
ಆನೇಕಲ್ (ಫೆ.21) ಮೂವರು ಅಪ್ರಾಪ್ತ ಹೆಣ್ಣುಮಕ್ಕಳಿಗೆ 64 ವರ್ಷದ ಮುದುಕ ಲೈ0ಗಿಕ ಕಿರುಕುಳ ನೀಡಿದ ಘಟನೆ ಅನೇಕಲ್‌ನಲ್ಲಿ ನಡೆದಿದೆ.ಈ ಮದುಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಸ್ಫೋಟಕ ಮಾಹಿತಿ ಬಯಲಾಗಿದೆ. 2ನೇ ತರಗತಿ, ಮೂರನೇ ತರಗತಿ ಸೇರಿ ಪುಟಾಣಿ ಹೆಣ್ಣುಮಕ್ಕಳಿಗೆ ಲೈ0ಗಿಕ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ. ಮೂರಕ್ಕೂ ಹೆಚ್ಚು ಅಪ್ರಾಪ್ತ ಹೆಣ್ಣುಮಕ್ಕಳಿಗೆ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ.
ಕೆಲ ಪೋಷಕರಿಗೆ ಬೇಗನೆ ಕೂಲಿ ಕೆಲಸಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಮಕ್ಕಳನ್ನು ಬೆಳಗ್ಗೆ 8.30 ಹೊತ್ತಿಗೆ ಶಾಲೆಗೆ ಬಿಟ್ಟು ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಶಾಲೆ ಆರಂಭಗೊಳ್ಳುವ ಸಮಯ ಬೆಳಗ್ಗೆ 10 ಗಂಟೆಗೆ. ಬೇಗನೆ ಶಾಲೆಗೆ ಬರುತ್ತಿದ್ದ ಮಕ್ಕಳನ್ನೇ ಈ ಕಾಮುಕ ವೃದ್ಧ ಟಾರ್ಗೆಟ್ ಮಾಡಿದ್ದ. ಬೆಳಗ್ಗೆ ಶಾಲೆಯಲ್ಲಿ ಮಕ್ಕಳು, ಸಿಬ್ಬಂದಿಗಳು ಇಲ್ಲದಿರುವುದರಿಂದ ಇದೇ ಸಮಯದಲ್ಲಿ ಹೆಣ್ಣುಮಕ್ಕಳಿಗೆ ಚಾಕೋಲೇಟ್ ಆಸೆ ತೋರಿಸಿ ಲೈ0ಗಿಕ ಕಿರುಕುಳ ನೀಡಿದ್ದಾನೆ.
ಫೆಬ್ರವರಿ 2ದ0 ರಂದು ಬೆಳಗ್ಗೆ 8 .15ರ ಸುಮಾರಿಗೆ 2ನೇ ತರಗತಿ ಹೆಣ್ಣುಮಗುವಿನ ಪೋಷಕರು ಮಗಳನ್ನು ಶಾಲೆಗೆ ಬಿಟ್ಟಿದ್ದಾರೆ. ಬಳಿಕ ಕೂಲಿ ಕೆಸಕ್ಕೆ ತೆರಳಿದ್ದಾಳೆ. ಖುಷಿ ಖುಷಿಯಾಗಿ ಶಾಲೆಗೆ ತೆರಳಿ ಬರುತ್ತಿದ್ದ 2ನೇ ತರಗತಿ ವಿದ್ಯಾರ್ಥಿನಿ ಮನೆಗೆ ಮರಳಿದಾಗ ಮಾನಸಿಕವಾಗಿ ಕುಗ್ಗಿ ಹೋಗಿರುವುದನ್ನು ಪೋಷಕರು ಗಮನಿಸಿದ್ದಾರೆ. ಪುಟಾಣಿ ಮಗು ಒಂದೆಡೆ ಅಳುತ್ತಾ, ಹೇಳಲು ಆಗದೆ ಭಯದಿಂದ ತೀವ್ರವಾಗಿ ಕುಗ್ಗಿ ಹೋಗಿತ್ತು. ಪೋಷಕರು ಸಮಾಧಾನ ಮಾಡಿ ವಿಚಾರಿಸಿದಾಗ ಮಗು ನಡೆದ ಘಟನೆಯನ್ನು ವಿವರಿಸಿದೆ.
ಮಗು ಅಳುತ್ತ, ಭಯದಿಂದ ಘಟನೆ ವಿವರಿಸುತ್ತಿದ್ದಂತೆ ಪೋಷಕರು ಕಂಗಾಲಾಗಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಪೋಷಕರು ಅನೇಕಲ್ ಪೊಲೀಸ್ ಠಾಣೆಗೆ ಧಾವಿಸಿದ್ದಾರೆ. ನಡೆದ ಘಟನೆ ಹೇಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದಾರೆ. ಬಳಿಕ ಇಂದು ಬೆಳಗ್ಗೆ ಪೊಲೀಸ್ ತಂಡ ಶಾಲೆಯ ಸುತ್ತ ಮಫ್ತಿಯಲ್ಲಿ ಹಾಜರಾಗಿದೆ.
ಇಂದು ಬೆಳಗ್ಗೆಯೂ ಬೇಗ ಬರುವ ವಿದ್ಯಾರ್ಥಿನಿಯರು ಟಾರ್ಗೆಟ್ ಮಾಡಲು ವೃದ್ಧ ರೆಡಿಯಾಗಿ ನಿಂತಿದ್ದ. ಕಾರ್ಯಪ್ರವೃತ್ತರಾದ ಪೊಲೀಸರು ವೃದ್ಧನ ಬಂಧಿಸಿದ್ದಾರೆ. ಈತನ ಮೇಲೆ ಪೋಕ್ಸೋ ಕೇಸ್ ದಾಖಲಿಸಲಾಗಿದೆ. ವಿಚಾರಣೆ ನಡೆಸಿದಾಗ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಮೂರಕ್ಕೂ ಹೆಚ್ಚು ಅಪ್ರಾಪ್ತ ಹೆಣ್ಣುಮಕ್ಕಳಿಗೆ ಕಿರುಕಳ ನೀಡಿರುವುದು ಬೆಳಕಿಗೆ ಬಂದಿದೆ.