ಟಿಕೆಟ್ ಕೌಂಟರ್ ಮುಂದೆ ಸೆಲ್ಫಿ ತೆಗದುಕೊಂಡು ಉಚಿತವಾಗಿ ರೈಲಿನಲ್ಲಿ ಪ್ರಯಾಣಿಸಿ! ಇಲ್ಲಾಂದ್ರೆ ದಂಡ ಫಿಕ್ಸ್!

Published : May 19, 2025, 12:23 PM IST
ಟಿಕೆಟ್ ಕೌಂಟರ್ ಮುಂದೆ ಸೆಲ್ಫಿ ತೆಗದುಕೊಂಡು ಉಚಿತವಾಗಿ ರೈಲಿನಲ್ಲಿ ಪ್ರಯಾಣಿಸಿ! ಇಲ್ಲಾಂದ್ರೆ ದಂಡ ಫಿಕ್ಸ್!

ಸಾರಾಂಶ

Railway Station: ಬೆಂಗಳೂರಿನ ಕೂಗಳತೆ ದೂರದಲ್ಲಿರುವ ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರು, ಟೆಕೆಟ್ ಕೌಂಟರ್ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಸೆಲ್ಫಿ ಯಾಕೆ ತೆಗೆದುಕೊಳ್ಳಲಾಗುತ್ತೆ ಎಂಬುದನ್ನು ಇಲ್ಲಿಯ ಪ್ರಯಾಣಿಕರು ಹೇಳುತ್ತಾರೆ.

ಬೆಂಗಳೂರು: ಭಾರತೀಯ ರೈಲ್ವೆ ವರ್ಷದಿಂದ ವರ್ಷಕ್ಕೆ ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕಾಗಿ ಮುಂಬೈನಂತೆ ಇಲ್ಲಿಯೂ ಲೋಕನ್ ಟ್ರೈನ್ ಬರಬೇಕು ಅಥವಾ ಮೆಟ್ರೋ ಸೇವೆಯ ಜಾಲ ವಿಸ್ತರಣೆಯಾಗಬೇಕು ಅನ್ನೋದು ಹಲವರ ಅಭಿಪ್ರಾಯವಾಗಿದೆ. ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ಅತ್ಯಧಿಕ ಟ್ರಾಫಿಕ್‌ನಿಂದಲೇ ಕುಖ್ಯಾತಿಗೆ ಒಳಗಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಬ್ಬಾಳ ಮಾರ್ಗವಾಗಿಯೇ ತೆರಳಬೇಕು. ಈ ಭಾಗದಲ್ಲಿ ಯಾವುದೇ ಸಮಯದಲ್ಲಿಯೂ ಟ್ರಾಫಿಕ್ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ವಿಮಾನಯಾನ ಪ್ರಯಾಣಿಕರು ಕನಿಷ್ಠ 2 ರಿಂದ 3 ಗಂಟೆ ಮೊದಲೇ ತಮ್ಮ ಪ್ರಯಾಣ ಆರಂಭಿಸುತ್ತಾರೆ. 

ವಿಮಾನಯಾನದ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡೇ ಮೆಜೆಸ್ಟಿಕ್‌ನಿಂದ ರೈಲು ಸಂಪರ್ಕ ಕಲ್ಪಿಸಲಾಗಿದೆ. ಮೆಜೆಸ್ಟಿಕ್‌ನಿಂದ ನೇರವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA railway station) ನೇರ ರೈಲುಗಳಿವೆ. ಈ  ರೈಲು ನಿಲ್ದಾಣ ಏರ್‌ಪೋರ್ಟ್‌ನಿಂದ 3.5 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಪ್ರಯಾಣಿಕರು ಶೆಟಲ್ ಬಸ್ ಮೂಲಕ ಏರ್‌ಪೋರ್ಟ್‌ಗೆ ತೆರಳಬಹುದು. ಆದ್ರೆ ಮಾಹಿತಿ ಕೊರತೆಯಿಂದ ಈ ಮಾರ್ಗ ಹೆಚ್ಚು ಜನಪ್ರಿಯತೆ ಪಡೆದುಕೊಂಡಿಲ್ಲ. 

KIA ನಿಲ್ದಾಣಕ್ಕೆ ಮೂರು ರೈಲುಗಳು
KIA ರೈಲು ನಿಲ್ದಾಣವನ್ನು BIAL (Bengaluru Airport Transport Limited) ನಿರ್ವಹಣೆ ಜವಾಬ್ದಾರಿಯನ್ನು ತೆಗೆದುಕೊಂಡಿದೆ. BIAL ನಿರ್ವಹಣೆಯಿಂದಾಗಿ ರೈಲು ನಿಲ್ದಾಣ ಸ್ವಚ್ಛವಾಗಿದೆ. KIA ನಿಲ್ದಾಣಕ್ಕೆ ರೈಲುಗಳ ಆಗಮಿಸುವ ಮಾಹಿತಿ ಇಲ್ಲದ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಆಗ್ನೇಯ ರೈಲ್ವೆ ಮೂರು ಮೆಮು ರೈಲುಗಳನ್ನು ನೀಡಿದೆ. ಆದ್ರೆ ಬಹುತೇಕ ಬಾರಿ ಈ ರೈಲುಗಳು ಕ್ಯಾನ್ಸಲ್ ಆಗಿರುತ್ತವೆ. ವಿವಿಧ ಕಾರಣಗಳನ್ನು ನೀಡಿ KIA ನಿಲ್ದಾಣ ರೈಲುಗಳು ರದ್ದುಗೊಳ್ಳುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. 

2021ರಲ್ಲಿ KIA ನಿಲ್ದಾಣದ ಉದ್ಘಾಟನೆ ಮಾಡಲಾಗಿತ್ತು. ಆದ್ರೆ ಜನವರಿ 2025ರಿಂದ ಇಲ್ಲಿಯ ಪರಿಸ್ಥಿತಿ ಹದೆಗಟ್ಟಿದೆ ಎಂದು KIA ನಿಲ್ದಾಣದ ಕಾರ್ಮಿಕರು ಹೇಳುತ್ತಾರೆ. ಕೆಲ ಪ್ರಯಾಣಿಕರು ರೈಲಿನ ಮೂಲಕ ಮೆಜೆಸ್ಟಿಕ್‌ಗೆ ಬರಲು ಪ್ರಯತ್ನಿಸುತ್ತಾರೆ. 10 ರಿಂದ 30 ರೂಪಾಯಿಯಲ್ಲಿ ಏರ್‌ಪೋರ್ಟ್‌ನಿಂದ ಬೆಂಗಳೂರು ನಗರಕ್ಕೆ ಬರಬಹುದು. ಆದರೆ ಶೆಟಲ್ ಬಸ್ ಅಸರ್ಮಕತೆಯಿಂದಾಗಿ ನಿಲ್ದಾಣ ತಲುಪಲು ಆಗಲ್ಲ ಎಂಬುವುದು ಹಲವು ಪ್ರಯಾಣಿಕರ ಮಾತಾಗಿದೆ. ಬಿಎಂಟಿಸಿ ಸಿಬ್ಬಂದಿಗೂ ಇಲ್ಲಿಯ ರೈಲುಗಳ ಮಾಹಿತಿ ಇರಲ್ಲ. 

ಏರ್‌ಪೋರ್ಟ್‌ನಿಂದ ನಿಲ್ದಾಣಕ್ಕೆ ಬಂದ್ರೆ ಇಲ್ಲಿಂದ ಬೆಂಗಳೂರಿಗೆ ಕೇವಲ 20 ನಿಮಿಷ ಆಗುತ್ತದೆ. ಏರ್‌ಪೋರ್ಟ್‌ನಿಂದ ಶಟಲ್ ಬಸ್‌ಗಳು ಕಾರ್ಯನಿರ್ವಹಿಸುತ್ತವೆ. ಆದ್ರೆ ರೈಲುಗಳು ರದ್ದಾಗಿರುತ್ತವೆ. ಈ ಕುರಿತು ಮಾತನಾಡಿರುವ ಪ್ರಯಾಣಿಕರೊಬ್ಬರು, ಕೆಐಎಲ್‌ನಿಂದ ಬೆಂಗಳೂರಿಗೆ ಒಂದೇ ರೈಲು ಇತ್ತು. ಅದು ರದ್ದುಗೊಂಡಿದ್ದರಿಂದ BIAL ಸಿಬ್ಬಂದಿಯೇ BMTC ಬಸ್ ಬಳಸಲು ಸಲಹೆ ನೀಡುತ್ತಾರೆ ಎಂದು ಹೇಳುತ್ತಾರೆ. 

ಟಿಕೆಟ್ ಕೌಂಟರ್‌ನಲ್ಲಿ ಸಿಬ್ಬಂದಿಯೇ ಇಲ್ಲ!
ಇನ್ನು  KIA ರೈಲು ನಿಲ್ದಾಣದ ಕೌಂಟರ್‌ನಲ್ಲಿ ಸಿಬ್ಬಂದಿಯೇ ಇರಲ್ಲ. KIA ಸಿಬ್ಬಂದಿ ಮಹೇಂದ್ರ ಎಂಬವರು, ಟಿಕೆಟ್ ತೆಗೆದುಕೊಳ್ಳಲು ಇಲ್ಲಿ ಸಿಬ್ಬಂದಿಯೇ ಇರಲ್ಲ. ಹಾಗಾಗಿ ನಾವು ಟಿಕೆಟ್ ಕೌಂಟರ್ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳತ್ತವೆ. ಪ್ರಯಾಣದ ವೇಳೆ ಟಿಟಿಇ, ನಮ್ಮನ್ನು ಟಿಕೆಟ್ ಕೇಳಿದ್ರೆ ಕೌಂಟರ್ ಮುಂದಿನ ಸೆಲ್ಫಿಯನ್ನು ತೋರಿಸುತ್ತೇವೆ ಎಂದು ಹೇಳುತ್ತಾರೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಈ ನಿಲ್ದಾಣಕ್ಕೆ ಪ್ರತಿನಿತ್ಯ ಗರಿಷ್ಠ 30 ಪ್ರಯಾಣಿಕರು ಪ್ರಯಾಣಿಸುತ್ತಾರೆ. ಸದ್ಯ ಈ ಸಂಖ್ಯೆ 20ಕ್ಕೆ ಇಳಿಕೆಯಾಗಿದೆ ಎಂದು ಹೇಳುತ್ತಾರೆ. 

PREV
Read more Articles on
click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ