BDA ಬಿಗ್ ಮಾಸ್ಟರ್ ಪ್ಲಾನ್‌: ಒತ್ತುವರಿ ಜಾಗದ ಮಾಹಿತಿ ನೀಡಿದವರಿಗೆ ₹4 ಲಕ್ಷದವರೆಗೆ ನಗದು ಬಹುಮಾನ!

Published : Oct 15, 2026, 09:30 AM IST
Bengaluru City Image

ಸಾರಾಂಶ

ನಕಲಿ ದಾಖಲೆಗಳೊಂದಿಗೆ ಅಕ್ರಮವಾಗಿ ಹೊಂದಿರುವ ಆಸ್ತಿಗಳ ಕುರಿತು ನಿಖರ ಮಾಹಿತಿ ನೀಡುವ ಸಾರ್ವಜನಿಕರಿಗೆ ಇದೇ ಮೊದಲ ಬಾರಿಗೆ ಬಂಪರ್ ನಗದು ಬಹುಮಾನ ಘೋಷಿಸಿದೆ. ಬಿಡಿಎ ಅಧಿಕೃತ ಆದೇಶ ಹೊರಡಿಸಿದೆ.

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ತನ್ನ ಸೈಟ್, ಆಸ್ತಿ ಒತ್ತುವರಿ ಹಾಗೂ ನಕಲಿ ದಾಖಲೆಗಳೊಂದಿಗೆ ಅಕ್ರಮವಾಗಿ ಹೊಂದಿರುವ ಆಸ್ತಿಗಳ ಕುರಿತು ನಿಖರ ಮಾಹಿತಿ ನೀಡುವ ಸಾರ್ವಜನಿಕರಿಗೆ ಇದೇ ಮೊದಲ ಬಾರಿಗೆ ಬಂಪರ್ ನಗದು ಬಹುಮಾನ ಘೋಷಿಸಿದೆ. ಬಿಡಿಎ ಅಧಿಕೃತ ಆದೇಶ ಹೊರಡಿಸಿದ್ದು, ಮಾಹಿತಿದಾರರು ಸಲ್ಲಿಸಿದ ದಾಖಲೆಗಳು ಮತ್ತು ಹಕ್ಕುಪಾದನೆಗಳನ್ನು ಪ್ರಾಧಿಕಾರವು ಕೂಲಂಕಷವಾಗಿ ಮರುಪರಿಶೀಲಿಸಿದ ನಂತರವೇ ಈ ಬಹುಮಾನವನ್ನು ಹಸ್ತಾಂತರಿಸಲಾಗುತ್ತದೆ.

ಈ ಯೋಜನೆಯಲ್ಲಿ ನಿವೇಶನದ ಗಾತ್ರಕ್ಕೆ ಅನುಗುಣವಾಗಿ ಬಹುಮಾನದ ಮೊತ್ತವನ್ನು ನಿಗದಿಪಡಿಸಲಾಗಿದ್ದು, ಗರಿಷ್ಠ 4 ಲಕ್ಷ ರೂಪಾಯಿಗಳವರೆಗೆ ನಗದು ಬಹುಮಾನ ಸಿಗಲಿದೆ.

ಬಹುಮಾನ ವಿವರ

20x30 ಅಡಿ ಅಳತೆಯ ನಿವೇಶನದ ಒತ್ತುವರಿ ಮಾಹಿತಿ ನೀಡಿದರೆ 50 ಸಾವಿರ ರೂ.

30x40 ಅಡಿ ನಿವೇಶನಕ್ಕೆ 1 ಲಕ್ಷ ರೂ.

40x60 ಅಡಿ ನಿವೇಶನಕ್ಕೆ 2 ಲಕ್ಷ ರೂ

50x80 ಅಡಿ ಅಳತೆಯ ದೊಡ್ಡ ನಿವೇಶನ ಅಥವಾ ಬಹುಮಹಡಿ ಕಟ್ಟಡಗಳ ಒತ್ತುವರಿ ಕುರಿತು ಮಾಹಿತಿ ನೀಡಿದರೆ 4 ಲಕ್ಷ ರೂ. ಬಹುಮಾನ

ಬಿಡಿಎ ಕೇಂದ್ರ ಕಚೇರಿ ಕಟ್ಟಡ ನೆಲಸಮಕ್ಕೆ ವಿರೋಧ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕೇಂದ್ರ ಕಚೇರಿಯ ಹಾಲಿ ಕಟ್ಟಡವನ್ನು ನೆಲಸಮಗೊಳಿಸದೆ ಹಾಗೆಯೇ ಉಳಿಸಿಕೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಮತ್ತು ಬಿಡಿಎ ನೌಕರರ ಸಂಘ ಒತ್ತಾಯಿಸಿವೆ.

ಮೈಸೂರು ಮಹಾರಾಜರು ಸ್ಥಾಪಿಸಿದ ಸುಮಾರು 80 ವರ್ಷಗಳ ಇತಿಹಾಸವಿರುವ ಕುಮಾರಪಾರ್ಕ್‌ ಪಶ್ಚಿಮದಲ್ಲಿರುವ ಬಿಡಿಎ ಕೇಂದ್ರ ಕಚೇರಿ ಕಟ್ಟಡ ಕೆಡವಿ, ಅಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸುವ ನಿರ್ಧಾರ ಸರಿಯಲ್ಲ. ಈ ಪ್ರಧಾನ ಕಚೇರಿಯು ಕೇವಲ ಕಚೇರಿಯಷ್ಟೇ ಅಲ್ಲದೆ, ಸಂಸ್ಥೆಯ ಚರಿತ್ರೆಯ ಸಂಕೇತವಾಗಿದೆ. ಈ ಕಟ್ಟಡವು ಇನ್ನು 40-50 ವರ್ಷಗಳ ಕಾಲ ಸುಸ್ಥಿತಿಯಲ್ಲಿರಬಲ್ಲದು. ಜೊತೆಗೆ ಆವರಣದಲ್ಲಿರುವ ಬೃಹತ್ ಮರಗಳು ಈ ತಾಣದ ಐತಿಹಾಸಿಕ ಚಹರೆಯ ಭಾಗವಾಗಿವೆ. ಇಂತಹ ಗಟ್ಟಿಮುಟ್ಟಾದ ಕಟ್ಟಡ ಕೆಡವಬಾರದು ಎಂದು ಮನವಿ ಮಾಡಿವೆ.

PREV
Read more Articles on
click me!

Recommended Stories

ಕರ್ನಾಟಕ ಒಂದರಲ್ಲೇ 30 ಲಕ್ಷ ಅಕ್ರಮ ಬಾಂಗ್ಗನ್ನರು! ವೋಟ್‌ ಬ್ಯಾಂಕ್‌ಗಾಗಿ ಕಾಂಗ್ರೆಸ್ SIR ವಿರೋಧ, ಮಾಜಿ ಡಿಸಿಎಂ ಆಕ್ರೋಶ
BDAನಲ್ಲಿ ಹೊಸ ಹುದ್ದೆ ಸೃಷ್ಟಿಗೆ ಬ್ರೇಕ್; ಪ್ರಸ್ತಾವಕ್ಕೆ ನಗರಾಭಿವೃದ್ಧಿ ಇಲಾಖೆ ತಿರಸ್ಕಾರ