ಹೊಸಕೋಟೆ ಕ್ಷೇತ್ರದಲ್ಲಿ ಶೀಘ್ರ ಉಪ ಚುನಾವಣೆ ನಡೆಯಲಿದ್ದು, ಇಲ್ಲಿ ಟಿಕೆಟ್ ಜಟಾಪಟಿ ಜೋರಾಗಿದ್ದು, ಬಿಜೆಪಿ ಪಾಳಯದಲ್ಲಿ ತಳಮಳ ಜೋರಾಗಿದೆ.
ಹೊಸಕೋಟೆ [ನ.02] : ಈಗಲೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಒಂದು ವೇಳೆ ಉಪ ಚುನಾವಣೆಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗದೆ ಹೋದರೆ ಹೊಸ ಚಿಹ್ನೆಯಡಿ ಸ್ಪರ್ಧೆ ಮಾಡುತ್ತೇನೆಂದು ಬಿಜೆಪಿ ಯುವಮೋರ್ಚ ಕಾರ್ಯದರ್ಶಿ ಶರತ್ ಬಚ್ಚೇಗೌಡ ಚುನಾವಣಾ ಪ್ರಚಾರದ ಸಂಧರ್ಭದಲ್ಲಿ ಘೋಷಣೆ ಮಾಡಿದ್ದಾರೆ.
ಹೊಸಕೋಟೆ ತಾಲೂಕಿನ ಅನುಗೊಂಡಹಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಂಸದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಭಾವನಾತ್ಮಕ ಜನರಿಗೆ ತಮಗೆ ಬೆಂಬಲ ನೀಡಲು ಕೇಳಿದರು.
undefined
ಉಪಚುನಾವಣೆಗೆ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಕಾಯುತ್ತಿದ್ದೇನೆ. ಕೊಡದೆ ಇದ್ದಲ್ಲಿ ಹೊಸ ಚಿಹ್ನೆ ಮೂಲಕ ಕಣಕ್ಕೆ ಇಳಿಯುತ್ತೇನೆ. ಆಗ ನನ್ನ ತಂದೆ ಬಚ್ಚೇಗೌಡರು ಪ್ರಚಾರಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದರು.
ಇನ್ನು ನೀವೆಲ್ಲ ಬಂದು ಬಚ್ಚೇಗೌಡರಾಗಿ ಪ್ರಚಾರ ಮಾಡಿ ನನ್ನ ಗೆಲುವಿಗೆ ಕಾರಣರಾಗಬೇಕೆಂದು ಬೆಂಬಲಿಗರಲ್ಲಿ ಕೇಳಿಕೊಂಡರು. ಇನ್ನು ಕ್ಷೇತ್ರದಲ್ಲಿ ಇಷ್ಟು ವರ್ಷಗಳ ಕಾಲ ಪಕ್ಷವನ್ನು ಕಟ್ಟಿ ಬೆಳೆಸಿ ಪೊಲೀಸ್ ಠಾಣೆಗಳಲ್ಲಿ ಕೇಸುಗಳನ್ನು ಹಾಕಿಸಿಕೊಂಡು ಓಡಾಡಿದವರಿಗೆ ಇಂದು ವಂಚನೆಯಾಗಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪಕ್ಷವನ್ನು ಕಟ್ಟಿ ಬೆಳೆಸಿದವರಿಗೆ ಇಂದು ಟಿಕೆಟ್ ಸಿಗುತ್ತಿಲ್ಲ. ಆದ್ದರಿಂದ ಟಿಕೆಟ್ ಸಿಗದ ಸಂಧರ್ಭದಲ್ಲಿ ಹೊಸ ಚಿಹ್ನೆ ಮೂಲಕ ಸ್ಪರ್ಧೆ ಖಚಿತವಾಗಿದ್ದು ಆಗ ಬಚ್ಚೇಗೌಡರು ಪಕ್ಷ ಬಿಟ್ಟು ನನ್ನ ಪರ ನಿಲ್ಲಲು ಆಗುವುದಿಲ್ಲ. ನೀವೆ ನನ್ನ ಕುಟುಂಬವಾಗಿ ಕೆಲಸ ಮಾಡಿ ಎಂದರು.
ಎಂಟಿಬಿ ನಾಗರಾಜ್ ಅನರ್ಹತೆಯಿಂದ ಹೊಸಕೋಟೆ ಕ್ಷೇತ್ರ ತೆರವಾಗಿದ್ದು, ಡಿಸೆಂಬರ್ 5ಕ್ಕೆ ಚುನಾವಣೆ ನಡೆಯಲಿದೆ. ಇದೀಘ ಇಲ್ಲಿ ಟಿಕೆಟ್ ಜಟಾಪಟಿ ತೀವ್ರವಾಗಿದೆ.