ಹಿರೇಬಾಗೇವಾಡಿಯಲ್ಲಿ ಹಳ್ಳದ ಪ್ರವಾಹಕ್ಕೆ ಸಿಕ್ಕಿ ಮಹಿಳೆ ಸಾವು

By Web DeskFirst Published Oct 15, 2019, 10:04 AM IST
Highlights

ಮಳೆಗೆ ಬೋರಾಡಿ ಹರೆಯುತ್ತಿದ್ದ ಹಳ್ಳ ದಾಟಲು ಯತ್ನಿಸಿದ ಮಹಿಳೆಯೊಬ್ಬರು ಕಾಲು ಜಾರಿ ಬಿದ್ದು ಸಾವು|  ಶೀಗೆ ಹುಣ್ಣಿಮೆ ನಿಮಿತ್ತ ಹೊಲಕ್ಕೆ ಹೋಗಿ ಸಂಜೆ ಮರಳಿ ಮನೆಗೆ ಬರುವಾಗ ಧಾರಾಕಾರವಾಗಿ ಸುರಿದ ಮಳೆ| ಸಿದ್ದನಬಾವಿ ಹಳ್ಳಕ್ಕೆ ನೀರಿಗೆ ಪ್ರವಾಹ ಹೆಚ್ಚಾಗಿತ್ತು| ಆಗ ಮಹಿಳೆ  ಕುಸುಮವ್ವ ಹಳ್ಳ ದಾಟಲು ಯತ್ನಿಸಿದಾಗ ನೀರಿನ ಸೆಳೆವಿಗೆ ಸಿಕ್ಕು ನೀರಿನಲ್ಲಿ ಕೊಚ್ಚಿ ಹೋಗಿದ್ದಳು| ರಾತ್ರಿ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ಹುಡುಕಾಡಿದ್ದರು ಮಹಿಳೆ ಸಿಕ್ಕಿರಲಿಲ್ಲ|
 

ಹಿರೇಬಾಗೇವಾಡಿ[ಅ.15]: ಮಳೆಗೆ ಬೋರಾಡಿ ಹರೆಯುತ್ತಿದ್ದ ಹಳ್ಳ ದಾಟಲು ಯತ್ನಿಸಿದ ಮಹಿಳೆಯೊಬ್ಬರು ಕಾಲು ಜಾರಿ ಬಿದ್ದು ನೀರಿನ ಪ್ರವಾಹದಲ್ಲಿ ತೇಲಿಹೋಗಿ ಸೋಮವಾರ ಶವವಾಗಿ ಪತ್ತೆಯಾದ ಘಟನೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಬಳಿಯ ಸಿದ್ಧನ ಬಾವಿ ಹಳ್ಳದಲ್ಲಿ ನಡೆದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೃತ ಮಹಿಳೆಯನ್ನು ಹಿರೇಬಾಗೇವಾಡಿ ಗ್ರಾಮದ ನೇಕಾರ ಓಣಿಯ ನಿವಾಸಿ ಕುಸುಮವ್ವ ಗುರಪ್ಪ ಕುಕಡೊಳ್ಳಿ (62) ಎಂದು ಗುರುತಿಸಲಾಗಿದೆ.  ಭಾನುವಾರ ಶೀಗೆ ಹುಣ್ಣಿಮೆ ನಿಮಿತ್ತ ಹೊಲಕ್ಕೆ ಹೋಗಿ ಸಂಜೆ ಮರಳಿ ಮನೆಗೆ ಬರುವಾಗ ಧಾರಾಕಾರವಾಗಿ ಸುರಿದ ಮಳೆಗೆ ಸಿದ್ದನಬಾವಿ ಹಳ್ಳಕ್ಕೆ ನೀರಿಗೆ ಪ್ರವಾಹ ಹೆಚ್ಚಾಗಿತ್ತು. ಆಗ ಮಹಿಳೆ  ಕುಸುಮವ್ವ ಹಳ್ಳ ದಾಟಲು ಯತ್ನಿಸಿದಾಗ ನೀರಿನ ಸೆಳೆವಿಗೆ ಸಿಕ್ಕು ನೀರಿನಲ್ಲಿ ಕೊಚ್ಚಿ ಹೋಗಿದ್ದಳು. ರಾತ್ರಿ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ಹುಡುಕಾಡಿದ್ದರು ಮಹಿಳೆ ಸಿಕ್ಕಿರಲಿಲ್ಲ.

ಸೋಮವಾರ ಬೆಳಗ್ಗೆ ಗ್ರಾಮದ ರೈತ ದುಂಡಪ್ಪ ಹಂಚಿನಮನಿ ಅವರ ಹೊಲದ ಸಮೀಪ ಮಹಿಳೆಯ ಮೃತದೇಹ ಪತ್ತೆಯಗಿದೆ. ಮಹಿಳೆ ಕುಟುಂಬದವರು ಬಂದು ಗುರುತಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಪೊಲೀಸರು ಬಂದು ಪಂಚನಾಮೆ ಮಾಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

click me!