‘ಎಂಟಿಬಿ ಈ ಬಾರಿ ಮುಸ್ಲಿಮರ 300 ವೋಟ್‌ ಪಡೆದ್ರೆ ರಾಜಕೀಯ ನಿವೃತ್ತಿ’

By Kannadaprabha News  |  First Published Nov 3, 2019, 2:48 PM IST

ಉಪ ಚುನಾವಣೆಯಲ್ಲಿ ಮುಸ್ಲಿಂ ಬಾಂದವರಿಂದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್‌ 300 ವೋಟ್‌ ಪಡೆದುಕೊಂಡು ಬಿಟ್ಟರೇ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಶಾಸಕರೋರ್ವರು ಸವಾಲ್ ಹಾಕಿದ್ದಾರೆ. 


ಸೂಲಿಬೆಲೆ [ನ.03]:  ಹೊಸಕೋಟೆ ಉಪ ಚುನಾವಣೆಯಲ್ಲಿ ಮುಸ್ಲಿಂ ಬಾಂದವರಿಂದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್‌ 300 ವೋಟ್‌ ಪಡೆದುಕೊಂಡು ಬಿಟ್ಟರೇ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಹೆಬ್ಬಾಳ ಶಾಸಕ ಬೈರತಿ ಸುರೇಶ್‌ ಸವಾಲ್‌ ಹಾಕಿದ್ದಾರೆ.

ಹೊಸಕೋಟೆಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಪಕ್ಷದ ಚುನಾವಣೆ ವೀಕ್ಷಕ ವಿಷ್ಣುನಾಥ್‌ ಅವರೊಂದಿಗಿನ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಜಾತಿ ಜಾತಿಗಳ ನಡುವೆ ಎತ್ತಿಕಟ್ಟುವ ಕೆಲಸವನ್ನು ಎಂಟಿಬಿ ಮಾಡುತ್ತಿದ್ದಾರೆ. ಮತದಾರರು ಇದನ್ನು ಗಮನಿಸಿ ಬಿಜೆಪಿಯನ್ನು ದೂರವಿಡಬೇಕು. ನಾವು ಕಟ್ಟಿದ ಕಾಂಗ್ರೆಸ್‌ ಪಕ್ಷದಲ್ಲಿ ಸಿದ್ದರಾಮಯ್ಯ ಬಂದು ಸೇರಿಕೊಂಡರು ಎಂಬುದನ್ನು ಖಂಡಿಸಿದ ಬೈರತಿ ಸುರೇಶ್‌, 18 ವರ್ಷಗಳಿಂದಲೂ ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದಲ್ಲಿದ್ದಾರೆ. ಇವರಂತೆ ಗೆದ್ದ ಆರು ತಿಂಗಳಿಗೆ ಪಕ್ಷ ಬದಲಿಸಲಿಲ್ಲ. ಬಿಜೆಪಿಯನ್ನು ದೂರವಿಟ್ಟು ದೇಶಕ್ಕೆ ಉತ್ತಮ ಭವಿಷ್ಯವನ್ನು ರೂಪಿಸಬೇಕಿದೆ. ಈ ಬಾರಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದರು.

Latest Videos

undefined

ಡಿಕೆ ಸಹೋ​ದ​ರ​ರಿಗೆ ಹೆದರಿ ಕನ​ಕ​ಪುರ ತೊರೆದ ಬಿಜೆ​ಪಿ​ ಅ​ಭ್ಯ​ರ್ಥಿ​ಗಳು!...

ಮಾಜಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ,ಈ ಉಪ ಚುನಾವಣೆಯ ಫಲಿತಾಂಶ ಭವಿಷ್ಯದ ರಾಜಕಾರಣವನ್ನು ನಿರ್ಧಾರ ಮಾಡುತ್ತೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಬೇಕು ಅಂದರೆ ಚುನಾವಣೆಯಲ್ಲಿ ಅಭ್ಯರ್ಥಿಯ ಗೆಲುವಿಗೆ ಉಸ್ತುವಾರಿಗಳು ಸೇರಿ ಶ್ರಮವಹಿಸಿ ಕೆಲಸ ಮಾಡಬೇಕು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಪಿಸಿಸಿಯಿಂದ ಬರುವ ಮುಖಂಡರು ಆಯಾ ಗ್ರಾಪಂ ವ್ಯಾಪ್ತಿಯಲ್ಲಿರುವ ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಬಲಪಡಿಸುವ ಕೆಲಸವನ್ನು ಕೆಪಿಸಿಸಿಯಿಂದ ಬರುವ ಉಸ್ತುವಾರಿಗಳು ಮಾಡಬೇಕು. ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿ. ಗ್ರಾಪಂ ಮತ್ತು ಹೋಬಳಿ ಮಟ್ಟದ ಸಭೆಗಳನ್ನು ಆಯೋಜಿಸಬೇಕು. ಈ ಹಿಂದೆ ಪಕ್ಷದಲ್ಲಿ ಗೆದ್ದವರು ಪಕ್ಷಾಂತರ ಮಾಡಿದ್ದರೂ ಸಹ ಆನೇಕ ಮುಖಂಡರು ಕಾಂಗ್ರೆಸ್‌ ಗೆ ಬೆಂಬಲವಾಗಿ ನಿಂತಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ದುಡಿಯಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು, ಕಾಂಗ್ರೆಸ್‌ ಪಕ್ಷದ ಚುನಾವಣೆ ವೀಕ್ಷಕ ವಿಷ್ಣುನಾಥ್‌, ಕಾಂಗ್ರೆಸ್‌ ಪಕ್ಷದ ಹೊಸಕೋಟೆ ಅಭ್ಯರ್ಥಿ ಪದ್ಮಾವತಿ ಸುರೇಶ್‌, ಮಾಜಿ ಬಿಬಿಎಂಪಿ ಸದಸ್ಯ ಪಿಳ್ಳಣ್ಣ, ಜಿಲ್ಲಾಧ್ಯಕ್ಷ ಮುನಿಶಾಮಣ್ಣ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

click me!