ಮಹಿಳೆ ಕಳೆದುಕೊಂಡ ಏರ್‌ಪಾಡ್ ಹುಡುಕಿಕೊಟ್ಟ ಬೆಂಗಳೂರು ಆಟೋ ಚಾಲಕ, 1.5 ಗಂಟೆ ಸುತ್ತಾಟ

Published : Sep 12, 2025, 11:25 AM IST
Bengaluru Auto driver helps woman to find her air pods

ಸಾರಾಂಶ

ಮಹಿಳೆ ಕಳೆದುಕೊಂಡ ಏರ್‌ಪಾಡ್ ಹುಡುಕಿಕೊಟ್ಟ ಬೆಂಗಳೂರು ಆಟೋ ಚಾಲಕ. ತನ್ನ ರೈಡ್ ಕ್ಯಾನ್ಸಲ್ ಮಾಡಿ ಒಂದೂವರೆ ಗಂಟೆ ಸುತ್ತಾಡಿದ್ದಾನೆ. ಇಷ್ಟೇ ಅಲ್ಲ ಕೊನಗೂ ಮಹಿಳೆಯ ಏರ್‌ಪಾಡ್ ಪತ್ತೆ ಹಚ್ಚಿದ ರೋಚಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು (ಸೆ.12) ಬೆಂಗಳೂರಿನ ಆಟೋ ಚಾಲಕ ಮಹಿಳೆ ಹಾಗೂ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಮಹಿಳೆ ಆಟೋದಲ್ಲಿ ಪ್ರಯಾಣಿಸುವಾಗ ತನ್ನ ಏರ್‌ಪಾಡ್ ಕಳೆದುಕೊಂಡಿದ್ದಾಳೆ. ಈ ಏರ್‌ಪಾಡ್ ಹುಡುಕಲು ಮತ್ತೊಬ್ಬ ಆಟೋ ಚಾಲಕ ನೆರವು ನೀಡಿದ್ದಾನೆ. ತನ್ನ ಇತರ ರೈಡ್ ಕ್ಯಾನ್ಸಲ್ ಮಾಡಿ ಒಂದೂವರೆ ಗಂಟೆ ಕಾಲ ಮಹಿಳೆ ಕಳೆದುಕೊಂಡ ಏರ್‌ಪಾಡ್ ಹುಡುಕಾಟ ನಡೆಸಲಾಗಿದೆ. ಕೊನೆಗೂ ಮಹಿಳೆಗೆ ಏರ್‌ಪಾಡ್ ಸಿಕ್ಕಿದೆ. ಆಟೋ ಡ್ರೈವರ್ ಜೊತೆ ಚಹಾ ಸೇವಿಸಿ ನಡೆದ ಘಟನೆಯನ್ನು ಮಹಿಳೆ ಸೋಶಿಯಲ್ ಮೀಡಿಯಾ ಮೂಲಕ ವಿವರಿಸಿದ್ದಾರೆ.

ಆಟೋ ಪ್ರಯಾಣದಲ್ಲಿ ಏರ್‌ಪಾಡ್ ಮಿಸ್ಸಿಂಗ್

ಪಾಲಕ್ ಮಲ್ಹೋತ್ರ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇತ್ತೀಚಗೆ ಬೆಂಗಳೂರಿಗೆ ಆಗಮಿಸಿದ್ದ ಪಾಲಕ್ ಮಲ್ಹೋತ್ರಗೆ ಕನ್ನಡ ಬರುವುದಿಲ್ಲ. ಕನ್ನಡ ಗೊತ್ತಿಲ್ಲ, ಹೇಗಿದ್ದೀರಾ ಅನ್ನೋ ಕೆಲ ಪದಗಳು ಬಿಟ್ಟರೆ ಇನ್ನೇನು ಗೊತ್ತಿಲ್ಲ. ತುರ್ತಾಗಿ ಆಟೋ ಹತ್ತಿ ಹೊರಟಿದ್ದಾರೆ. ಆದರೆ ಆಟೋ ಪ್ರಯಾಣದಲ್ಲಿ ಪಾಲಕ್ ಮಲ್ಹೋತ್ರ ಏರ್‌ಪಾಡ್ ಆಟೋದಲ್ಲೇ ಬಿಟ್ಟು ಇಳಿದಿದ್ದಾರೆ. ಆಟೋದಿಂದ ಇಳಿದು ಹೋಗುತ್ತಿರುವಾಗ ತನ್ನ ಏರ್‌ಪಾಡ್ ಮಿಸ್ಸಿಂಗ್ ಅನ್ನೋದು ಗೊತ್ತಾಗಿದೆ.

ಟೆಕ್ನಲೊಜಿಯಾ, ಟೆಕ್ನಲೊಜಿಯಾ..ಬ್ಯಾಗ್‌ನಲ್ಲೇ ಡಿಜಿಟಲ್ ಬೋರ್ಡ್ ಇದು ಬೆಂಗೂರಲ್ಲಿ ಮಾತ್ರ

ಫೈಡ್ ಮೈ ಫೀಚರ್ ಬಳಸಿದ ಮಹಿಳೆ

ಆ್ಯಪಲ್ ಉತ್ಪನ್ನವಾಗಿರುವ ಕಾರಣ ಈ ಮಹಿಳೆ ಫೈಂಡ್ ಮೈ ಫೀಚರ್ ಬಳಸಿ ಏರ್‌ಪಾಡ್ ಸದ್ಯ ಯಾವ ಲೋಕೇಶನ್‌ನಲ್ಲಿದೆ ಎಂದು ಹುಡುಕಿದ್ದಾರೆ. ಲೋಕೇಶ್ ಪತ್ತೆ ಹಚ್ಚಿದ ಬಳಿಕ ಮಹಿಳೆ ಮತ್ತೊಂದು ಆಟೋ ಬುಕ್ ಮಾಡಿ ಚೇಸ್ ಮಾಡಲು ಹೊರಟಿದ್ದಾರೆ.

ಆಟೋ ಚಾಲಕ ದರ್ಶನ್ ನೆರವು

ಕಳೆದು ಹಹೋದ ಏರ್‌ಪಾಡ್ ಹುಡುಕಲು ಪಾಲಕ್ ಮಲ್ಹೋತ್ರ ಮತ್ತೊಂದು ಆಟೋ ಬುಕ್ ಮಾಡಿದ್ದಾಳೆ. ಆಟೋ ಚಾಲಕ ದರ್ಶನ್ ಬಳಿ ತಾನು ಕಳೆದುಹೋದ ಏರ್‌ಪಾಡ್ ಹುಡುಕಬೇಕು, ಬೇಗ ಲೋಕೇಶನ್ ಬಳಿ ತೆರಳುವಂತೆ ತನಗೆ ಗೊತ್ತಿರುವ ಕನ್ನಡ ಹಾಗೂ ಹಿಂದಿ ಮಿಶ್ರ ಮಾಡಿ ಹೇಳಿದ್ದಾಳೆ. ದರ್ಶನ್‌ಗೆ ಇಂಗ್ಲೀಷ್ ಅಥವಾ ಹಿಂದಿ ಬರುವುದಿಲ್ಲ. ಪಾಲಕ್ ಮಲ್ಹೋತ್ರಗೆ ಕನ್ನಡ ಬರುವುದಿಲ್ಲ. ಹೀಗಾಗಿ ಅರ್ಥ ಮಾಡಿಸುವುದೇ ಕಷ್ಟವಾಗಿತ್ತು. ಆದರೆ ಆಟೋ ಚಾಲಕ ದರ್ಶನ್ ಪಾಲಕ್ ಮಲ್ಹೋತ್ರ ಪರಿಸ್ಥಿತಿ ಅರ್ಥ ಮಾಡಿಕೊಂಡಿದ್ದಾನೆ. ತಕ್ಷಣ ಪಾಲಕ್ ಪ್ರಯಾಣಿಸಿದ ಮೊದಲ ಆಟೋ ಲೋಕೋಶನ್ ಬಳಿ ಕರೆದುಕೊಂಡು ಹೋಗಿದ್ದಾನೆ.

 

 

ಮೂರು ಲೋಕೇಶನ್ ಸರ್ಚ್, ಒಂದೂವರೆ ಗಂಟೆ ಹುಡುಕಾಟ

ಮೊದಲು ಪ್ರಯಾಣಿಸದ ಆಟೋದಲ್ಲಿ ಏರ್‌ಪಾಡ್ ಬಿಟ್ಟಿರುವ ಕಾರಣ ಆಟೋ ಚಾಲಕನ ಬಳಿ ಇರುತ್ತೆ ಎಂದು ಪಾಲಕ್ ಲೋಕೇಶನ್ ಹುಡುಕಾಡಿದ್ದರು. ಆದರೆ ಅದೇ ಆಟೋದಲ್ಲಿ ನಂತರ ಪ್ರಯಾಣಿಸದ ಪ್ರಯಾಣಿಕ ಈ ಏರ್‌ಪಾಡ್ ತೆಗೆದುಕೊಂಡು ಹೋಗಿದ್ದ. ಆಟೋ ಚಾಲಕ ಕೊನೆಗೂ ಮೊದಲ ಆಟೋ ಡ್ರೈವರ್ ಪತ್ತೆ ಹಚ್ಚಿದ್ದ. ಬಳಿಕ ಆತನಬಳಿ ಮಹಿಳೆ ಬಳಿಕ ಪ್ರಯಾಣಿಸದ ಪ್ರಯಾಣಿಕನ ಫೋನ್ ನಂಬರ್ ‌ನ್ನು ಆ್ಯಪ್ ಮೂಲಕ ಪಡೆದು ಕರೆ ಮಾಡಿದ್ದಾನೆ. ಇವೆಲ್ಲಾ ಒಂದೂವರೆ ಗಂಟೆ ಕಾಲ ನಡೆದಿದೆ.

ಆಟೋ ಚಾಲಕನ ಬಳಿ ಕನ್ನಡದಲ್ಲಿ ದರ ಚೌಕಾಸಿಗೆ ಚಾಟ್‌ಜಿಪಿ ಬಳಸಿದ ವಿದ್ಯಾರ್ಥಿ, ವೈರಲ್ ವಿಡಿಯೋ

ಇದರ ನಡುವೆ ಆಟೋ ಚಾಲಕ ದರ್ಶನ್ ತನ್ನ ರೈಡ್ ಕ್ಯಾನ್ಸಲ್ ಮಾಡಿದ್ದಾನೆ. ಕೊನೆಗೂ ಮಹಿಳೆಯ ಏರ್‌ಪಾಡ್ ಕೈಸೇರಿದೆ. ತನ್ನ ಜೊತೆಗೆ ಒಂದೂವರೆ ಗಂಟೆ ಕಾಲ ಸುತ್ತಾಡಿ, ರೈಡ್ ಕ್ಯಾನ್ಸಲ್ ಮಾಡಿ ಏರ್ ಪಾಡ್ ಪತ್ತೆ ಹಚ್ಚಲು ನೆರವಾದ ಆಟೋ ಚಾಲಕ ದರ್ಶನ್ ಜೊತೆ ಚಹಾ ಸವಿದ ಪಾಲಕ್ ಮಲ್ಹೋತ್ರ ಸಂಭ್ರಮದಿಂದ ಮರಳಿದ್ದಾರೆ. ಬಳಿಕ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಬೆಂಗಳೂರಿನ ಆಟೋ ಚಾಲಕರು ಕನ್ನಡ ಗೊತ್ತಿಲ್ಲ ಎಂದರೆ ರೂಡ್ ಆಗಿ ಮಾತನಾಡುತ್ತಾರೆ ಎಂದೆಲ್ಲಾ ಕೇಳಿದ್ದೆ. ಆದರೆ ಇಲ್ಲೊಬ್ಬ ಒಂದೂವರೆ ಗಂಟೆ ನನ್ನ ಕಳೆದುಹೋದ ಏರ್ ಪಾಡ್ ಹುಡಕಲು ನೆರವಾಗಿದ್ದಾನೆ. ಎಲ್ಲಾ ಹೀರೋಗಳು ಕ್ಯಾಪ್ ಹಾಕುವುದಿಲ್ಲ ಎಂದು ಪಾಲಕ್ ಮಲ್ಹೋತ್ರ ಹೇಳಿದ್ದಾರೆ.

 

PREV
Read more Articles on
click me!

Recommended Stories

ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!
ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!