ಅಪಘಾತ: ಪಂಢರಪುರದ ವಿಠ್ಠಲನ ದರ್ಶನಕ್ಕೆ ತೆರಳುತ್ತಿದ್ದ ಐವರು ಭಕ್ತರ ಸಾವು

Published : Nov 08, 2019, 10:50 AM ISTUpdated : Nov 08, 2019, 11:12 AM IST
ಅಪಘಾತ: ಪಂಢರಪುರದ ವಿಠ್ಠಲನ ದರ್ಶನಕ್ಕೆ ತೆರಳುತ್ತಿದ್ದ ಐವರು ಭಕ್ತರ ಸಾವು

ಸಾರಾಂಶ

ಲಾರಿ, ಟಾಟಾ ಏಸ್ ಮಧ್ಯೆ ಡಿಕ್ಕಿ| ಐವರ ಸಾವು, ಏಳು ಮಂದಿಗೆ ಗಾಯ|ಮಹಾರಾಷ್ಟ್ರದ ಸಾಂಗೋಲ್ಯಾ ಸಮೀಪ ನಡೆದ ದುರ್ಘಟನೆ|ಮೃತರೆಲ್ಲ ಪಂಢರಪುರದ ವಿಠ್ಠಲನ ದರ್ಶನಕ್ಕೆ ತೆರಳುತ್ತಿದ್ದರು| ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರ|  

ಬೆಳಗಾವಿ[ನ.8]: ಲಾರಿ, ಟಾಟಾ ಏಸ್ ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ಐವರು ಭಕ್ತರು ಸಾವನ್ನಪ್ಪಿ, ಏಳು ಮಂದಿ ಗಾಯಗೊಂಡ ಘಟನೆ ಮಹಾರಾಷ್ಟ್ರದ ಸಾಂಗೋಲ್ಯಾ ಸಮೀಪ ಶುಕ್ರವಾರ ನಡೆದಿದೆ. 

ಮೃತರನ್ನ ಬೆಳಗಾವಿ ತಾಲೂಕಿನ ಮಂಡೋಳಿ ಗ್ರಾಮದ ನಾಲ್ವರು ಕೃಷ್ಣ ವಾಮನ ಗಾಂವ್ಕರ (50),ಮಹಾದೇವ ಕಣಬರಕರ (48), ಬಾಳು ಅಂಬೇವಾಡಿಕರ (50), ಅರುಣ ದತ್ತು ಮುತಗೇಕರ (38) ಹಾಗೂ ಹಂಗರಗಾ ಗ್ರಾಮದ ಟಾಟಾ ಏಸ್ ವಾಹನದ ಚಾಲಕ ಮೃತಪಟ್ಟಿದ್ದಾನೆ ಎಂದು ಗುರುತಿಸಲಾಗಿದೆ. ಟಾಟಾ ಏಸ್ ವಾಹನದ ಚಾಲಕನ ಹೆಸರು ತಿಳಿದು ಬಂದಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇವರೆಲ್ಲರೂ ಮಹಾರಾಷ್ಟ್ರದಲ್ಲಿರುವ ಸುಕ್ಷೇತ್ರ ಪಂಢರಪುರದ ವಿಠ್ಠಲನ ದರ್ಶನಕ್ಕೆ ತೆರಳುತ್ತಿದ್ದರು. ಈ ವೇಳೆ ಲಾರಿಯೊಂದು ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಇನ್ನು ಘಟನೆಯಲ್ಲಿ ವಾಹನದಲ್ಲಿದ್ದ ಇನ್ನೂ ಏಳು ಜನರು ಕುಡ ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ