ಬೆಂಗಳೂರು ಟ್ರಾಫಿಕ್‌ ಸಮಸ್ಯೆಗೆ ಸ್ಮಾರ್ಟ್‌ ಸಿಗ್ನಲ್‌ ಪರಿಹಾರ, ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಸಿಗ್ನಲ್‌ಗೆ ಟೆಂಡರ್‌

Published : Mar 16, 2023, 07:56 PM IST
ಬೆಂಗಳೂರು ಟ್ರಾಫಿಕ್‌ ಸಮಸ್ಯೆಗೆ ಸ್ಮಾರ್ಟ್‌ ಸಿಗ್ನಲ್‌ ಪರಿಹಾರ, ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಸಿಗ್ನಲ್‌ಗೆ ಟೆಂಡರ್‌

ಸಾರಾಂಶ

ಈ ಹಿಂದೆ ಮಾರ್ಚ್‌ನಲ್ಲಿ ನೀಡಲಾದ ಟೆಂಡರ್‌ನ ಪ್ರಕಾರ, 29 ಹೊಸ ಸಿಗ್ನಲ್‌ಗಳಿಗೆ ಎಟಿಸಿಎಸ್ ತಂತ್ರಜ್ಞಾನವನ್ನು ಅನ್ವಯಿಸುವುದರ ಜೊತೆಗೆ ಅಸ್ತಿತ್ವದಲ್ಲಿರುವ 136 ಟ್ರಾಫಿಕ್ ಸಿಗ್ನಲ್‌ಗಳನ್ನು ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲಿಂಗ್‌ಗೆ ಅಪ್‌ಗ್ರೇಡ್ ಮಾಡುವ ಮತ್ತು ಸಿಂಕ್ರೊನೈಸ್ ಮಾಡುವ ಕೆಲಸಕ್ಕೆ ಬಿಡ್ ಮಾಡಲು ಕಂಪನಿಗಳನ್ನು ಆಹ್ವಾನಿಸಲಾಗಿದೆ.  

ಬೆಂಗಳೂರು (ಮಾ.16): ಉದ್ಯಾನನಗರಿಯ ನಿವಾಸಿಗಳು 2025 ರ ವೇಳೆಗೆ ಕೃತಕ ಬುದ್ಧಿಮತ್ತೆಯಿಂದ ಚಾಲಿತ ಟ್ರಾಫಿಕ್ ಸಿಗ್ನಲಿಂಗ್ ವ್ಯವಸ್ಥೆಯನ್ನು ನೋಡಬಹುದು ಎಂದು ವರದಿಯಾಗಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್ 165 ಟ್ರಾಫಿಕ್ ಸಿಗ್ನಲ್‌ಗಳ AI ಆಧಾರಿತ ನವೀಕರಣಕ್ಕಾಗಿ ಟೆಂಡರ್ ಅನ್ನು ಪ್ರಕಟಿಸಿದೆ ಮತ್ತು ಬಿಡ್ ಸಲ್ಲಿಸಲು ಮಾರ್ಚ್ 30 ಕೊನೆಯ ದಿನಾಂಕವಾಗಿದೆ. ವರದಿಗಳ ಪ್ರಕಾರ, ಸುಮಾರು 17 ಕಾರಿಡಾರ್‌ಗಳಲ್ಲಿನ ಇಂಟರ್‌ಸೆಕ್ಷನ್‌ಗಳಲ್ಲಿ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ (ಎಟಿಸಿಎಸ್) ತಂತ್ರಜ್ಞಾನವನ್ನು ಬಳಸುವ ಯೋಚನೆಯಲ್ಲಿದೆ. ಇನ್ಫ್ರಾ ಸಪೋರ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಸಾರಿಗೆ ತಜ್ಞ ರತ್ನಾಕರ್ ರೆಡ್ಡಿ ಈ ಕುರಿತಾಗಿ ಮಾತನಾಡಿದ್ದು, ಬೆಂಗಳೂರಿನಲ್ಲಿ ಪ್ರಸ್ತುತ ಸಮಯ ನಿಗದಿತ ಟ್ರಾಫಿಕ್‌ ಸಿಗ್ನಲ್‌ಗಳನ್ನು ಹೊಂದಿದೆ.  ಕೆಲವೊಂದು ಸಿಗ್ನಲ್‌ಗಳನ್ನು ಮ್ಯಾನ್ಯುಯೆಲ್‌ ಆಗಿ ಕಾರ್ಯನಿರ್ವಹಿಸುತ್ತಿದೆ. ಮಾರ್ಗದಲ್ಲಿ ಎಷ್ಟು ವಾಹನಗಳು ಬರುತ್ತಿವೆ, ಎಷ್ಟು ವಾಹನಗಳು ಸಾಲುಗಟ್ಟಿ ನಿಲ್ಲುತ್ತದೆ ಎನ್ನುವ ಆಧಾರದ ಮೇಲೆ ಸಿಗ್ನಲ್‌ನ ಟೈಮಿಂಗ್‌ಅನ್ನು ನಿಗದಿ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಎಐ ತಂತ್ರಜ್ಞಾನದ ಅಡಿಯಲ್ಲಿ ಇಂಟರ್‌ಸೆಕ್ಷನ್‌ನ ಎಲ್ಲಾ ಸಿಗ್ನಲ್‌ಗಳನ್ನು ಪರಸ್ಪರ ಸಂಪರ್ಕಿಸಲಾಗುತ್ತದೆ. ಹೆಚ್ಚು ವಾಹನ ದಟ್ಟಣೆ ಇರುವ ಕಾರಿಡಾರ್‌ಗಳನ್ನು ಆ ಮೂಲಕ ಕ್ಲಿಯರ್‌ ಮಾಡಲು ಆದ್ಯತೆ ನೀಡುತ್ತದೆ ಎಂದಿದ್ದಾರೆ.

"ಇದು ಸಮಯದ ಆಪ್ಟಿಮೈಸೇಶನ್‌ಗೆ ಕಾರಣವಾಗುತ್ತದೆ. ನೀವು 10 ಸಿಗ್ನಲ್‌ಗಳಲ್ಲಿ 10 ಸೆಕೆಂಡುಗಳನ್ನು ಉಳಿಸಿದರೆ, ಅದು ಕೇವಲ 100 ಸೆಕೆಂಡುಗಳಂತೆ ಕಾಣಿಸಬಹುದು, ಆದರೆ ಇದು ಸಾಕಷ್ಟು ಪ್ರಯಾಣದ ಸಮಯವಾಗಿದೆ" ಎಂದು ರತ್ನಾಕರ್ ರೆಡ್ಡಿ ಹೇಳಿದರು. ಈ ಹಿಂದೆ ಮಾರ್ಚ್‌ನಲ್ಲಿ ನೀಡಲಾದ ಟೆಂಡರ್‌ನ ಪ್ರಕಾರ, ಅಸ್ತಿತ್ವದಲ್ಲಿರುವ 136 ಟ್ರಾಫಿಕ್ ಸಿಗ್ನಲ್‌ಗಳನ್ನು ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲಿಂಗ್‌ಗೆ ಅಪ್‌ಗ್ರೇಡ್ ಮಾಡುವ ಮತ್ತು ಸಿಂಕ್ರೊನೈಸ್ ಮಾಡುವ ಕೆಲಸಕ್ಕಾಗಿ ಬಿಡ್ ಮಾಡಲು ಕಂಪನಿಗಳನ್ನು ಆಹ್ವಾನಿಸಲಾಗಿದೆ, ಜೊತೆಗೆ ಪ್ರಸ್ತುತ ಸಿಗ್ನಲ್‌ ಇರದ ಜಂಕ್ಷನ್‌ಗಳಲ್ಲಿ 29 ಹೊಸ ಸಿಗ್ನಲ್‌ಗಳಿಗೆ ATCS ತಂತ್ರಜ್ಞಾನವನ್ನು ಅನ್ವಯಿಸಲಾಗುತ್ತದೆ.

ಸಿಲ್ಕ್‌ ಬೋರ್ಡ್ ಟು ಹೆಬ್ಬಾಳ ರಸ್ತೆಯ ಟ್ರಾಫಿಕ್‌ಗೆ ಮುಕ್ತಿ: ಸರ್ವಿಸ್‌ ರೋಡ್‌ ಸಂಪೂರ್ಣ ಬಳಕೆ

"ಅನ್‌ಸಿಗ್ನಲೈಸ್ಡ್‌ ಎಂದರೆ ಪ್ರಸ್ತುತ ಸಿಗ್ನಲ್ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಜಂಕ್ಷನ್ ಎಂದರ್ಥ" ಎಂದು ರೆಡ್ಡಿ ಹೇಳಿದರು. ಎಂಎ ಸಲೀಂ ಅವರು ವಿಶೇಷ ಪೊಲೀಸ್ ಕಮಿಷನರ್ (ಟ್ರಾಫಿಕ್) ಆಗಿ ಅಧಿಕಾರ ವಹಿಸಿಕೊಂಡ ನಂತರ ಬೆಂಗಳೂರಿನ ವಾಹನ ಮತ್ತು ಪಾದಚಾರಿ ಸಂಚಾರವನ್ನು ಸುಧಾರಿಸಲು ಟ್ರಾಫಿಕ್ ಸಿಗ್ನಲ್‌ಗಳ ಉನ್ನತೀಕರಣವು ಮುಂದಿನ ದೊಡ್ಡ ಯೋಜನೆಯಾಗಿದೆ. ಆಂಬ್ಯುಲೆನ್ಸ್‌ಗಳು, ಅಗ್ನಿಶಾಮಕ ಇಂಜಿನ್‌ಗಳು ಮತ್ತು ಇತರ ತುರ್ತು ವಾಹನಗಳು ಎಟಿಸಿಎಸ್‌ನ ತುರ್ತು ವಾಹನ ಆದ್ಯತೆಯ ವ್ಯವಸ್ಥೆಯಿಂದಾಗಿ ಹಸಿರು ವಲಯವನ್ನು ಹೊಂದಿರುತ್ತವೆ.

ಗೆಳತಿಯ ಬ್ಲ್ಯಾಕ್‌ಮೇಲ್, ಬೆಂಗಳೂರು ಟ್ರಾಫಿಕ್‌ನಲ್ಲೇ ವಧುವನ್ನು ಬಿಟ್ಟು ಓಡಿಹೋದ ವರ!

ಈ ವಾಹನಗಳಿಗೆ ಬೆಂಗಳೂರು ಟ್ರಾಫಿಕ್ ಪೋಲೀಸ್ (ಬಿಟಿಪಿ) ಅನುಮೋದಿಸಿದ ಟ್ರಾನ್ಸ್‌ಪಾಂಡರ್‌ಗಳನ್ನು ಅಳವಡಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಇದು ಎಟಿಸಿಎಸ್‌ಗೆ ವಾಹನವನ್ನು ಗ್ರಹಿಸಲು ಮತ್ತು ಬಿಟಿಪಿಯೊಂದಿಗೆ ಸಂವಹನ ಮಾಡುವ ಅಗತ್ಯವಿಲ್ಲದೆ ಅದರ ಚಲನೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
 

PREV
Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!