರಿಲ್ಲರ್ ಸಿನಿಮಾದ ಕಥೆಗಿಂತ ಕಮ್ಮಿಯಿರಲಿಲ್ಲ. ಎಲ್ಲವೂ ಎಂದಿನಂತೆಯೇ ಇತ್ತು. ಮಾಮ ಇಂದುಶೇಖರ್ ಮತ್ತು ಆತನ ಅಪ್ರಾಪ್ತ ಮಗಳು (ನನ್ನ ಅಕ್ಕ) ನನ್ನನ್ನು ಟ್ರಿಪ್‌ಗೆ ಕರೆದುಕೊಂಡು ಹೋಗಿದ್ದರು. ಹಾಸನ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಹೀಗೆ ಹಲವು ಪುಣ್ಯಕ್ಷೇತ್ರಗಳಿಗೆಲ್ಲಾ ನಾವು ಜೊತೆಯಾಗಿಯೇ ಸುತ್ತಾಡಿದ್ದೆವು. ಆದರೆ ಆ ಇಡೀ ಪ್ರವಾಸದಲ್ಲಿ ನನ್ನ ಮನಸ್ಸನ್ನು ಒಂದೇ ಪ್ರಶ್ನೆ ಪದೇ ಪದೇ ಕೊರೆಯುತ್ತಿತ್ತು. ಅಪ್ಪ ಅಮ್ಮ ನನ್ನನ್ನು ಬಿಟ್ಟು ಎಲ್ಲಿ ಹೋದರು? A

ಆಲ್‌ ಇಂಡಿಯಾ ಟ್ರಿಪ್‌ ಒಂದೇ ಉತ್ತರ!

ನಾನು ಮಾಮನ ಬಳಿ ಕೇಳಿದಾಗಲೆಲ್ಲಾ, ಅವರೆಲ್ಲಾ ಆಲ್ ಇಂಡಿಯಾ ಟ್ರಿಪ್ ಹೋಗಿದ್ದಾರೆ ಎಂದು ತುಂಬಾ ಕ್ಯಾಶುಯಲ್ ಆಗಿ ಸುಳ್ಳು ಹೇಳಿ ನನ್ನನ್ನು ನಂಬಿಸಿದ್ದರು. ಆದರೆ ಆ ಇಡೀ ಪ್ರಯಾಣದಲ್ಲಿ ಮಾಮನ ನಡವಳಿಕೆ ತುಂಬಾ ವಿಚಿತ್ರವಾಗಿತ್ತು. ಗಾಡಿ ನಿಲ್ಲಿಸಿ ಅಲ್ಲಲ್ಲಿ ಕಸದ ಚೀಲಗಳನ್ನು ಎಸೆಯುತ್ತಿದ್ದರು. ಕುತೂಹಲ ತಡೆಯಲಾಗದೆ ನಾನೇನಾದರೂ ಆ ಚೀಲಗಳನ್ನು ಇಣುಕಿ ನೋಡಲು ಹೋದರೆ, ಮಾಮ ನನ್ನನ್ನು ಗದರಿಸಿ ಬಯ್ಯುತ್ತಿದ್ದರು ಎಂದಿದ್ದಾನೆ.

ಪೊಲೀಸರ ಬೆನ್ನುಹುರಿ ನಡುಗಿಸಿದ ಯತಿನ್‌ ಹೇಳಿಕೆ!

ಯತಿನ್ ನೀಡಿದ ಈ ಒಂದೇ ಒಂದು ಹೇಳಿಕೆ ಪೊಲೀಸರ ಬೆನ್ನುಹುರಿಯಲ್ಲಿ ನಡುಕ ಹುಟ್ಟಿಸಿತ್ತು. ಯಾಕೆಂದರೆ, ಯತಿನ್ ಕಸ ಎಂದು ಭಾವಿಸಿ ನೋಡಲು ಹೋದ ಆ ಚೀಲಗಳಲ್ಲಿ ಇದ್ದದ್ದು ಸಾಮಾನ್ಯ ಕಸವಾಗಿರಲಿಲ್ಲ; ಬದಲಿಗೆ ತನ್ನದೇ ಹೆತ್ತವರ, ಒಡಹುಟ್ಟಿದವರ ರಕ್ತಸಿಕ್ತ ಶವದ ತುಂಡುಗಳು! ಇಡೀ ಕುಟುಂಬವನ್ನೇ ಮುಗಿಸಿ, ಮೃತದೇಹಗಳನ್ನು ಕಸದಂತೆ ಘಾಟ್‌ಗಳಲ್ಲಿ ಎಸೆಯುತ್ತಾ, ಏನೂ ತಿಳಿಯದ ಮಗುವನ್ನೂ ಅದೇ ಕಾರಿನಲ್ಲಿ ಕೂರಿಸಿಕೊಂಡು ಹಂತಕರು ತೀರ್ಥಯಾತ್ರೆ ಮಾಡಿದ್ದರು ಎಂಬ ಕಟು ಸತ್ಯ ಈಗ ಜಗತ್ತಿನ ಮುಂದೆ ಅನಾವರಣಗೊಂಡಿದೆ.

PREV
Read more Articles on
click me!

Recommended Stories

Karnataka Weather: ರಾಜ್ಯದ ಈ 11 ಜಿಲ್ಲೆಗಳಲ್ಲಿ ಮಳೆ ಅಲರ್ಟ್; ಬೆಂಗಳೂರಲ್ಲೂ ಗುಡುಗು ಸಹಿತ ಮಳೆ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ
ಗೃಹಲಕ್ಷ್ಮಿಯರಿಗೆ ₹500 ಕೊಟ್ಟು ಮೊಮ್ಮಗಳಿಗೆ ತೊಟ್ಟಿಲು ಖರೀದಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್!