ಟ್ರಾಫಿಕ್ ಫೈನ್ ತಪ್ಪಿಸಿಕೊಳ್ಳಲು ಹೊಸ ಕರಾಮತ್ತು; ಕ್ಯಾಮೆರಾದಿಂದ ಬಚಾವ್ ಆಗಲು ಚಾಲಾಕಿತನ

Published : Nov 14, 2026, 09:13 AM IST
Bengaluru Traffic

ಸಾರಾಂಶ

ಬೆಂಗಳೂರಿನಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ಸವಾರನೊಬ್ಬ ಎಐ ಕ್ಯಾಮರಾದಿಂದ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್‌ಗೆ ತನ್ನ ಕೈಯನ್ನೇ ಅಡ್ಡ ಇಟ್ಟಿದ್ದಾನೆ. ಈತನ ವಿಚಿತ್ರ ಕರಾಮತ್ತಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರು: ಟ್ರಾಫಿಕ್ ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಏನೆಲ್ಲಾ ಕಸರತ್ತು ಮಾಡುತ್ತಾರೆ ಎಂಬುದಕ್ಕೆ ಇಲ್ಲೊಂದು ಹೊಸ ನಿದರ್ಶನ ಸಿಕ್ಕಿದೆ. ಸಾಮಾನ್ಯವಾಗಿ ಕ್ಯಾಮರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್‌ಗೆ ಸ್ಟಿಕ್ಕರ್ ಅಂಟಿಸುವುದು ಅಥವಾ ಬಟ್ಟೆ, ಕವರ್ ಸುತ್ತುವುದನ್ನು ನೀವು ನೋಡಿರುತ್ತೀರಿ. ಆದರೆ, ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ ಈ ಸವಾರ ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ ವಿಭಿನ್ನ ಐಡಿಯಾ ಮಾಡಿದ್ದಾನೆ.

ಗಾಡಿ ನಂಬರ್ ಕಾಣದಿರಲು ಐಡಿಯಾ

ಟ್ರಾಫಿಕ್ ಸಿಗ್ನಲ್ ಹತ್ತಿರ ಬರುತ್ತಿದ್ದಂತೆಯೇ, ಎಐ (AI) ಕ್ಯಾಮರಾಗಳಲ್ಲಿ ತನ್ನ ಗಾಡಿಯ ನಂಬರ್ ರೆಕಾರ್ಡ್ ಆಗದಿರಲಿ ಎಂದು ಬೈಕ್ ಚಲಾಯಿಸುತ್ತಲೇ ತನ್ನ ಕೈಯನ್ನೇ ನಂಬರ್ ಪ್ಲೇಟ್‌ಗೆ ಅಡ್ಡಲಾಗಿ ಹಿಡಿದಿದ್ದಾನೆ.

ಇದನ್ನೂ ಓದಿ: 38 ವರ್ಷ ಒಂಟಿ ಬದುಕು, 1,500 ಮರಗಳ ಸಾಮ್ರಾಜ್ಯ! ಅಮೆಜಾನ್ ಕಾಡಿನಲ್ಲಿ ಈತ ಕಟ್ಟಿದ ಬದುಕಿನ ಕಥೆಯೇ ರೋಚಕ!

ಚಾಲಕನ ಫೋಟೋ ವೈರಲ್ 

ಸದ್ಯ ಈ ಚಾಲಾಕಿ ಸವಾರನ ವಿಚಿತ್ರ ವರ್ತನೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನಿಯಮ ಉಲ್ಲಂಘಿಸಿದ ಈತನನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸತ್ತ ಜೇಡದ ಬಳಿಕ ಈಗ ನಂದಿನಿ ಮೊಸರಿನಲ್ಲಿ ಸಿಮ್​ ಕಾರ್ಡ್​ ಪತ್ತೆ? ಮದ್ದೂರಿನ ವ್ಯಕ್ತಿಯಿಂದ ವಿಡಿಯೋ

PREV
Read more Articles on
click me!

Recommended Stories

ಅಕ್ರಮ 6 ಅಂತಸ್ತಿನ ಕಟ್ಟಡ: GBA, BESCOM ಅಧಿಕಾರಿಗಳಿಗೆ ಸಮನ್ಸ್ ನೀಡಿದ ಲೋಕಾಯುಕ್ತ
ಮಗಳಿಗೆ ಮೋದಿ ತೋರಿಸಲು, ತಲೆ ಮೇಲೆ ನಿಲ್ಲಿಸಿಕೊಂಡ ಅಪ್ಪ! ಈ ದಿನದ ಬೆಂಗಳೂರಿನ ಬೆಸ್ಟ್ ವಿಡಿಯೋ!