ದುಬೈನಿಂದ ಬಂದ ಕಪ್ಪು ಬಿಳಿ ಮಾಡೋ ಕೃಷ್ಣೇಗೌಡ, ವಂಚಿಸಿದ್ದು ಕೋಟಿಗಳ ಲೆಕ್ಕದಲ್ಲಿ!

By Web DeskFirst Published Oct 27, 2019, 6:59 PM IST
Highlights

ಕಪ್ಪು ಹಣ ಸಕ್ರಮ ಮಾಡುತ್ತೇನೆ ಎಂದು ವಂಚಿಸುತ್ತಿದ್ದ ಆರೋಪಿ ಬೆಂಗಳೂರಿನಲ್ಲಿ ಬಲೆಗೆ/ ಐಎಎಸ್ , ಐಪಿಸ್ ಅಧಿಕಾರಿಗಳು, ಉದ್ಯಮಿಗಳೂ, ಬಿಲ್ಡರ್ಸ್ ಗಳಿಗೆ ಕೋಟ್ಯಂತರ ರೂ. ವಂಚಿಸಿದ್ದ ಕೃಷ್ಣೇಗೌಡ/ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಕಚೇರಿಯನ್ನೇ ತೆರೆದಿದ್ದ ಭೂಪ/ ದುಬೈನಲ್ಲಿ ಕೆಲಸ ಮಾಡಿ ಬಂದಿದ್ದ ವ್ಯಕ್ತಿ

ಬೆಂಗಳೂರು[ಅ. 27]   ಕಪ್ಪು ಹಣ ಸಕ್ರಮ ಮಾಡುವುದಾಗಿ ನಂಬಿಸಿ ಐಎಎಸ್ , ಐಪಿಸ್ ಅಧಿಕಾರಿಗಳು, ಉದ್ಯಮಿಗಳೂ, ಬಿಲ್ಡರ್ಸ್ ಗಳಿಗೆ ವಂಚಿಸಿ ಕೋಟ್ಯಂತರ ರೂ. ಪಡೆದಿದ್ದ ವಂಚಕನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬ್ಲ್ಯಾಕ್ ಡೆಲಿಗೇಟ್ಸ್ ಹೆಸರಿನಲ್ಲಿ ಕಂಪನಿ ಆರಂಭಿಸಿದ್ದ ವಂಚಕ ಕೃಷ್ಣೇಗೌಡ ಎಂಬಾತನನ್ನು ಬಂಧಿಸಲಾಗಿದೆ. ಎಂಜಿ ರಸ್ತೆಯಲ್ಲಿ ಕಚೇರಿ ತೆರೆದುಕೊಂಡಿದ್ದ ಆಸಾಮಿ ಗಣ್ಯರಿಂದ ಹಣ ಪಡೆದಿದ್ದ.

ಯಶವಂತಪುರದ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಆರೋಪಿಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮಿಂಚಿನ ಕಾರ್ಯಾಚರಣೆ: ಅಕ್ರಮವಾಗಿ ನೆಲೆಸಿದ್ದ 30 ಬಾಂಗ್ಲಾ ಪ್ರಜೆಗಳ ಬಂಧನ

ಸಿದ್ಧಗಂಗಾ ಟ್ರಾವೆಲ್ಸ್ ಮಾಲೀಕ ಶಿವಕುಮಾರ್ ಗೂ ವಂಚನೆ ಮಾಡಿದ್ದ ಕೃಷ್ಣೇಗೌಡ ಬಲೆಗೆ ಬಿದ್ದಿದ್ದ.  ಶಂಬಣ್ಣ ಎಂಬವರಿಂದ 25 ಕೋಟಿ ಲಪಟಾಯಿಸಿದ್ದ ಎಂಬ ವಿಚಾರವೂ ಗೊತ್ತಾಗಿದೆ.

2008ರಲ್ಲಿ ಆರೋಪಿ ವಿರುದ್ಧ ಎರಡು ದೂರು ದಾಖಲಾಗಿದ್ದವು. ಇದೀಗ 10ಕ್ಕೂ ಅಧಿಕ ಮಂದಿ ದೂರು ನೀಡಿದ್ದಾರೆ. ಪ್ರಕರಣದ ವಿವರವಾದ ತನಿಖೆ ನಡೆಯಲಿದ್ದು ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸಲಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

 

click me!