ಸ್ಯಾಲರಿ 60 ಲಕ್ಷ ಬಂದರೂ ಬೆಂಗಳೂರಿನಲ್ಲಿ ನೆಮ್ಮದಿಯ ಬದುಕಿಲ್ಲ ಎಂದ ಟೆಕ್ಕಿ, ಪರ-ವಿರೋಧ ಶುರು

Published : Apr 30, 2025, 06:06 PM ISTUpdated : Apr 30, 2025, 06:30 PM IST
ಸ್ಯಾಲರಿ 60 ಲಕ್ಷ ಬಂದರೂ ಬೆಂಗಳೂರಿನಲ್ಲಿ ನೆಮ್ಮದಿಯ ಬದುಕಿಲ್ಲ ಎಂದ ಟೆಕ್ಕಿ, ಪರ-ವಿರೋಧ ಶುರು

ಸಾರಾಂಶ

60 ಲಕ್ಷ ರೂಪಾಯಿ ಸಂಬಳ. ಇದರಲ್ಲಿ ಶೇಕಡಾ 30-40 ತೆರಿಗೆ. ಇತರ ಎಲ್ಲೂ ಇಲ್ಲದ ಅತೀ ಹೆಚ್ಚಿನ ರಸ್ತೆ ತೆರಿಗೆ ಬೆಂಗಳೂರಿನಲ್ಲಿದೆ. ಅದನ್ನೂ ಪಾವತಿಸಿದ್ದೇನೆ. ನನಗೆ ಸಿಕ್ಕಿದ್ದೇನು. 3 ಕಿಲೋಮೀಟರ್ ಹೋಗಲು 40 ನಿಮಿಷ, ರಸ್ತೆ ಗುಂಡಿ, ಹೊಂಡ, ಕಾಮಗಾರಿ, ಧೂಳು, ನೆಮ್ಮದಿಯಿಲ್ಲಗ ಜೀವನ. ಇದು ಬೆಂಗಳೂರಿನ ಉದ್ಯೋಗಿಯ ಆಕ್ರೋಶದ ಮಾತುಗಳು. ಇದೀಗ ಈತನ ಪೋಸ್ಟ್ ಭಾರಿ ಚರ್ಚೆಯಾಗುತ್ತಿದೆ.

ಬೆಂಗಳೂರು(ಏ.30) ಬೆಂಗಳೂರಿನಲ್ಲಿ ವರ್ಷಕ್ಕೆ 60 ಲಕ್ಷ ಆದಾಯ ಬಂದರೂ  ನೆಮ್ಮದಿಯ ಬದುಕಿಲ್ಲ, ಒಂದೊಳ್ಳೆಯ ಬದುಕಿಗಾಗಿ ಭಾರತವನ್ನು ಬಿಟ್ಟು ಹೋಗಬೇಕೆ? ಎಂದು ಟೆಕ್ಕಿ ರೆಡಿಇಟ್‌ನಲ್ಲಿ ಮಾಡಿರುವ ಪೋಸ್ಟ್‌  ದೊಡ್ಡ ಚರ್ಚೆ ಹುಟ್ಟು ಹಾಕಿದೆ.  ಅವರು ತಮ್ಮ ಪೋಸ್ಟ್‌ನಲ್ಲಿ ಹೇಳಿರುವ ಅಂಶಗಳು ಪ್ರತಿಯೊಬ್ಬರ ಅನುಭವಕ್ಕೆ ಬಂದಿರುತ್ತೆ,  ಒಂದೊಳ್ಳೆಯ ಸಂಬಳ ಬಂದರೂ ಇಲ್ಯಾಕೆ ಒಳ್ಳೆಯ ಬದುಕು ಕಾಣಲು ಸಾಧ್ಯವಾಗುತ್ತಿಲ್ಲ? ನಾವು ಹೆಚ್ಚು ಟ್ಯಾಕ್ಸ್ ಕೊಡುತ್ತಿದ್ದೇವೆ ಆದರೂ ನಮಗ್ಯಾಕೆ ಸೂಕ್ತ ಸೌಲಭ್ಯಗಳಿಲ್ಲ, ಒಂದೊಳ್ಳೆಯ ರಸ್ತೆಯಿಲ್ಲ, ಒಳ್ಳೆಯ ಆರೋಗ್ಯ ಸೇವೆ ಬೇಕೆಂದರೆ ಅದಕ್ಕೂ ದುಡ್ಡು ಸುರಿಯಬೇಕು, ಮಕ್ಕಳಿಗೆ ಒಳ್ಳೆಯ ಶಿಕ್ಷಣಕ್ಕೆ ಖಾಸಗಿ ಶಾಲೆಗಳಿಗೆ ದುಡ್ಡು ಸುರಿಯಬೇಕು, ಹಾಗಾದರೆ ನೆಮ್ಮದಿಯ ಬದುಕು ಕಾಣಲು ನಾವೇನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಲ್ಲಿ 2.5 ಲಕ್ಷ ರೂ ರಸ್ತೆ ತೆರಿಗೆ ಪಾವತಿಸಿ ನನಗೆ ಸಿಕ್ಕಿದ್ದೇನು
ಬೆಂಗಳೂರಿನ ಉದ್ಯೋಗಿ ರೆಡ್ಡಿಟ್‌ ಪೋಸ್ಟ್ ಭಾರಿ ಚರ್ಚೆಯಾಗುತ್ತಿದೆ. ಇಲ್ಲಿ ಕೇಳಿದ ಹಲವು ಪ್ರಶ್ನೆಗಳು ಹಲವರನ್ನು ಕಾಡುತ್ತಿದೆ. ಭಾರತ ಬದಲಾಗುವುದೇ? ಅಥವಾ  ಒಳ್ಳೆಯ ಬದುಕಿಗಾಗಿ ನಾವು ಭಾರತವನ್ನು  ಬಿಟ್ಟು ಹೋಗಬೇಕೆ? ಎಂಬುವುದಾಗಿ ಪ್ರಶ್ನೆ ಮಾಡಿದ್ದಾರೆ. ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅನ್ಯಾಯ ಇವುಗಳಿಂದ  ಬೇಸತ್ತು ಹೋಗಿದ್ದಾರೆ.   ಮೂಲ ಸೌಕರ್ಯಗಳು ಭಯಾನಕವಾಗಿದೆ, ಪ್ರತಿಯೊಂದು ರಸ್ತೆಗಳು ಗುಂಡಿಗಳಿಂದ ತುಂಬಿದೆ, ರೋಡ್‌ಗೆ ಹಾಕಿರುವ ಡಾಮರು ಹೋಗಿರುತ್ತೆ ಅಥವಾ ಕಾಮಗಾರಿ ಹೆಸರಿನಲ್ಲಿ ಅಲ್ಲಲ್ಲಿ ಅಗೆದಿಟ್ಟು ತಿಂಗಳುಗಟ್ಟಲೆ ಹಾಗೇ ಬಿಡ್ತಾರೆ, ರಸ್ತೆಗಳು ಇಂದು ಸರಿಯಾಗುತ್ತೆ, ನಾಳೆ ಸರಿ ಹೋಗುತ್ತೆ ಅಂತ ಜನ ಸಾಮಾನ್ಯರು ಭಾವಿಸುತ್ತಾರೆ, ಆದರೆ ಅದು ಮುಗಿಯುವುದೇ ಇಲ್ಲ, ದೇಶದಲ್ಲಿಯೇ ಬೆಂಗಳೂರಿನಲ್ಲಿ ರೋಡ್‌ ಟ್ಯಾಕ್ಸ್ ಹೆಚ್ಚಿದೆ, ಆದರೂ ಇಲ್ಲಿಯ ರಸ್ತೆಗಳು ಸರಿಯಿಲ್ಲ,  ಬರಿ 3 ಕಿ.ಮೀ ಹೋಗುವಷ್ಟರಲ್ಲಿ ಹೈರಾಣಾಗುತ್ತೇವೆ. ನಾನು ಇಲ್ಲಿ 2.25 ಲಕ್ಷ ರೋಡ್‌ ಟ್ಯಾಕ್ಸ್ ಪಾವತಿಸಿದ್ದೇನೆ, ಆದರೆ ಮರಳಿ ಸಿಕ್ಕಿರುವುದೇನು? ಭಯಾನಕ ಟ್ರಾಫಿಕ್‌,  ಕಾಮಗಾರಿ… ನಿತ್ಯ ಕಾಮಗಾರಿ, ಇದೊಂದು ಹಗಲು ದರೋಡೆಯಲ್ಲದೆ ಮತ್ತೇನೂ ಅಲ್ಲ ಎಂದು ಟೆಕ್ಕಿ ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಕಳಚುತ್ತಾ ಬೆಂಗಳೂರಿನ ನಂ.1 ಕಿರೀಟ, ಹೈದರಾಬಾದ್‌ನಲ್ಲಿ 450 ಎಕರೆ ಹೈಟೆಕ್ ಐಟಿ ಹಬ್

ದುಡಿದ ಹಣದಲ್ಲಿ ಶೇ.30 ರಿಂದ 40 ರಷ್ಟು ತೆರಿಗೆ
ನಾವು ದುಡಿದ ಹಣದಲ್ಲಿ  ಶೇ.30-40ರಷ್ಟು ತೆರಿಗೆ ಕಟ್ಟುತ್ತೇವೆ, ಆದರೆ ಉಚಿತವಾಗಿ ಒಂದೊಳ್ಳೆಯ ಆರೋಗ್ಯ ಸೇವೆ ದೊರೆಯುತ್ತಿಲ್ಲ, ಒಳ್ಳೆಯ ಶಿಕ್ಷಣ ದೊರೆಯುತ್ತಿಲ್ಲ, ಅದು ಹೋಗಲಿ ನೀರು ಕೂಡ ಸಿಗುತ್ತಿಲ್ಲ.   ಖಾಸಗಿ ಶಾಲೆಗಳಿಗೆ ಪ್ರತ್ಯೇಕ  ನೀಡಬೇಕು,  ಖಾಸಗಿ ಆಸ್ಪತ್ರೆಗಳಿಗೆ ಪ್ರತ್ಯೇಕ ನೀಡಬೇಕು, ನೀರು ಟ್ಯಾಂಕರ್‌ಗಳಿಗೂ ಹಣ ನೀಡಬೇಕು, ಮಧ್ಯಮವರ್ಗದವರ ಬದುಕು ತುಂಬಾನೇ ಕಷ್ಟ.

ಕೆನಡಾ, ಜರ್ಮನಿ ಅಂಥ ದೇಶಗಳಲ್ಲಿಯೂ ಅತ್ಯಧಿಕ ತೆರಿಗೆ ಕಟ್ಟಬೇಕು, ಆದರೆ ಅಲ್ಲಿ ನೀಡುವ ಸೌಕರ್ಯಗಳು ಇಲ್ಯಾಕೆ ನೀಡುತ್ತಿಲ್ಲ, ಒಳ್ಳೆಯ ಗುಣಮಟ್ಟದ ಜೀವನ ನಮಗೆ ಇಲ್ಲಿ ಇಲ್ಲ, ರಸ್ತೆಗಳಲ್ಲಿ ಬರೀ ದೂಳು, ಶಬ್ದ ಮಾಲಿನ್ಯ, ಒತ್ತಡ, ನೆಮ್ಮದಿಯಾಗಿ ನಡೆಯಲೂ ಸಾಧ್ಯವಾಗುತ್ತಿಲ್ಲ,  ಶ್ವಾಸಿಸಲು ಒಳ್ಳೆಯ ಗಾಳಿಯಿಲ್ಲ, ಸಂಜೆ 7 ಗಂಟೆಯ ಬಳಿಕ ಪತ್ನಿಯೊಬ್ಬಳನ್ನೇ  ಏನಾದರು ತರಲು ಕಳುಹಿಸುವುದು ಸುರಕ್ಷತೆ ಅನಿಸುವುದಿಲ್ಲ.

ಎಲ್ಲೆಡೆ ಲಂಚ, ಭ್ರಷ್ಟಾಚಾರ
ಎಲ್ಲಾ ಕಡೆ ಭ್ರಷ್ಟಾಚಾರ ಒಂದು ಮ್ಯಾರೇಜ್ ಸರ್ಟಿಫಿಕೇಟ್‌ ಮಾಡಿಸಲು ಅಲೆದಾಡಿ ಸಾಕಾಗಿ 2 ಸಾವಿರ ಲಂಚ ನೀಡಿ ಮಾಡಿಸಿಕೊಳ್ಖಬೇಕಾಯ್ತು,  ಹಣ ನೀಡದಿದ್ದರೆ ಏನೂ ನಡೆಯಲ್ಲ. ಇನ್ನು ಮನೆ ಬಾಡಿಗೆ ಪ್ರತಿವರ್ಷ ಶೇ. 10ರಷ್ಟು ಹೆಚ್ಚಾಗುತ್ತೆ, ಶಾಲಾ ಫೀಸ್‌ ಅಂತೂ ಕೇಳುವುದೇ ಬೇಡ, ಆದಾಯಕ್ಕಿಂತ ಇಲ್ಲಿ ಖರ್ಚೇ ಹೆಚ್ಚಿದೆ.

 

 

ನಿರೀಕ್ಷೆ ಇಟ್ಟುಕೊಳ್ಳಬೇಕಾ, ನಮ್ಮ ಹುಚ್ಚುತನವೇ? 
ಇಷ್ಟೆಲ್ಲಾ ಇದ್ರೂ ನನ್ನ ದೇಶಕ್ಕೆ  ಏನಾದರು ಕೊಡುಗೆ ನೀಡಬೇಕೆಂದಿಸುತ್ತೆ ಆದರೆ  ಭಾರತ ಬದಲಾಗುವುದು ಯಾವಾಗ? ಈ ಪರಿಸ್ಥಿತಿ ಬದಲಾಗುವುದು ಯಾವಾಗ? ಯಾವಾಗ ಉತ್ತಮ ಸೌಕರ್ಯಗಳು ದೊರೆಯುವಂತಾಗುವುದು? ನಾನು ಪ್ರಾಮಾಣಿಕವಾಗಿ ಕೇಳ್ತಾ ಇದ್ದೀನಿ, ಏನಾದರೂ ನಿರೀಕ್ಷೆ ಉಳಿದಿದೆಯಾ ಅಥವಾ  ಬದಲಾಗುತ್ತೆ ಎಂದು ಅಂದುಕೊಳ್ಳುವುದೇ ನಮ್ಮ  ಹುಚ್ಚುತನವೇ?

ಈ ಪೋಸ್ಟ್‌ಗೆ ಹಲವಾರು ಕಮೆಂಟ್‌ಗಳು ಬಂದಿದ್ದು ಒಬ್ಬರು'ಈ ಪರಿಸ್ಥಿತಿ ಖಂಡಿತ ಬದಲಾಗಲ್ಲ' ಎಂದರೆ ಮತ್ತೊಬ್ಬರು ಇಲ್ಲಿ ರಾಜಕೀಯ, ಧರ್ಮಗಳ ನಡುವಿನ ಕಿತ್ತಾಟದಿಂದಾಗಿ ಮನುಷ್ಯನಿಗೆ ನೆಮ್ಮದಿಯಿಲ್ಲದಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಜರ್ಮನಿಗೆ ಹೋಗಿ ನೆಲೆಸಿರುವ ವ್ಯಕ್ತಿ ನನಗೆ  ನನ್ನ ಕುಟುಂಬ, ಜನರು, ಸಂಸ್ಕೃತಿ ಎಲ್ಲಾ ನೆನಪಾಗಿ ಅಲ್ಲಿಗೆ ಬರಬೇಕೆನಿಸುತ್ತದೆ, ಆದರೆ ಇಲ್ಲಿ ನನಗೆ ಒಳ್ಳೆಯ ಬದುಕು ಸಿಕ್ಕಿದೆ ಎಂಬುವುದಾಗಿ ಕಮೆಂಟ್ ಮಾಡಿದ್ದಾರೆ.

ಬೆಂಗಳೂರಿನ ಟೆಕ್ಕಿಗೆ ಸಾಲುತಿಲ್ಲ 1.5 ಲಕ್ಷ ಸ್ಯಾಲರಿ, ಬದುಕಿನ ಪಯಣದಲ್ಲಿ ನಿಮಗೂ ಹೀಗೆ ನಾ?
 

PREV
Read more Articles on
click me!

Recommended Stories

ರೇಣುಕಾಸ್ವಾಮಿ ತಂದೆ-ತಾಯಿಗೆ ಸಮನ್ಸ್, ದರ್ಶನ್‌ಗೆ ಜೈಲಲ್ಲೊಂದು ಶಾಕ್, ಕೋರ್ಟ್‌ನಲ್ಲೊಂದು ಆಘಾತ!
ಬೆಂಗಳೂರು ಏರ್‌ಪೋರ್ಟ್‌ನಲ್ಲಿ 200ಕ್ಕೂ ಹೆಚ್ಚು ಇಂಡಿಗೋ ವಿಮಾನ ರದ್ದು, ಕೆಂಡಾಮಂಡಲವಾದ ಪ್ರಯಾಣಿಕರಿಂದ ಪ್ರತಿಭಟನೆ