ಬೆಳಗಾವಿ: ಪಾಳು ಬಿದ್ದ ಬೋರ್‌ವೆಲ್‌ನಲ್ಲಿ ಏಕಾಏಕಿ ಚಿಮ್ಮಿದ ನೀರು..!

By Web DeskFirst Published Oct 8, 2019, 3:12 PM IST
Highlights

ನೀರೇ ಇಲ್ಲ ಎಂದು ಕಡೆಗಣಿಸಿದ್ದ ಬೋರ್‌ವೆಲ್‌ನಲ್ಲಿ ಸ್ವಚ್ಛ ನೀರು ಚಿಮ್ಮಿ ಬಂದಿದೆ. ಬೆಳಗಾವಿಯಲ್ಲಿ ಪಾಳು ಬಿದ್ದಿದ್ದ ಬೋರ್‌ವೆಲ್‌ನಲ್ಲಿ ಈಗ ಯಥೇಚ್ಛವಾಗಿ ನೀರು ತುಂಬಿದ್ದು, ರಭಸವಾಗಿ ನೀರು ಚಿಮ್ಮಿ ಹರಿಯುತ್ತಿದೆ. ಗ್ರಾಮಸ್ಥರೂ ಫುಲ್ ಖುಷಿಯಾಗಿದ್ದಾರೆ.

ಬೆಳಗಾವಿ(ಅ.08): ನೀರೇ ಇಲ್ಲ ಎಂದು ಕಡೆಗಣಿಸಿದ್ದ ಬೋರ್‌ವೆಲ್‌ನಲ್ಲಿ ಸ್ವಚ್ಛ ನೀರು ಚಿಮ್ಮಿ ಬಂದಿದೆ. ಬೆಳಗಾವಿಯಲ್ಲಿ ಪಾಳು ಬಿದ್ದಿದ್ದ ಬೋರ್‌ವೆಲ್‌ನಲ್ಲಿ ಈಗ ಯಥೇಚ್ಛವಾಗಿ ನೀರು ತುಂಬಿದ್ದು, ರಭಸವಾಗಿ ನೀರು ಚಿಮ್ಮಿ ಹರಿಯುತ್ತಿದೆ. ಗ್ರಾಮಸ್ಥರೂ ಫುಲ್ ಖುಷಿಯಾಗಿದ್ದಾರೆ.

ಅಂತರ್ಜಲ ಕುಸಿತದಿಂದ ನಿಷ್ಪ್ರಯೋಜಕವಾಗಿದ್ದ ಬೋರ್‌ವೆಲ್‌ ಸಂಪೂರ್ಣ ತುಂಬಿ ನೀರು ತುಂಬಿ ಹರಿಯುತ್ತಿದ್ದು, ಇದನ್ನು ವೀಕ್ಷಿಸಲೆಂದೇ ಜನ ಬರುತ್ತಿದ್ದಾರೆ. ಏಕಾಏಕಿ ನೀರು ಧುಮ್ಮಿಕ್ಕಿ ಹೊರಬರುತ್ತಿದ್ದು, ಗ್ರಾಮಸ್ಥರು ಖುಷಿಯಾಗಿದ್ದಾರೆ.

ನೆರೆ ಪರಿಹಾರ: ಅಂಕಿ, ಸಂಖ್ಯೆ ಗೊತ್ತಿಲ್ದೆ ಟೀಕೆ ಮಾಡ್ತಾರೆ, ಶೆಟ್ಟರ್ ಟಾಂಗ್

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿ ಪಟ್ಟಣದ ಬೋರ್‌ವೆಲ್‌ ಒಂದರಲ್ಲಿ ನೀರು ಹೊರಬರುತ್ತಿದೆ. ಸತತ ಬರದಿಂದ ಅಂತರ್ಜಲ ಮಟ್ಟ ಕುಸಿತಗೊಂಡು ಬೇಸಿಗೆ ಸಮಯದಲ್ಲಿ ಬೋರ್‌ವೆಲ್ ಕಾರ್ಯ ನಿರ್ವಹಿಸುವುದನ್ನು ಸಂಪೂರ್ಣ ಸ್ಥಗಿತಗೊಳಿಸಿತ್ತು.ಈಗ ಏಕಾಏಕಿ ಬೋರ್‌ವೆಲ್ ಮೈತುಂಬಿ ಹರಿಯುತ್ತಿದೆ.

ರಾಜೀನಾಮೆ ನೀಡಿದ JDS ಮುಖಂಡ : ದೇವೇಗೌಡರಿಗೆ ಪತ್ರ ರವಾನೆ

ಸ್ಥಳೀಯ ಜನರು ಬೋರ್‌ವೆಲ್‌ನಲ್ಲಿ ನೀರು ತುಂಬಿರೋದನ್ನು ಅಚ್ಚರಿಯಿಂದ ನೋಡುತ್ತಿದ್ದಾರೆ. ಅಲ್ಲದೇ ಬೋರ್‌ವೆಲ್‌ನಿಂದ ಶುದ್ಧ ನೀರು ಕುಡಿದು ಖುಷಿಪಡುತ್ತಿದ್ದಾರೆ.

"

ನದೀ ತೀರದ ಗ್ರಾಮದಲ್ಲಿಯೂ ಅಂತರ್ಜಲ ಮಟ್ಟ ಏರಿಕೆ:

ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಬೋರವೆಲ್‌ನಲ್ಲಿ ನೀರು ತುಂಬಿದ್ದು, ಭಾರೀ ಮಳೆಗೆ ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ. ನದಿ ತೀರದ ಗ್ರಾಮಗಳಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಾಗಿದೆ. ಹೀಗಾಗಿ ಬೋರ್‌ವೆಲ್‌ಗಳಲ್ಲಿ ನೀರು ಧುಮ್ಮಿಕ್ಕಿ ಹೊರಬರುತ್ತಿದೆ.

ರಾಮದುರ್ಗದಲ್ಲಿ ಭಾವೈಕ್ಯತೆ ಸಾರಿದ ದುರ್ಗಾಮಾತಾ ದೌಡ್‌

click me!