ಬೆಂಗಳೂರು:  ವೈದ್ಯರ ಚೀಟಿಯಿಲ್ಲದೇ ಔಷಧ ಕೊಡ್ತಿರಾ? ಈ ಸುದ್ದಿ ಓದಿ

By Suvarna NewsFirst Published Dec 2, 2019, 7:19 PM IST
Highlights

ಅಮಲು ಬರುವ ಔಷಧಿಗಳ ವಿಚಾರದಲ್ಲಿ ಎಚ್ಚೆತ್ತುಕೊಂಡ ಪೊಲೀಸರು/ ಮೆಡಿಕಲ್ ಶಾಪ್ ಗಳಿಗೆ ದೀಢೀರ್ ಭೇಟಿ ಪರಿಶೀಲನೆ/ ಬೆಂಗಳೂರು ಕೇಂದ್ರ ಪೊಲೀಸರ ಕಾರ್ಯಾಚರಣೆ

ಬೆಂಗಳೂರು(ಡಿ. 02)  ಮೆಡಿಕಲ್ ಶಾಪ್ ಗಳಲ್ಲಿ ದೊರೆಯುವ  ಮತ್ತು ಬರುವ ಔಷಧಿ ಸ್ವೀಕರಿಸಿ‌ ಬೆಂಗಳುರಿನಲ್ಲಿ ಇಬ್ಬರು ಮೃತಪಟ್ಟಿದ್ದ ಘಟನೆ ವರದಿಯಾಗಿತ್ತು. ಇದಾದ ಮೇಲೆ ಪೊಲೀಸರು ಜಾಗೃತರಾಗಿದ್ದು ಔಷಧ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ.

ಕೇಂದ್ರ ವಿಭಾಗದ ಪೊಲೀಸರು ತಮ್ಮ ವ್ಯಾಪ್ತಿಗೆ ಬರುವ ಮೆಡಿಕಲ್ ಶಾಪ್ ಗಳಿಗೆ ದಿಢೀರ್  ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಪೊಲೀಸರು ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳೊಂದಿಗೆ ಹಲವು ಔಷಧಾಲಯಗಳಿಗೆ ಭೇಟಿ ನೀಡಲಾಗಿದೆ.  ಕೇಂದ್ರ ವಿಭಾಗದ ವೈಯಾಲಿಕಾವಲ್, ಶೇಷಾದ್ರಿಪುರಂ, ಆಸ್ಟಿನ್ ಟೌನ್, ವಿವೇಕನಗರ, ನೀಲಸಂದ್ರ, ಈಜಿಪುರ, ಆನೆಪಾಳ್ಯ ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ಬರುವ ಮೆಡಿಕಲ್‌ಶಾಪ್ ಗಳಿಗೆ ದಿಢೀರ್ ಭೇಟಿ ಪರಿಶೀಲನೆ ನಡೆಸಲಾಯಿತು.

ಗಾಂಧಿ ಸ್ಥಾಪಿಸಿದ್ದ ವಿಶ್ವವಿದ್ಯಾಲಯದಲ್ಲಿ ಮದ್ಯದ ಸಮಾರಾಧನೆ

ಕಾರ್ಯಾಚರಣೆಯಲ್ಲಿ ಒಟ್ಟು 24 ಮೆಡಿಕಲ್‌ ಶಾಪ್‌ಗಳಿಗೆ ದಿಢೀರ್ ಭೇಟಿ ನೀಡಲಾಗಿದೆ.  ಕಾರ್ಯಾಚರಣೆಯಲ್ಲಿ ವೈದರ ಚೀಟಿಯಲ್ಲದೇ ಔಷಧಿಗಳನ್ನ ನೀಡುತ್ತಿದ್ದ ಎರಡು ಮೆಡಿಕಲ್ ವಿರುದ್ದ ಕೇಸು ದಾಖಲಿಸಿಕೊಳ್ಳಲಾಗಿದೆ.

ವನ್ನಾರಪೇಟೆಯ ಎಸ್‌ಟಿ‌ ಮೆಡಿಕಲ್‌ ಹಾಗೂ ಈಜಿಪುರದ‌ ಸೌಭಾಗ್ಯ ಮೆಡಿಕಲ್‌ ಮಾಲೀಕರ ವಿರುದ್ಧ  ಡ್ರಗ್ಸ್ ಮತ್ತು ಕಾಸ್ಮೆಟಿಕ್ ಆಕ್ಟ್ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

click me!