Bengaluru: 75 ವರ್ಷಗಳಲ್ಲಿ ಇದೇ ಮೊದಲು, ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ; ಸೆಪ್ಟೆಂಬರ್‌ನಲ್ಲೇ ಬಿರು ಬೇಸಿಗೆ!

Published : Sep 10, 2026, 11:37 AM IST
Bengaluru Summer

ಸಾರಾಂಶ

ಬೆಂಗಳೂರಿನಲ್ಲಿ 75 ವರ್ಷಗಳ ಬಳಿಕ ಸೆಪ್ಟೆಂಬರ್ ತಿಂಗಳಿನಲ್ಲಿ ದಾಖಲೆಯ ತಾಪಮಾನ ವರದಿಯಾಗಿದೆ. ಎಲ್‌ ನಿನೊ ಪ್ರಭಾವದಿಂದ ಉಂಟಾಗಿರುವ ಈ ಒಣ ಹವೆಯು ರಾಜ್ಯದ ಹಲವು ತಾಲೂಕುಗಳನ್ನು ಬರಪೀಡಿತವನ್ನಾಗಿ ಮಾಡಿದ್ದು, ಮಳೆ ಕೊರತೆಯಿಂದ ತಾಪಮಾನದಲ್ಲಿ ತೀವ್ರ ಏರಿಕೆಯಾಗಿದೆ.

ರಾಜ್ಯದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಈಗಾಗಲೇ ಘೋಷಣೆ ಮಾಡಲಾಗಿದ್ದು, ಐಎಂಡಿ ವರದಿಯ ಅನ್ವಯ ರಾಜ್ಯದಲ್ಲಿ ಮುಂದಿನ ಕೆಲವು ದಿನಗಳು ಒಣಹವೆ ಮುಂದುವರಿಯಲಿದೆ ಎಂದು ತಿಳಿಸಿದೆ. ಟೈಮ್ ಆಫ್ ಇಂಡಿಯಾ ವರದಿಯ ಅನ್ವಯ, ಸೆಪ್ಟೆಂಬರ್ ತಿಂಗಳು ಅತ್ಯಂತ ಕಡಿಮೆ ಮಳೆಯ ತಿಂಗಳು ಎದುರಿಸಲಿದ್ದು, ಕಳೆದ ಕೆಲವು ದಿನಗಳಿಂದ ತಾಪಮಾನವೂ 32 ಡಿಗ್ರಿ ಸೆಲ್ಸಿಯಸ್ ದಾಟಿದೆ.

1951ರ ಸೆಪ್ಟೆಂಬರ್‌ನಲ್ಲಿ 33.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು

ಬೆಂಗಳೂರಿನಲ್ಲಿ ಕಳೆದ ಭಾನುವಾರ ಮತ್ತು ಸೋಮವಾರ ಅತ್ಯಂತ ಜೆಚ್ಚು ತಾಪಮಾನ ದಾಖಲಾಗಿದೆ. 1951ರ ಬಳಿಕ ಬೆಂಗಳೂರಿನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲ 33.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಸೆಪ್ಟೆಂಬರ್ 06, 2026ರಂದು 32.2 ಡಿಗ್ರಿ ಸೆಲ್ಸಿಯಸ್ ಮತ್ತು ಸೆಪ್ಟೆಂಬರ್ 07, 2026ರಂದು 31.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈ ಅಂಕಿ-ಅಂಶಗಳು 1951ರ ಸೆಪ್ಟೆಂಬರ್‌ 16ಕ್ಕೆ ಸಮೀಪದಲ್ಲಿದ್ದು, ಅಂದು 33.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ವರದಿಯಾಗಿತ್ತು. ಸೋಮವಾರದ ತಾಪಮಾನವೂ ಕೇವಲ 1.6 ಡಿಗ್ರಿ ಸೆಲ್ಸಿಯಸ್ ಅಷ್ಟೇ ಕಡಿಮೆ ಇತ್ತು.

ಬೆಂಗಳೂರಿನ ಐಎಂಟಿ ವಿಜ್ಞಾನಿ ಸಿಎಸ್ ಪಾಟೀಲ್ ಅವರು ಹೇಳಿದಂತೆ, ಎಲ್‌ ನಿನೊ ಪ್ರಭಾವದಿಂದ ದಾಖಲೆಯ ಉಷ್ಣತೆ ಹೆಚ್ಚಿದೆ. ಈ ಒಣ ಪರಿಸ್ಥಿತಿ ಮುಂದು ಒಂದೆರಡು ದಿನ ಮುಂದುವರಿಯಲಿದೆ. ಬೆಂಗಳೂರು ಮಾತ್ರವಲ್ಲದೆ, ಕರ್ನಾಟಕ ಹಲವು ಜಿಲ್ಲೆಯಗಳಲ್ಲಿ ಮಳೆಯ ಕೊರತೆಯಿಂದ ತಾಪಮಾನದಲ್ಲಿ ತೀವ್ರ ಉಷ್ಣತೆ ಹೆಚ್ಚಾಗಿದೆ. ಆದರೆ ಉತ್ತರ ಕರ್ನಾಟಕದ ಕೆಲವು ಭಾಗಗಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಉಳಿದಂತೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಯಗಳಲ್ಲಿ ಮಳೆಯಾಗಿಲ್ಲ.

ಬರಪೀಡಿತ ತಾಲೂಕುಗಳ ಸಂಖ್ಯೆ ಹೆಚ್ಚಳ

ಇನ್ನು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚರಣಾ ಕೇಂದ್ರ ನೀಡಿರುವ ಮಾಹಿತಿಯ ಅನ್ವಯ, 122 ತಾಲೂಕಿನಲ್ಲಿ ಕಳೆದ ಮೂರು ವಾರಗಳಿಂದ ಶೂನ್ಯ ಮಳೆ ವರದಿಯಾಗಿದೆ. ರಾಜ್ಯದ 239 ತಾಲೂಕುಗಳಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ತಿಂಗಳ ಕೊನೆಯಲ್ಲಿ ನೈರುತ್ಯ ಮಾನ್ಸೂನ್ ಮಾರುತಗಳ ಋತು ಕೊನೆಗೊಳ್ಳಲಿದ್ದು, ಇದರೊಂದಿಗೆ ಬರಪೀಡಿತ ತಾಲೂಕುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ತೀವ್ರ ಬರಗಾಲದ ಪರಿಣಾಮ ರಾಜ್ಯದಲ್ಲಿ ಖಾರಿಫ್ ಬಿತ್ತನೆ ಸಂಪೂರ್ಣ ನೆಲಕಚ್ಚಿದೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಇದರ ಪರಿಣಾಮ ಹೆಚ್ಚಾಗಿದೆ. ಇದರೊಂದಿಗೆ ತೋಟಗಾರಿಕಾ ಬೆಳೆಗಳ ಉತ್ಪಾದನೆಯಲ್ಲೂ ದೊಡ್ಡ ಹಿನ್ನಡೆಯಾಗಲಿದೆ. ಎಲ್‌ ನಿನೋ ಪ್ರಭಾವದಿಂದ ಕರ್ನಾಟಕದಾದ್ಯಂತ ಶುಷ್ಕ ವಾತಾವರಣ ನಿರ್ಮಾಣವಾಗಿದ್ದು, ಸುದೀರ್ಘ ಅವಧಿಯಲ್ಲಿ ಮಳೆಯಾಗದ ಕಾರಣ ತಾಪಮಾನದಲ್ಲಿ ತೀವ್ರ ಏರಿಕೆ ಕಂಡು ಬಂದಿದೆ.

PREV
Read more Articles on
click me!

Recommended Stories

ಝಿರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್‌ಗೆ SIR ನೋಟಿಸ್, ಮತದಾರ ಪಟ್ಟಿಯಲ್ಲಿ ಲೋಪ
ಅಪ್ರಾಪ್ತೆ ಜತೆ ಸಮ್ಮತಿಯ ಲೈಂಗಿಕ ಕ್ರಿಯೆಯೂ ಅಪರಾಧ: ಹೈಕೋರ್ಟ್ ಮಹತ್ವದ ತೀರ್ಪು..! ಅಷ್ಟಕ್ಕೂ ಏನಿದು ಪ್ರಕರಣ?