ಬೆಂಗಳೂರು ಗ್ರಾಮಾಂತರದಲ್ಲಿ ಡಾಕ್ಟರ್‌ ಗೆಲುವಿಗೆ ಮಂತ್ರಾಲಯದಲ್ಲಿ ಸುಧಾಮೂರ್ತಿ ಹರಕೆ!

By Santosh Naik  |  First Published May 30, 2024, 4:56 PM IST

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾಕ್ಟರ್‌ ಸಿಎನ್‌ ಮಂಜುನಾಥ್‌ ಅವರು ಗೆಲುವು ಸಾಧಿಸಲಿ ಎಂದು ಇನ್ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾಮೂರ್ತಿ ಅವರು ಮಂತ್ರಾಲಯದಲ್ಲಿ ಹರಕೆ ಹೊತ್ತಿದ್ದಾರೆ


ಬೆಂಗಳೂರು (ಮೇ.30): ರಾಜ್ಯ ರಾಜಕಾರಣದಲ್ಲಿ ಲೋಕಸಭೆ ಚುನಾವಣೆಗೆ ಅತ್ಯಂತ ಜಿದ್ದಿನ ಕ್ಷೇತ್ರವಾಗಿರುವ ಬೆಂಗಳೂರು ಗ್ರಾಮಾಂತರದಲ್ಲಿ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾಕ್ಟರ್‌ ಸಿಎನ್‌ ಮಂಜುನಾಥ್‌ ಅವರು ಕಣಕ್ಕಿಳಿದಿದ್ದಾರೆ. ಈ ಕ್ಷೇತ್ರದಲ್ಲಿ ಹಾಲಿ ಸಂಸದ ಕಾಂಗ್ರೆಸ್‌ನ ಡಿಕೆ ಸುರೇಶ್‌ ವಿರುದ್ಧ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಫಲಿತಾಂಶದ ಕುತೂಹಲ ಇರುವಾಗಲೇ ಇನ್ಫೋಸಿಸ್‌ ಫೌಂಡೇಷನ್‌ನ ಅಧ್ಯಕ್ಷ ಹಾಗೂ ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರು ಡಾಕ್ಟರ್‌ ಗೆಲುವಿಗಾಗಿ ಹರಕೆ ಹೊತ್ತಿದ್ದಾರೆ. ಮಂತ್ರಾಲಯದಲ್ಲಿ 6 ಕಿಲೋಮೀಟರ್‌ ಪಾದಯಾತ್ರೆ ನಡೆಸಿ ರಾಯರ ಸೇವೆ ಮಾಡುವ ಹರಕೆಯನ್ನು ಸುಧಾಮೂರ್ತಿ ಹೊತ್ತಿದ್ದಾರೆ. ಈ ಬಗ್ಗೆ ಸ್ವತಃ ಡಾಕ್ಟರ್‌ ಸಿಎನ್‌ ಮಂಜುನಾಥ್‌ ಅವರೇ ತಿಳಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಡಾಕ್ಟರ್‌ ಮಂಜುನಾಥ್‌ ಅವರು ಸುಧಾಮೂರ್ತಿ ಅವರ ಹರಕೆಯ ಬಗ್ಗೆ ತಿಳಿಸಿದ್ದಾರೆ.

ಜಯದೇವ ಆಸ್ಪತ್ರೆ ಅಭಿವೃದ್ಧಿಗೆ ಡಾ.ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿಯವರ ಅಪಾರ ಕೊಡುಗೆ ಇದೆ. ಆಸ್ಪತ್ರೆಯ ಅಭಿವೃದ್ಧಿಗೆ ಅವರು ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದ್ದರು. ಅವರಿಗೆ ನನ್ನ ಮೇಲೂ ಕೂಡ ಭಾರೀ ನಂಬಿಕೆ ಇತ್ತು. ಮೊನ್ನೆ ಕೂಡ ನಾನು ಅವರ ಮನೆಗೆ ಹೋಗಿದ್ದಾಗ ಚುನಾವಣೆಯಲ್ಲಿ ಗೆಲುವಿಗೆ ಹರಕೆ ಹೊತ್ತುಕೊಂಡಿರುವುದಾಗಿ ತಿಳಿಸಿದ್ದರು. ರಾಯರ ಸನ್ನಿಧಿಯಲ್ಲಿ 6 ಕಿಲೋಮೀಟರ್‌ ಪಾದಯಾತ್ರೆ ಮಾಡಿ ಸೇವೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಅವರ ಅಭಿಮಾನಕ್ಕೆ ನಾನು ಚಿರರುಣಿ ಎಂದು ಡಾಕ್ಟರ್‌ ಸಿಎನ್‌ ಮಂಜುನಾಥ್‌ ಹೇಳಿದ್ದಾರೆ.

ಕೆರ್ನಾಟಕದಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಬೇಕು ಎನ್ನುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿತ್ತು. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿದ್ದ ಏಕೈಕ ಕ್ಷೇತ್ರವಾಗಿದ್ದ ಬೆಂಗಳೂರು ಗ್ರಾಮಾಂತರದಲ್ಲಿ ಉಪಮುಖ್ಯಮಂತ್ರಿ ಡಿಕೆ ಸುರೇಶ್‌ ಅವರ ಸಹೋದರ ಹಾಗೂ ಹಾಲಿ ಸಂಸದ ಡಿಕೆ ಸುರೇಶ್‌ ಅವರನ್ನು ಮಣಿಸುವ ನಿಟ್ಟಿನಲ್ಲಿ ಕಮಲ ಹಾಗೂ ದಳ ನಾಯಕರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಿಎನ್‌ ಮಂಜುನಾಥ್‌ ಅವರನ್ನು ಕಣಕ್ಕಿಳಿಸಿದ್ದರು.

Tap to resize

Latest Videos

undefined

ಬೆಳ್ಳಂಬೆಳಗ್ಗೆ ಗೊರವನಹಳ್ಳಿ ಮಹಾಲಕ್ಷ್ಮಿ ದರ್ಶನ ಪಡೆದ ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ

ಇನ್ನು ಈ ಕ್ಷೇತ್ರದಲ್ಲಿ ಯಾರು ಗೆಲ್ತಾರೆ ಅನ್ನೋದರ ಬಗ್ಗೆಯೂ ಬೆಟ್ಟಿಂಗ್‌ ಭರಾಟೆ ಜೋರಾಗಿ ನಡೆಯುತ್ತಿದೆ. ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನ ಕಾರ್ಯಕರ್ತರಲ್ಲಿ ಮಾತ್ರವಲ್ಲ ನಾಯಕರಲ್ಲೂ ಈ ಕ್ಷೇತ್ರದ ಕುತೂಹಲವಿದೆ. ಇದರ ನಡುವೆ ಸುಧಾಮೂರ್ತಿ ಅವರು ಡಾಕ್ಟರ್‌ ಸಿಎನ್‌ ಮಂಜುನಾಥ್‌ ಅವರ ಗೆಲುವಿಗಾಗಿ ಹರಕೆ ಹೊತ್ತಿದ್ದಾರೆ.

 

ರಾಜ್ಯಸಭೆ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಸುಧಾಮೂರ್ತಿ!

click me!