ಖಾಸಗಿ ಶಾಲೆ ಪ್ರಿನ್ಸಿಪಾಲರಿಂದ ವಿದ್ಯಾರ್ಥಿಗಳಿಗೆ ಕಿರುಕುಳ

By Suvarna NewsFirst Published Nov 24, 2022, 6:13 PM IST
Highlights

ಒಂದೂವರೆ ವರ್ಷದಿಂದ ನಿರಂತರವಾಗಿ ಮಾನಸಿಕ ಕಿರುಕುಳ
ತರಗತಿಯಲ್ಲಿರುವ ವಿದ್ಯಾರ್ಥಿಗಳು ತಮ್ಮ ಮಕ್ಕಳೊಂದಿಗೆ ಮಾತನಾಡದಂತೆ ಕ್ರಮ
ಪೋಷಕರಿಂದ ಪ್ರಿನ್ಸಿಪಾಲ್ ವಿರುದ್ಧ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು

ವರದಿ- ನಂದೀಶ್ ಮಲ್ಲೇನಹಳ್ಳಿ,ಏಷ್ಯಾನೆಟ್ ಸುವರ್ಣ ನ್ಯೂಸ್ 
ಬೆಂಗಳೂರು (ನ.24): ಬನ್ನೇರುಘಟ್ಟ ರಸ್ತೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆ ರಿಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ವಿರುದ್ಧ ಮಕ್ಕಳ ಹಕ್ಕುಗಳ ಆಯೋಗದಲ್ಲಿ ದೂರು ದಾಖಲಾಗಿದೆ. ತನ್ನ ಸೂಚನೆ ಪ್ರಶ್ನಿಸಿದ ಪೋಷಕರ ಇಬ್ಬರು ಮಕ್ಕಳಿಗೆ ಇನ್ನಿಲ್ಲದ ಕಿರುಕುಳವನ್ನ ಶಾಲೆಯ ಪ್ರಿನ್ಸಿಪಾಲ್ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಪೋಷಕರು ಸ್ಥಳೀಯ ಪೊಲೀಸ್ ಠಾಣೆ, ಮಕ್ಕಳ ಹಕ್ಕು ರಕ್ಷಣಾ ಆಯೋಗದಲ್ಲಿ ದೂರು ನೀಡಿದ್ದಾರೆ.

ಶಾಲೆಯಲ್ಲಿ ಮಕ್ಕಳಿಗೆ ವಿಪರೀತ ಕಿರಿಕಿರಿ ನೀಡಲಾಗುತ್ತಿದ್ದು, ಪದೇ ಪದೇ ಪೋಷಕರ ಮೀಟಿಂಗ್ ಕರೆದು ಪ್ರಶ್ನೆ ಮಾಡುತ್ತಿದ್ದರು. ಇದನ್ನ ಕೇಳಿದ್ದಕ್ಕೆ ತನ್ನ ಇಬ್ಬರ ಮಕ್ಕಳಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾರೆ ಅಂತ ಪೋಷಕರು ಆರೋಪಿಸಿದ್ದಾರೆ. ಬನ್ನೇರುಘಟ್ಟದ ರ್‍ಯಾನ್ (Ryan) ಖಾಸಗಿ ಶಾಲೆ ಪ್ರಿನ್ಸಿಪಾಲ್ ಪ್ರೀತಿ ಸೆತ್ ವಿರುದ್ದ ಇಂತಹ ಗಂಭೀರ ಆರೋಪ ಕೇಳಿ ಬಂದಿದೆ. ಪೋಷಕ ಹರಿಶಂಕರ್ ಅವರಿಂದ ಶಾಲೆಯ ಮುಖ್ಯಸ್ಥರಿಗೆ ದೂರು ನೀಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಕೊನೆಗೆ ಮಕ್ಕಳ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಕಲಬುರಗಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಿನ್ಸಿಪಾಲ್‌..?

ಶಾಲೆಯಲ್ಲಿ ತನ್ನ ಇಬ್ಬರ ಮಕ್ಕಳನ್ನು ತರಗತಿಯಿಂದ ಹೊರಗೆ ಕೂರಿಸುವುದು ಹಾಗೂ ಯಾರೂ ಮಾತಾಡಿಸದಂತೆ ಸೂಚನೆಯನ್ನ ಕೊಡಲಾಗಿದೆ‌. ಇದರಿಂದ ಮಾನಸಿಕವಾಗಿ ಮಕ್ಕಳು ಜರ್ಜರಿತರಾಗಿದ್ದು, ಶಾಲೆಯಿಂದ ಬರುವಾಗ ತಲೆಗೆ ಗಾಯ ಮಾಡಿಕೊಂಡು ಬಂದಿದ್ದಾರೆ. ಮಾನಸಿಕವಾಗಿ ನೊಂದ ಮಕ್ಕಳು 10 ಹಾಗೂ 9ನೇ ತರಗತಿ ಓದುತ್ತಿರುವ ಮಕ್ಕಳಿಗೆ ಕಳೆದೊಂದು ವರುಷದಿಂದ ಶಾಲೆಯ ಪ್ರಿನ್ಸಿಪಾಲ್ ಇನ್ನಿಲ್ಲದ ಕಿರುಕುಳ ಕೊಡುತ್ತಿದ್ದಾರೆ ಪೋಷಕ ಹರಿಶೇಖರ್ ಆರೋಪಿಸಿದ್ದಾರೆ.

ನಮ್ಮಿಬ್ಬರು ಮಕ್ಕಳ ಮೇಲೆ ಪ್ರಿನ್ಸಿಪಾಲ್ ಪ್ರೀತಿ ಸೆತ್ ಕಿರುಕುಳ ಕೊಡುತ್ತಿದ್ದಾರೆ. ಅವರ ಹುಚ್ಚಾಟಕ್ಕೆ ನಮ್ಮ ಮಕ್ಕಳು ದೈಹಿಕ ಹಾಗೂ ಮಾನಸಿಕ ನೊಂದಿದ್ದಾರೆ. ಕಳೆದ ಒಂಬತ್ತು ವರ್ಷದಿಂದ ಇದೇ ಶಾಲೆಯಲ್ಲಿ ಓದುತ್ತಿದ್ದಾರೆ. ಆದರೀಗ ಒಂದೂವರೆ ವರ್ಷದ ಹಿಂದೆ ಆಗಮಿಸಿದ ಹೊಸ ಪ್ರಿನ್ಸಿಪಾಲ್ ಪ್ರೀತಿ ಸೆತ್ ಅವರು ನಮ್ಮ ಮಕ್ಕಳಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ನೊಂದ ಪೋಷಕ ಹರಿಶಂಕರ್ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬನ್ನೇರುಘಟ್ಟದ Ryan ಖಾಸಗಿ ಶಾಲೆ ಪ್ರಿನ್ಸಿಪಾಲ್ ಪ್ರೀತಿ ಸೆತ್ ಫೋನ್ ಸಂಪರ್ಕಿಸಿದರೂ ಕರೆ ಸ್ವೀಕರಿಸಲಿಲ್ಲ.
 

click me!