ಪಂಚಭೂತಗಳಲ್ಲಿ ಲೀನರಾದ ಬೆಳಗಾವಿ ಹುತಾತ್ಮ ವೀರಯೋಧ

Published : Nov 10, 2019, 11:58 AM IST
ಪಂಚಭೂತಗಳಲ್ಲಿ ಲೀನರಾದ ಬೆಳಗಾವಿ ಹುತಾತ್ಮ ವೀರಯೋಧ

ಸಾರಾಂಶ

ಸ್ವಗ್ರಾಮ ಬೆಳಗಾವಿಯ ಉಚಗಾಂವನಲ್ಲಿ ಅಂತ್ಯಕ್ರಿಯೆ|ಜಮ್ಮು-ಕಾಶ್ಮೀರದಲ್ಲಿ  ಪಾಕ್ ಸೈನಿಕರು ನಡೆಸಿದ ಅಪ್ರಚೋದಿತ ಗುಂಡಿನ ದಾಳಿ ಹುತಾತ್ಮರಾಗಿದ್ದ ಬೆಳಗಾವಿಯ ಯೋಧ|ಎಂಎಲ್‌ಐಆರ್‌ಸಿ ವತಿಯಿಂದ ಹುತಾತ್ಮ ಯೋಧನಿಗೆ ಗೌರವ|

ಬೆಳಗಾವಿ[ನ.10]: ಜಮ್ಮು-ಕಾಶ್ಮೀರದ ಪೂಂಛ್‌ ಬಳಿ ಪಾಕಿಸ್ತಾನ ಯೋಧರು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ವೀರಮರಣ ಹೊಂದಿದ ವೀರಯೋಧ ರಾಹುಲ್ ಸುಳಗೇಕರ(21) ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಬೆಳಗಾವಿ ತಾಲೂಕಿನ ಉಚಗಾಂವದ ರುದ್ರಭೂಮಿಯಲ್ಲಿ ಶನಿವಾರ ಸರ್ಕಾರಿ ಗೌರವದೊಂದಿಗೆ ನಡೆಯಿತು.

ವಿಶೇಷ ವಿಮಾನದ ಮೂಲಕ ಶನಿವಾರ ಮಧ್ಯಾಹ್ನ 1 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯೋಧನ ಪಾರ್ಥಿವ ಶರೀರಕ್ಕೆ ಗಣ್ಯಾತಿ ಗಣ್ಯರು ಪುಷ್ಪಗುಚ್ಛ ವಿರಿಸಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಎಂಎಲ್‌ಐಆರ್‌ಸಿಯ ವಾಹನದಲ್ಲಿ ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ಮರಾಠ ಲಘು ಪದಾತಿದಳ ಕೇಂದ್ರಕ್ಕೆ ತೆಗೆದುಕೊಂಡು ಹೋಗಲಾಯಿತು.

ಉಗ್ರರೊಂದಿಗೆ ಹೋರಾಡಿ 24 ವರ್ಷದ ಬೆಳಗಾವಿಯ ಯೋಧ ಹುತಾತ್ಮ

ಅಲ್ಲಿ ಎಂಎಲ್‌ಐಆರ್‌ಸಿ ವತಿಯಿಂದ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿ, ಸ್ವಗ್ರಾಮ ಉಚಗಾಂವಗೆ ಪಾರ್ಥಿವ ಶರೀರ ತೆಗೆದುಕೊಂಡು ಬರಲಾಯಿತು. ಹುತಾತ್ಮ ಯೋಧನ ಪಾರ್ಥಿವ ಶರೀರ ಹೊತ್ತೊಯುತ್ತಿದ್ದ ವಾಹನದ ಮಾರ್ಗದಲ್ಲಿ ಗ್ರಾಮದ ಮಹಿಳೆಯರು ರಂಗೋಲಿ ಹಾಕಿ ಸ್ವಾಗತಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ