ನಿರುದ್ಯೋಗಿಗಳಿಗೊಂದು ಸಂತಸದ ಸುದ್ದಿ

By Web DeskFirst Published Oct 16, 2019, 11:32 AM IST
Highlights

ರಾಷ್ಟ್ರೀಯ ಸೇನಾ ಶಾಲೆಯ ಮೈದಾನದಲ್ಲಿ ಅ.30ರಿಂದ ನ.5ರವರೆಗೆ ಸೇನೆಯ ಹುದ್ದೆಗಳಿಗೆ ಸೇನಾ ನೇಮಕಾತಿ ರಾರ‍ಯಲಿ| ನ.6 ರಿಂದ 9 ರವರೆಗೆ ದಾಖಲಾತಿಗಳ ಮರುಪರಿಶೀಲನೆ| ಟ್ರೆಡ್‌ ಟೆಸ್ಟ್‌, ಮೆಡ್‌ ಟೆಸ್ಟ್‌ ನಡೆಸಲು ಮಂಡಳಿಯು ಅಂತಿಮ ನಿರ್ಧಾರ ಕೈಗೊಂಡಿದೆ| ಸೈನಿಕ (ಜನರಲ್‌ ಡ್ಯೂಟಿ)ಹುದ್ದೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 45 ರಷ್ಟು ಅಂಕ ಪಡೆದು ಪಾಸಾಗಿರಬೇಕು ಮತ್ತು ಪ್ರತಿ ವಿಷಯದಲ್ಲಿ ಶೇ.33 ರಷ್ಟು ಅಂಕ ಪಡೆದಿರಬೇಕು| ಸೈನಿಕ (ಸಿ ಟ್ರೇಡ್ಸ್‌ಮ್ಯಾನ್‌) ಹುದ್ದೆಗೆ ಎಸ್‌ಎಸ್‌ಎಲ್‌ಸಿ ಉತ್ತಿರ್ಣರಾಗಿರಬೇಕು|

ಬೆಳಗಾವಿ[ಅ.16]: ನಗರದ ರಾಷ್ಟ್ರೀಯ ಸೇನಾ ಶಾಲೆಯ ಮೈದಾನದಲ್ಲಿ ಅ.30ರಿಂದ ನ.5ರವರೆಗೆ ಸೇನೆಯ (Soldier GD, Tradesmen) ಹುದ್ದೆಗಳಿಗೆ ಸೇನಾ ನೇಮಕಾತಿ ರ‌್ಯಾಲಿ ನಡೆಯಲಿದೆ.

ಓಟ ಮತ್ತು ದಾಖಲಾತಿಗಳ ಪರಿಶೀಲನೆ ಹಾಗೂ ದೈಹಿಕ ಪರೀಕ್ಷೆ ಅ.30 ರಂದು (Soldier GD) ಮಹಾರಾಷ್ಟ್ರ, ಅ.31ರಂದು ರಾಜಸ್ತಾನ, ನ.1ರಂದು ಗುಜರಾತ, ದಾದ್ರಾ ಮತ್ತು ನಗರ ಹಾವೇಲಿ, ಗೋವಾ, ದಮನ್‌ ಮತ್ತು ದಿಯು, ನ.2 ರಂದು ಆಂಧ್ರಪ್ರದೇಶ, ತೆಲಂಗಾಣ, 3ರಂದು ತಮಿಳುನಾಡು, ಲಕ್ಷದ್ವೀಪ ಮತ್ತು ಪಾಂಡಿಚೇರಿ, ನ.4ರಂದು ಕರ್ನಾಟಕ ಮತ್ತು ಕೇರಳದಲ್ಲಿ ನಡೆಯಲಿದೆ. ನ.5ರಂದು (Tradesmen) ಆಂಧ್ರಪ್ರದೇಶ, ತೆಲಂಗಾಣ, ಗುಜರಾತ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ರಾಜಸ್ತಾನ ಮತ್ತು ಕೇಂದ್ರ ಪ್ರದೇಶಗಳಾದ ದಾದ್ರಾ ಮತ್ತು ನಗರ ಹವೇಲಿ, ಗೋವಾ, ದಮನ್‌ ಮತ್ತು ದಿಯು, ಲಕ್ಷದ್ವೀಪ ಮತ್ತು ಪಾಂಡಿಚೇರಿ ಅಭ್ಯರ್ಥಿಗಳಿಗೆ ಸೇನಾ ನೇಮಕಾತಿ ರಾರ‍ಯಲಿ ನಡೆಯಲಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನ.6 ರಿಂದ 9 ರವರೆಗೆ ದಾಖಲಾತಿಗಳ ಮರುಪರಿಶೀಲನೆ, ಟ್ರೆಡ್‌ ಟೆಸ್ಟ್‌, ಮೆಡ್‌ ಟೆಸ್ಟ್‌ ನಡೆಸಲು ಮಂಡಳಿಯು ಅಂತಿಮ ನಿರ್ಧಾರ ಕೈಗೊಂಡಿದೆ. ಸೈನಿಕ (ಜನರಲ್‌ ಡ್ಯೂಟಿ)ಹುದ್ದೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 45 ರಷ್ಟು ಅಂಕ ಪಡೆದು ಪಾಸಾಗಿರಬೇಕು ಮತ್ತು ಪ್ರತಿ ವಿಷಯದಲ್ಲಿ ಶೇ.33 ರಷ್ಟು ಅಂಕ ಪಡೆದಿರಬೇಕು, ಸೈನಿಕ (ಸಿ ಟ್ರೇಡ್ಸ್‌ಮ್ಯಾನ್‌) ಹುದ್ದೆಗೆ ಎಸ್‌ಎಸ್‌ಎಲ್‌ಸಿ ಉತ್ತಿರ್ಣರಾಗಿರಬೇಕು (ಹೌಸ್‌ ಕೀಪರ್‌ ಮತ್ತು ಮೆಸ್‌ ಕೀಪರ್‌ಗೆ 8ನೇ ತರಗತಿ ಉತ್ತಿರ್ಣರಾಗಿರಬೇಕು. 

ಸೈನಿಕ (ಗುಮಾಸ್ತ) ಹುದ್ದೆಗೆ ಪಿಯುಸಿಯಲ್ಲಿ ಶೇ.60 ರಷ್ಟು ಅಂಕ ಪಡೆದು ಪಾಸಾಗಿರಬೇಕು ಹಾಗೂ ಕಂಪ್ಯೂಟರ್‌ ಜ್ಞಾನ ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಎತ್ತರ 160 ಸೆ.ಮೀ, ತೂಕ ಕನಿಷ್ಠ 50 ಕೆಜಿ, ಎದೆ ಸುತ್ತಳತೆ ಅಳತೆ 77.5 ಸೆ.ಮೀ ದೇಹಾಡ್ರ್ಯತೆ ಹೊಂದಿರಬೇಕು. ವಯಸ್ಸು ನೇಮಕಾತಿ ದಿನದಂದು 18 ರಿಂದ 42 ವರ್ಷ ತುಂಬಿರಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಸೇನಾ ಪೂರ್ಟಲ WWW.indianarmy.nic.in ವೆಬ್‌ ಸೈಟ್‌ ಮೂಲಕ ಮಾಹಿತಿ ಪಡೆಯಬಹುದು.
 

click me!